ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

By Shruthi Krishna  |  First Published Mar 8, 2023, 11:01 AM IST

ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 


ಸೌತ್ ಸ್ಟಾರ್, ಪ್ರೇಮಂ ಸುಂದರಿ ಸಾಯಿ ಪಲ್ಲವಿ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಲ್ಲು ಅರ್ಜುನ್ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಕೇಳಿಬರುತ್ತಿತ್ತು. ಆದರೀಗ ಅಧಿಕೃತವಾಗಿದೆ ಎನ್ನಲಾಗಿದೆ. ಈಗಾಗಲೇ ಸಾಯಿ ಪಲ್ಲವಿ ಸಿನಿಮಾತಂಡ ಸೇರಿಕೊಂಡಿದ್ದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪುಷ್ಪ-2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸಾಯಿ ಪಲ್ಲವಿ ಕೂಡ ಎಂಟ್ರಿ ಕೊಟ್ಟಿರುವುದನ್ನು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 

ಅಂದಹಾಗೆ ಪುಷ್ಪ-2 ಸಿನಿಮಾದಲ್ಲಿ ಸಾಯಿ ಪಲ್ಲವಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕೇವಲ 10 ದಿನಗಳ ಶೂಟಿಂಗ್ ನಲ್ಲಿ ಸಾಯಿ ಪಲ್ಲವಿ ಪಾತ್ರವನ್ನು ಸೆರೆಹಿಡಿಯಲು ಸಿನಿಮಾತಂಡ ನಿರ್ಧರಿಸಿದೆಯಂತೆ. ಮೂಲಗಳ ಪ್ರಕಾರ ಪುಷ್ಪ-2ನಲ್ಲಿ ಸಾಯಿ ಪಲ್ಲವಿ ಬುಡಕಟ್ಟು ಜನಾಗಂದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

ಡಾಕ್ಟರ್ ಆದ್ರೆ ಫ್ರೀ ಸರ್ವಿಸ್‌ ಮಾಡುವುದಿಲ್ಲ, ಯಾರಿಂದ ಹಣ ಪಡೆಯಬೇಕೆಂದು ಗೊತ್ತಿದೆ: ಸಾಯಿ ಪಲ್ಲವಿ

Tap to resize

Latest Videos

ರಿಲೀಸ್‌ಗೂ ಮೊದಲೇ ಭರ್ಜರಿ ಬ್ಯುಸಿನೆಸ್ 

ಪುಷ್ಪ-2 ಸಿನಿಮಾ ಚಿತ್ರೀಕರಣ ಮುಗಿಯೋ ಮೊದಲೇ 1000 ಕೋಟಿ ಕೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಪುಷ್ಪ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸೌತ್ ಸಿನಿಮಾರಂಗ ಮಾತ್ರವಲ್ಲದೇ ಹಿಂದಿಯಲ್ಲೂ ಉತ್ತಮ ಕಮಾಯಿ ಮಾಡಿತ್ತು. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಪುಷ್ಪ-2 ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ದೊಡ್ಡ ಮಟ್ಟದಲ್ಲಿ ಪುಷ್ಪ-2 ಸಿದ್ಧವಾಗುತ್ತಿದ್ದು ಮುಂದಿನ ವರ್ಷದ ಪ್ರಾರಂಭದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. 

ಜಾರ್ಜಿಯಾ ಜನರು ತುಂಬಾನೇ ಫೇರ್‌, ನನ್ನ ಪಿಂಪಲ್ ಮುಖ ನೋಡಿ ಭಯ ಆಗ್ತಿತ್ತು: ಸಾಯಿ ಪಲ್ಲವಿ

ಏಪ್ರಿಲ್ 8ಕ್ಕೆ ಟೀಸರ್?

ಪುಷ್ಪ-2 ಸಿನಿಮಾದ ಬಗ್ಗೆ ಸಿನಿಮಾತಂಡ ಇದುವರೆಗೂ ಯಾವುದೇ ಅಪ್‌ಡೇಟ್ ನೀಡಿಲ್ಲ. ಹಾಗಾಗಿ ಅಭಿಮಾನಿಗಳು ಸಿನಿಮಾದ ಅಪ್ ಡೇಟ್‌ಗಾಗಿ ಕಾಯುತ್ತಿದ್ದಾರೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾ ಪುಷ್ಪ-2 ಸಿನಿಮಾದ ಟೀಸರ್ ಏಪ್ರಿಲ್ 8ರಂದು ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಆಗಲಿದೆ ಎನ್ನಲಾಗಿದೆ. ಸದ್ಯ ಸಾಯಿ ಪಲ್ಲಿ ಕೂಡ ಎಂಟ್ರಿ ಕೊಟ್ಟಿರುವುದು ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. 
 

click me!