ಸರಣಿ ಸೋಲಿನ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಟಿ ಪೂಜಾ ಹೆಗ್ಡೆ

Published : May 20, 2022, 07:13 PM IST
ಸರಣಿ ಸೋಲಿನ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಟಿ ಪೂಜಾ ಹೆಗ್ಡೆ

ಸಾರಾಂಶ

ಟಾಲಿವುಡ್ ಸ್ಟಾರ್‌ಗಳ ಪಾಲಿನ ಲಕ್ಕಿ ನಾಯಕಿ ಎಂದೇ ಗುರುತಿಸಿಕೊಳ್ಳುತ್ತಿದ್ದ ನಟಿ ಪೂಜಾ ಹೆಗ್ಡೆ ನಟನೆಯ ಕಳೆದ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಕಂಡಿವೆ. ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಪೂಜಾ ನಟನೆಯ ಮತ್ತೊಂದು ಸಿನಿಮಾ ಬೀಸ್ಟ್ ಕೂಡ ನಿರೀಕ್ಷೆಯ ಪ್ರತಿಫಲ ಸಿಕ್ಕಿಲ್ಲ. ಬಳಿಕ ಬಂದ ಆಚಾರ್ಯ ಸಿನಿಮಾ ಕೂಡ ಸೋಲು ಕಂಡಿತು. ಹೀಗೆ ಪೂಜಾ ಸಾಲು ಸಾಲು ಸೋಲಿನ ಸುಳಿಗೆ ಸಿಲುಕಿದ್ದರು. ಇದೀಗ ಮೊದಲ ಬಾರಿಗೆ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಬಹುಭಾಷಾ ನಟಿ ಪೂಜಾ ಹೆಗ್ಡೆ(Pooja Hegde) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೂಜಾ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಆದರೂ ಸಿನಿಮಾಗಳ ಆಫರ್ ಕಮ್ಮಿಯಾಗಿಲ್ಲ. ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಪೂಜಾ ಹೆಗ್ಡೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಮೂರು ಭಾಷೆಯಲ್ಲಿ ಬ್ಯುಸಿಯಾಗಿರುವ ಪೂಜಾ ಸದ್ಯ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ಕಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ನಡುವೆ ಪೂಜಾ ಸರಣಿ ಸೋಲಿನ ಬಗ್ಗೆಯೂ ಮಾತನಾಡಿದ್ದಾರೆ.

ಟಾಲಿವುಡ್ ಸ್ಟಾರ್‌ಗಳ ಪಾಲಿನ ಲಕ್ಕಿ ನಾಯಕಿ ಎಂದೇ ಗುರುತಿಸಿಕೊಳ್ಳುತ್ತಿದ್ದ ನಟಿ ಪೂಜಾ ಹೆಗ್ಡೆ ನಟನೆಯ ಕಳೆದ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಕಂಡಿವೆ. ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೀನಾಯ ಸೋಲು ಕಂಡಿತು. ಬಳಿಕ ಪೂಜಾ ನಟನೆಯ ಮತ್ತೊಂದು ಸಿನಿಮಾ ಬೀಸ್ಟ್ ಕೂಡ ನಿರೀಕ್ಷೆಯ ಪ್ರತಿಫಲ ಸಿಕ್ಕಿಲ್ಲ. ಬಳಿಕ ಬಂದ ಆಚಾರ್ಯ ಸಿನಿಮಾ ಕೂಡ ಸೋಲು ಕಂಡಿತು. ಹೀಗೆ ಪೂಜಾ ಸಾಲು ಸಾಲು ಸೋಲಿನ ಸುಳಿಗೆ ಸಿಲುಕಿದ್ದರು. ಇದರಿಂದ ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

'ಇದು ಒಂದು ರೀತಿ ಗೇಮ್. ನಾನು ಆರು ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿದ್ದೀನಿ. ಅದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಏಕೆಂದರೆ ಅದು ತುಂಬಾ ಅಪರೂಪ. ಸತತವಾಗಿ 6 ಹಿಟ್ ಸಿನಿಮಾ ನೀಡುವುದು ಅಸಾಧಾರಣ. ಪ್ರತಿಚಿತ್ರಕ್ಕೂ ಅದರಕ್ಕೆ ಆದ ಹಣೆಬರಹ ಇದೆ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಾನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ರೆ ಫ್ಲಾಪ್ ಸಿನಿಮಾಗಳನ್ನು ಸಹ ಹಾಗೆ ತೆಗೆದುಕೊಳ್ಳಬೇಕು' ಎಂದು ಹೇಳಿದ್ದಾರೆ.

ಪೂಜಾ ಹೆಗ್ಡೆ ಕೈಯಲ್ಲಿ ಸಲ್ಮಾನ್ ಖಾನ್ ಸಿಗ್ನೇಚರ್ ಬ್ರೇಸ್ಲೆಟ್; ಫೋಟೋ ವೈರಲ್

'ನನ್ನ ಪ್ರತಿ ಚಿತ್ರಗಳಲ್ಲೂ ನಾನು ಏನನ್ನು ಮಾಡಿದ್ದೇನೆ ಎನ್ನುವದು ನನಗೆ ಚೆನ್ನಾಗಿ ಗೊತ್ತಿದೆ. ನಾನು ರಾಧೆ ಶ್ಯಾಮ್ ಮಾಡಿದೆ ಏಕೆಂದರೆ ಪಾತ್ರ ಇಷ್ಟ ಆಯ್ತು. ನಾನು ಮಾಡಬೇಕಿದ್ದ ಸಿನಿಮಾ ಅದು. ಕಮರ್ಷಿಯಲ್ ಸಿನಿಮಾಗಳಲ್ಲಿ ನನಗೆ ನಟಿಸಲು ಆಸಕ್ತಿದಾಯಕ ಪಾತ್ರ ಸಿಗುತ್ತಿದೆ' ಎಂದು ಹೇಳಿದ್ದಾರೆ.

'ಆಚಾರ್ಯ ಸಿನಿಮಾದಲ್ಲಿ ನನ್ನ ಅತಿಥಿ ಪಾತ್ರ. ನಾನು ನನ್ನ ಪಾತ್ರ ಇಷ್ಟಪಟ್ಟೆ. ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ಡಿ ಗ್ಲಾಮ್ ಪಾತ್ರವಾಗಿತ್ತು. ಈ ಸಿನಿಮಾದಲ್ಲಿ ನನ್ನ ಪಾತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು. ಆ ಸಿನಿಮಾದಿಂದ ತಂಬಾ ಸಿಕ್ಕಿತು. ಚಿತ್ರೀಕರಣ ಸಮಯದಲ್ಲಿ ತುಂಬಾ ಫನ್ನಿಯಾಗಿತ್ತು. ಇನ್ನು ನೆಲ್ಸನ್ ದಿಲೀಪ್ ಕುಮಾರ್ ಒಳ್ಳೆಯ ನಿರ್ದೇಶಕ, ನಾನು ಡಾಕ್ಟರ್ ಅನ್ನು ಪ್ರೀತಿಸುತ್ತೇನೆ. ನಾನು ಮತ್ತೆ ಅವರ ಜೊತೆ ಕೆಲಸ ಮಾಡಲು ಬಯಸುತ್ತೇನೆ. ಕೊನೆಯದಾಗಿ ನಾವು ಮನರಂಜಕರು ಜನರಲ್ಲಿ ನಗು ತರಿಸಲು ಇಷ್ಟ ಪಡುತ್ತೇವೆ' ಎಂದು ಹೇಳಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಕರಾವಳಿ ಸುಂದರಿ ರೊಮ್ಯಾನ್ಸ್; ಇಲ್ಲಿದೆ ವಿವರ

ಸಿನಿಮಾಗಳು ಸೋತರೂ ಪೂಜಾ ಹೆಗ್ಡೆಗೆ ಅವಕಾಶಗಳು ಕಮ್ಮಿಯಾಗಿಲ್ಲ. ಸಾಲು ಸಾಲು ಸಿನಿಮಾಗಳು ಪೂಜಾ ಕೈಯಲ್ಲಿವೆ. ರಣವೀರ್ ಸಿಂಗ್ ಜೊತೆ ಸರ್ಕಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಸಲ್ಮಾನ್ ಖಾನ್ ಅವರ ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಮೊದಲ ದಿನದ ಚಿತ್ರೀಕರಣ ಫೋಟೋ ಶೇರ್ ಮಾಡಿದ್ದರು. ಸಲ್ಮಾನ್ ಖಾನ್ ಸಿಗ್ನೇಚರ್ ಬ್ರೇಸ್ಲೆಟ್ ಧರಿಸಿ ಪೋಸ್ ಕೊಟ್ಟಿದ್ದರು. ಇನ್ನು ಮಹೇಶ್ ಬಾಬು ಜೊತೆ ಮತ್ತೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನು ಅಧಿಕೃತ ಮಾಹಿಚಿ ಬಹಿರಂಗ ಪಡಿಸಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?