
ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ ಚಿತ್ರದಲ್ಲಿ ನಟಿಸಿದ್ದ ನಟಿ ಇಷಾ ಕೊಪ್ಪೀಕರ್ ಹಲವರಿಗೆ ನೆನಪಿರಬೇಕಲ್ಲ!? ಹೌದು ಕನ್ನಡದಲ್ಲಿ ನಟರಾದ ಡಾ ವಿಷ್ಣುವರ್ಧನ್ ಹಾಗು ರವಿಚಂದ್ರನ್ ಅವರೊಂದಿಗೆ ಕ್ರಮವಾಗಿ ಸೂರ್ಯವಂಶ ಹಾಗು ಓ ನನ್ನ ನಲ್ಲೆ ಚಿತ್ರಗಳಲ್ಲಿ ನಟಿಸಿದ್ದ ನಟಿ ಇಷಾ ಕೊಪ್ಪೀಕರ್ ಬಹುಭಾಷಾ ನಟಿ. ಬಾಲಿವುಡ್‌ನಲ್ಲೂ ನಟಿಸಿರುವ ಈಕೆ ತಮಿಳು ಹಾಗೂ ತೆಲುಗಿನ ಕೆಲವು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ನಟಿ ಇಷಾ ಕೊಪ್ಪೀಕರ್ (Isha Koppikar) ಹಾಗೂ ನಟಿ ಪ್ರೀತಿ ಜಿಂಟಾ (Preity Zinta) ಬಹಳ ಆತ್ಮೀಯ ಸ್ನೇಹಿತೆಯರು ಎನ್ನಲಾಗಿದೆ. ಪ್ರೀತಿ ಜಿಂಟಾ ಸ್ನೇಹಿತರಾಗಿದ್ದ ಟಿಮ್ಮಿ ನಾರಂಗ್ (Timmy Narang) ನಿಧಾನಕ್ಕೆ ಇಷಾ ಕೊಪ್ಪೀಕರ್ ಗೆಳಯ ಆದರಂತೆ. ಮದುವೆಯಾಗದೇ ಎಲಿಜೆಬೆಲ್ ಲೇಡಿಯಾಗಿದ್ದ ಇಷಾ ಕೊಪ್ಪೀಕರ್ ಟಮ್ಮಿ ನಾರಂಗ್ ಅವರನ್ನು ಇಷ್ಟಪಟ್ಟು ಮದುವೆಯಾದರು. ಇದಕ್ಕೆ ಪ್ರೀತಿ ಜಿಂಟಾರ ಖುಷಿಯ ಒಪ್ಪಿಗೆಯೂ ಮುದ್ರೆಯೂ ಇತ್ತಂತೆ. 2009ರ ನವೆಂಬರ್‌ನಲ್ಲಿ ಇಷಾ ಕೊಪ್ಪೀಕರ್ ಹಾಗೂ ಟಮ್ಮಿ ನಾರಂಗ್ ಮದುವೆಯಾಗಿದ್ದರು.
ಯಾರಿಗೂ ತಲೆನೋವು ಆಗ್ಬೇಡಿ, ಅನಾಸಿನ್ ಆಗಿರಿ, ಜಗಳವಾಡಬೇಡಿ, ಜಗತ್ತನ್ನೇ ಪ್ರೀತಿಸಿ; ಕತ್ರಿನಾ ಕೈಫ್
ಇಷಾ-ಟಿಮ್ಮಿ ಜೋಡಿಗೆ 9 ವರ್ಷದ ಮುದ್ದಾದ ಮಗಳಿದ್ದಾಳೆ. ಆದರೆ, ಗಂಡ-ಹೆಂಡತಿ ನಡುವೆ ಆಗಾಗಜಗಳ-ಮನಸ್ತಾಪಗಳು ನಡೆದು ಬಳಿಕ ತಣ್ಣಗಾಗುತ್ತಿದ್ದವಂತೆ. ಆದರೆ, ಕಾಲಕಳೆದಂತೆ ಆಗಾಗ ಶುರುವಾಗುತ್ತಿದ್ದ ಜಗಳ ತಣ್ಣಗಾಗುವ ಬದಲು ದಿನಗಳೆದಂತೆ ಹೊತ್ತಿ ಉರಿಯತೊಡಗಿತು ಎನ್ನಲಾಗಿದೆ. ಆಪ್ತರು, ಸಂಬಂಧಿಕರ ಮುಂದೆಲ್ಲ ಹೇಳಿಕೊಂಡು ಪರಿಹಾರ ಕೇಳುವಷ್ಟರ ಮಟ್ಟಿಗೆ ಬೆಳೆದ ಮನಸ್ತಾಪಗಳು ಕೊನೆಕೊನೆಗೆ ಕೊನೆಯಿಲ್ಲದ ದ್ವೇಷವಾಗಿ ಬದಲಾಯಿತು ಎನ್ನಲಾಗಿದೆ.
ಅಪ್ಪನ ಮಾತು ಕೇಳ್ದೇ ಹದಿನೈದು ವರ್ಷ ನರಕ ಅನುಭವಿಸಿದೆ; ಸಿಂಧು ಮದ್ವೆಯಾಗಿದ್ದ ರಘುವೀರ್ ಸತ್ತೇ ಹೋಗ್ಬಿಟ್ರು!
ಅಷ್ಟರಲ್ಲಾಗಲೇ ಇಬ್ಬರ ನಡುವೆ ಡಿವೋರ್ಸ್ ಪ್ಲಾನ್ ರೆಡಿಯಾಗಿತ್ತು ಎನ್ನಲಾಗಿದೆ. ಕೆಲವು ಆಪ್ತರ ಸಮ್ಮುಖದಲ್ಲಿ ಮಾತುಕತೆ ನಡೆದು ಕೊನೆಗೆ ವಿಚ್ಛೇದನ ತೆಗೆದುಕೊಳ್ಳುವುದೇ ಸರಿಯಾ ನಿರ್ಧಾರ ಎಂಬ ನಿರ್ಧಾರಕ್ಕೆ ಬಂದರಂತೆ ಇಷಾ-ಟಿಮ್ಮಿ ಜೋಡಿ. ಹೀಗಾಗಿ ತಮ್ಮ 14 ವರ್ಷದ ದಾಂಪತ್ಯಕ್ಕೆ 2023ರ ನವೆಂಬರ್‌ನಲ್ಲಿ ಡಿವೋರ್ಸ್ ಪಡೆದಕೊಂಡ ಜೋಡಿ ಈಗ ಬೇರೆಬೇರೆ ಬಾಳುವೆ ನಡೆಸಿದ್ದಾರೆ. ಒಟ್ಟಿನಲ್ಲಿ ಪ್ರೀತಿ ಜಿಂಟಾ ಹುಡುಕಿಕೊಟ್ಟ ಗಂಡನಿಂದ ಇಷಾ ಕೊಪ್ಪೀಕರ್ ಬೇರೆಯಾಗಲು ಅವರಿಬ್ಬರ ಮನಸ್ತಾಪ ಕಾರಣವೇ ಹೊರತೂ ಯಾವುದೇ ಒಬ್ಬ ವ್ಯಕ್ತಿಯಲ್ಲ.
ಆಗರ್ಭ ಶ್ರೀಮಂತೆ, ಐರ್ಲೆಂಡ್‌ನಲ್ಲಿ ಮಗ; ಮದ್ವೆಯಾದ್ರೂ ಒಂಟಿ ಬಾಳು, ಹೇಮಾ ಚೌಧರಿಗೆ ಇದೆಂಥ ಗೋಳು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.