
ಪೊಲೀಸ್ ಠಾಣೆ ಮೆಟ್ಟಿಲೇರಿದ ದಿ ರಾಜಾ ಸಾಬ್ ನಿರ್ಮಾಪಕರು!
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಟನೆಯ 'ದಿ ರಾಜಾ ಸಾಬ್' ಸಿನಿಮಾ (The Raja Saab) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಆದರೆ, ಈ ಚಿತ್ರವು ನಿರೀಕ್ಷೆಯಂತೆ ಹಿಟ್ ಆಗುವ ಬದಲು ಪ್ಲಾಫ್ ಆಗಿದೆ. ಪ್ರಭಾಸ್ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಸಹ ಸಿನಿಮಾ ಚೆನ್ನಾಗಿಲ್ಲದಿದ್ದರೆ ಜನ ನೋಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಚಿತ್ರದ ಬಜೆಟ್ 500 ಕೋಟಿ ರೂಪಾಯಿ ಸಮೀಪವಿದ್ದು, ಕಲೆಕ್ಷನ್ 200 ಕೋಟಿಗೂ ಕಡಿಮೆ ಇದೆ ಎನ್ನಲಾಗುತ್ತಿದೆ. ಅಲ್ಲಿಗೆ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರ ಚಿತ್ರವು ಸೋಲಿನ ರುಚಿ ಉಂಡಿದೆ. ಆದರೆ, ಈ ಚಿತ್ರದ ನಿರ್ಮಾಪಕರು ಗರಂ ಆಗಿದ್ದಾರೆ ಎನ್ನಲಾಗುತ್ತಿದೆ.
ಕಾರಣ, ಪ್ರಭಾಸ್ ಕಾರಣಕ್ಕೆ ಮೊದಲೆರಡು ಮೂರು ದಿನ ಉತ್ತಮ ಕಲೆಕ್ಷನ್ ಮಾಡಿದ 'ದಿ ರಾಜಾ ಸಸಿನಿಮಾ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದೆ. ಮುಖ್ಯವಾಗಿ ಪ್ರಭಾಸ್ ಅಭಿಮಾನಿಗಳೇ ಸಿನಿಮಾ ಬಗ್ಗೆ ಟ್ರೋಲ್ ಮಾಡಲು ಆರಂಭಿಸಿದರು. ಇದೀಗ ಸಿನಿಮಾದ ನಿರ್ಮಾಪಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾರಣ, ಈ ಸಿನಿಮಾದ ಬಗ್ಗೆ ಮಿತಿಮೀರಿದ ಟ್ರೋಲ್‌ಗಳು!.
'ದಿ ರಾಜಾ ಸಾಬ್' ಸಿನಿಮಾ ಹಾರರ್ ಕಾಮಿಡಿ ಸಿನಿಮಾ. ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ದೆವ್ವ, ಭೂತ, ಪಿಶಾಚಿ ಇನ್ನೂ ಏನೇನೋ ತೋರಿಸಲಾಗಿದೆ. ಬಂಗ್ಲೆಯ ಒಳಗೆ ಮೊಸಳೆಯನ್ನು ಸಹ ಸಿನಿಮಾನಲ್ಲಿ ನಿರ್ದೇಶಕರು ತೋರಿಸಿದ್ದು, ಪ್ರಭಾಸ್, ಮೊಸಳೆ ಜೊತೆ ಫೈಟ್ ಮಾಡುವ ದೃಶ್ಯವೂ ಇದೆ. ನೀರು ಬಿಟ್ಟು ಮೊಸಳೆ ಬಂಗ್ಲೆ ಒಳಗೆ ಬಂದು ಅಷ್ಟೂ ಹೊತ್ತು ಫೈಟ್ ಮಾಡುತ್ತಿದೆ ಅಂದರೆ ಅದು ಮೊಸಳೆನಾ ಅಂತ ನಿರ್ದೇಶಕರನ್ನು ಟ್ರೋಳ್ ಮಾಡುತ್ತಿದ್ದಾರೆ ಪ್ರಭಾಸ್ ಫ್ಯಾನ್ಸ್!
ನಿರ್ದೇಶಕರು ತಮ್ಮ ಊಹಗೆ ಬಂದಿದ್ದನ್ನೆಲ್ಲ ಈ ಸಿನಿಮಾನಲ್ಲಿ ತೋರಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಸಖತ್ ಟ್ರೋಲ್ ಸಹ ಆಗುತ್ತಿದೆ. ಇದೀಗ ಈ ಟ್ರೋಲಿಂಗ್ ವಿರುದ್ಧ ಸಿನಿಮಾದ ನಿರ್ಮಾಪಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಶುಕ್ರವಾರದಂದು ನಿರ್ಮಾಪಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ಸಹ ಹೊರಡಿಸಿದ್ದಾರೆ.
'ನಮ್ಮ 'ದಿ ರಾಜಾ ಸಾಬ್' ಸಿನಿಮಾದ ದೃಶ್ಯಗಳನ್ನು ಅವಹೇಳನಕಾರಿಯಾಗಿ ಅನುಕರಿಸುವುದು, ಚಿತ್ರ ಮತ್ತು ಅದರ ನಟರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ಪೋಸ್ಟ್ ಮಾಡುವುದು, ಇಂತಹ ದುರುದ್ದೇಶಪೂರಿತ ಕೃತ್ಯಗಳು ಗೊಂದಲವನ್ನು ಸೃಷ್ಟಿಸುವ ಮತ್ತು ನಕಾರಾತ್ಮಕತೆಯನ್ನು ಹರಡುವ ಉದ್ದೇಶವನ್ನು ಹೊಂದಿವೆ. ಇಂಥಹಾ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ' ಎಂದು ಪೋಸ್ಟ್ ಮಾಡಿದ್ದಾರೆ.
'ದಿ ರಾಜಾ ಸಾಬ್' ಸಿನಿಮಾ ಭಾರೀ ಟ್ರೋಲ್ ಆಗುತ್ತಿದೆ. ಸಿನಿಮಾದ ದೃಶ್ಯಗಳು, ದೃಶ್ಯಗಳ ಸ್ಟ್ರೀನ್ ಶಾಟ್‌ಗಳನ್ನು ಬಳಸಿಕೊಂಡು ಮೀಮ್‌ಗಳನ್ನು ಕ್ರಿಯೇಟ್ ಮಾಡಲಾಗುತ್ತಿದೆ. ಅದರಲ್ಲೂ ಸಿನಿಮಾದ ನಿರ್ದೇಶಕ, ನಿರ್ಮಾಪಕರು ಸಂದರ್ಶನಗಳಲ್ಲಿ ಸಿನಿಮಾ ಬಗ್ಗೆ ಆಡಿರುವ ಮಾತುಗಳನ್ನು ಬಳಸಿಕೊಂಡು ಸಹ ಟ್ರೋಲ್ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ನಿರ್ಮಾಪಕರು ಟ್ರೋಲರ್‌ಗಳ ವಿರುದ್ಧ ದೂರು ನೀಡಿದ್ದಾರೆ.
'ದಿ ರಾಜಾ ಸಾಬ್' ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ದಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್, ಬೊಮನ್ ಇರಾನಿ ಸಹ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿಯೂ ಸಹ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೊತಿದೆ. ಇದೀಗ ನಿರ್ಮಾಪಕರು ಗರಂ ಆಗಿದ್ದಾರೆ. ಮುಂದೇನು ಅಂತ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.