
ಧನುಷ್-ಮೃಣಾಲ್ ಕದ್ದುಮುಚ್ಚಿ ಮದುವೆ ಫೋಟೋ ವೈರಲ್!
ಕಾಲಿವುಡ್ ಸ್ಟಾರ್ ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಾಜಿ ಅಳಿಯ ಧನುಶ್ (Dhanush) ಹಾಗೂ ಬಾಲಿವುಡ್ ಸುಂದರಿ ಮೃಣಾಲ್ ಠಾಕೂರ್ (Mrunal Thakur) ಅವರಿಬ್ಬರ ವಿವಾಹದ ಬಗ್ಗೆ ಈಗ ಭಾರೀ ಚರ್ಚೆಗಳು ನಡೆದಿವೆ. ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಇವರು ಹಸೆಮಣೆ ಏರುತ್ತಾರೆ ಎಂಬ ಗಾಸಿಪ್ ಜೋರಾಗಿದೆ. ಆದರೆ, ಈಗಾಗಲೇ ಈ ಜೋಡಿ ಕದ್ದುಮುಚ್ಚಿ, ಆದರೆ ಶಾಸತ್ರೋಕ್ತವಾಗಿ ಮದುವೆ ಅಗಿದ್ದಾರೆ. ಆದರೆ ಅಧಿಕೃತವಾಗಿ ಪ್ರೇಮಿಗಳ ದಿನ ಅಂದರೆ 14 ಫೆಬ್ರವರಿ 2026ರಂದು ಮತ್ತೆ ಜಗತ್ತಿನ ಮುಂದೆ ಹಾರ ಬದಲಾಯಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸಿಕ್ಕ ಮಾಹಿತಿ ಪ್ರಕಾರ, ಮೃಣಾಲ್ ಠಾಕೂರ್ ಹಾಗೂ ಧನುಷ್ ಮದುವೆಗೆ ಆಪ್ತರು ಹಾಗೂ ಚಿತ್ರರಂಗದವರು ಭಾಗಿ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಮತ್ತೊಂದು ಮೂಲದ ಪ್ರಕಾರ, ಧನುಶ್ ಹಾಗೂ ಮೃಣಾಲ್ ಕದ್ದು ಮುಚ್ಚಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. ಆದರೆ, ಸುದ್ದಿಯ ಸತ್ಯಾಸತ್ಯಯನ್ನು ಪತ್ತೆ ಹಚ್ಚಿದಾಗ ಹೊಸ ಸಂಗತಿ ಬೆಳಕಿಗೆ ಬಂದಿದೆ.
ಧನುಶ್ ಹಾಗೂ ಮೃಣಾಲ್ ಒಟ್ಟಾಗಿ ಇನ್ನೂ ಯಾವುದೇ ಸಿನಿಮಾ ಮಾಡಿಲ್ಲ. ಆದರೆ, ಇಬ್ಬರ ಮಧ್ಯೆ ಪರಿಚಯ ಆಗಿದೆ. ಇವರ ವಿವಾಹ ಇನ್ನೇನು ನಡೆಯಲಿದೆ ಎನ್ನುವಾಗಲೇ ಈ ಫೋಟೋ ವೈರಲ್ ಆಗಿದೆ. ವೈರಲ್ ಆಗಿರೋ ಆ ಫೋಟೋದಲ್ಲಿ ಧನುಶ್ ಹಾಗೂ ಮೃಣಾಲ್ ಅಕ್ಕ ಪಕ್ಕ ಕುಳಿತಿದ್ದಾರೆ. ಧನುಶ್ ಬಿಳಿ ಬಣ್ಣದ ಪಂಚೆ ಹಾಗೂ ಶರ್ಟ್ ಧರಿಸಿದ್ದಾರೆ. ಮೃಣಾಲ್ ಠಾಕೂರ್ ಸೀರೆ ಉಟ್ಟಿದ್ದು, ಕೂದಲಿಗೆ ಮಲ್ಲಿಗೆ ಹೂ ಮುಡಿದಿದ್ದಾರೆ.
ಈ ಜೋಡಿಯ ಹಿಂಭಾಗದಲ್ಲಿ ನಟರಾದ ದಳಪತಿ ವಿಜಯ್, ಅಜಿತ್, ದುಲ್ಕರ್ ಸಲ್ಮಾನ್, ನಟಿಯರಾದ ಶ್ರುತಿ ಹಾಸನ್, ತ್ರಿಷಾ ಇದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ ರವಿಚಂದರ್ ಕೂಡ ಆ ಫೋಟೋದಲ್ಲಿದ್ದಾರೆ. ಜನವರಿ 22ರಂದು ಈ ಮದುವೆ ನಡೆದಿದೆ ಎಂದು ನ್ಯೂಸ್ ಹಬ್ಬಿಸಲಾಗಿದೆ. ಚೆನ್ನೈನಲ್ಲಿ ಈ ವಿವಾಹ ನಡೆದಿದೆ ಎಂದೂ ಬರೆಯಲಾಗಿದೆ. ಕೊನೆಯಲ್ಲಿ ಇದನ್ನು 'ಎಐನಿಂದ ಮಾಡಿದ ವಿಡಿಯೋ' ಎಂಬ ವಿಶೇಷ ಸೂಚನೆಯನ್ನೂ ಹಾಕಲಾಗಿದೆ. ಈ ವಿಡಿಯೋ ನೋಡಿದ ಅನೇಕರು ಇದು ನಿಜ ಎಂದು ನಂಬಿದ್ದಾರೆ.
ಆದರೆ, ಮುಂದಿನ ತಿಂಗಳು ಅಂದರೆ, 14 ಫೆಬ್ರವರಿ 2026ರಂದು ಮೃಣಾಲ್ ಹಾಗೂ ಧನುಶ್ ಮದುವೆ ನಡೆಯಲಿದೆ ಎಂಬ ಸುದ್ದಿಯಂತೂ ಇದೆ. ಹೈದರಾಬಾದ್ ಈವೇಂಟ್‌ನಲ್ಲಿ ಈ ಇಬ್ಬರೂ ಭೇಟಿ ಮಾಡಿದ್ದಾರೆ. ಬಳಿಕ ಅವರಿಬ್ಬರ ಲವ್ ಅಗಿ ಮದುವೆ ಆಗುವವರೆಗೆ ಮುಂದುವರೆದಿದೆ. ಫೆಬ್ರವರಿ 14 ರಂದು ಈ ಜೋಡಿ ಸಪ್ತಪದಿ ತುಳಿಿಯಲಿದ್ದಾರೆ ಎಂಬ ಮಾಹಿತಿ ಇದೆ. ಅದೇ ತಿಂಗಳು ಎಂದರೆ 26 ಫೆಬ್ರವರಿ 2026ರಂದು ಟಾಲಿವುಡ್ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಕೂಡ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ, ಈ ಎರಡೂ ಮದುವೆಗಳ ಬಗ್ಗೆ ಅಧಿಕೃತ ಸುದ್ದಿ ಇನ್ನೂ ಹೊರಬಂದಿಲ್ಲ.
ಅಂದಹಾಗೆ, ತಮಿಳು ನಟ ಧನುಶ್ ಅವರು ಈ ಮೊದಲು ರಜನಿಕಾಂತ್ ಮಗಳು ಐಶ್ವರ್ಯಾ ಅವರನ್ನು ವಿವಾಹ ಆಗಿದ್ದರು. ಆ ಬಳಿಕ ವಿಚ್ಚೇದನ ಪಡೆದು ದೂರವಾದರು. ಈ ಬೆನ್ನಲ್ಲೇ ಧನುಶ್ ಎರಡನೇ ಮದುವೆಗೆ ರೆಡಿ ಆಗಿದ್ದಾರೆ. ಈಗ ಧನುಷ್‌ಗೆ ಜೋಡಿ ಆಗುತ್ತಿರುವುದು ನಟಿ ಮೃಣಾಲ್ ಠಾಕೂರ್ ಎನ್ನಲಾಗುತ್ತಿದೆ. ಮುಂದೇನು ಆಗಲಿದೆ ಎಂದು ಕಾದು ನೋಡೋಣ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.