Review; ಸೆಲ್ಫಿ ಮಮ್ಮಿ, ಗೂಗಲ್‌ ಡ್ಯಾಡಿ ಮಧ್ಯೆ ಮೊಬೈಲ್‌ ಮಕ್ಕಳು

By Kannadaprabha NewsFirst Published May 14, 2022, 11:08 AM IST
Highlights

ಮೊಬೈಲ್‌ ಇಲ್ಲದೆ ಎಷ್ಟುಗಂಟೆ ಇರಲು ಸಾಧ್ಯ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಬಹುತೇಕರ ಪ್ರತಿಕ್ರಿಯೆಗಳು ಜಾಮರ್‌ ಒಳಗೆ ಸಿಕ್ಕಿಕೊಳ್ಳುತ್ತವೆ. ಯಾಕೆಂದರೆ ಮನೆ ಇಲ್ಲದೆ ಇರಬಹುದು. ಮೊಬೈಲ್‌ ಇಲ್ಲದೆ ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಆದರೆ, ಇಡೀ ಕುಟುಂಬವೇ ಹೀಗೆ ಮೊಬೈಲ್‌ನಲ್ಲಿ ಮುಳಗಿದರೆ ಏನಾಗುತ್ತದೆ ಎಂಬುದನ್ನು ನಿರ್ದೇಶಕ ಮಧುಚಂದ್ರ ಅವರು ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರದ ಮೂಲಕ ಕೊಂಚ ಹಾಸ್ಯವಾಗಿ ಹೇಳಿದ್ದಾರೆ. ಮೊಬೈಲ್‌ ಸಂಬಂಧಗಳನ್ನು ದೂರ ಮಾಡುತ್ತಿದೆ, ಮೊಬೈಲ್‌ ಆಲೋಚನೆಗಳನ್ನು ಬೆಳೆಸಲ್ಲ, ಮೊಬೈಲ್‌ ಎಂಬುದು ಚಟವಾಗಿದೆ... ಹೀಗೆ ಹತ್ತಾರು ಸಾಮಾಜಿಕ ಕಳಕಳಿಯ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕರು ಮೊಬೈಲ್‌ ಅನಾಹುತಗಳ ಸುತ್ತ ಕತೆ ಹೇಳುತ್ತಾರೆ.

ಚಿತ್ರ: ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ

ತಾರಾಗಣ: ಸೃಜನ್‌ ಲೋಕೇಶ್‌, ಮೇಘನಾ ರಾಜ್‌, ಅಚ್ಯುತ್‌ ಕುಮಾರ್‌, ದತ್ತಣ್ಣ, ಗಿರಿಜಾ ಲೋಕೇಶ್‌, ಮಜಾ ಟಾಕೀಸ್‌ ಪವನ್‌.

ನಿರ್ದೇಶನ: ಮಧುಚಂದ್ರ

ರೇಟಿಂಗ್‌: 3

ಮೊಬೈಲ್‌ ಇಲ್ಲದೆ ಎಷ್ಟುಗಂಟೆ ಇರಲು ಸಾಧ್ಯ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಬಹುತೇಕರ ಪ್ರತಿಕ್ರಿಯೆಗಳು ಜಾಮರ್‌ ಒಳಗೆ ಸಿಕ್ಕಿಕೊಳ್ಳುತ್ತವೆ. ಯಾಕೆಂದರೆ ಮನೆ ಇಲ್ಲದೆ ಇರಬಹುದು. ಮೊಬೈಲ್‌ ಇಲ್ಲದೆ ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಆದರೆ, ಇಡೀ ಕುಟುಂಬವೇ ಹೀಗೆ ಮೊಬೈಲ್‌ನಲ್ಲಿ ಮುಳಗಿದರೆ ಏನಾಗುತ್ತದೆ ಎಂಬುದನ್ನು ನಿರ್ದೇಶಕ ಮಧುಚಂದ್ರ ಅವರು ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರದ ಮೂಲಕ ಕೊಂಚ ಹಾಸ್ಯವಾಗಿ ಹೇಳಿದ್ದಾರೆ. ಮೊಬೈಲ್‌ ಸಂಬಂಧಗಳನ್ನು ದೂರ ಮಾಡುತ್ತಿದೆ, ಮೊಬೈಲ್‌ ಆಲೋಚನೆಗಳನ್ನು ಬೆಳೆಸಲ್ಲ, ಮೊಬೈಲ್‌ ಎಂಬುದು ಚಟವಾಗಿದೆ... ಹೀಗೆ ಹತ್ತಾರು ಸಾಮಾಜಿಕ ಕಳಕಳಿಯ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕರು ಮೊಬೈಲ್‌ ಅನಾಹುತಗಳ ಸುತ್ತ ಕತೆ ಹೇಳುತ್ತಾರೆ.

ಬಾಲಕರಿಂದ ಹಿಡಿದು ಬಾಡಿ ಹೋಗುತ್ತಿರುವ ವಯಸ್ಸಿನವರೆಗೂ ಮೊಬೈಲ್‌ ಬಳಕೆಯ ಚಟ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದನ್ನು ಸಣ್ಣ ಸಣ್ಣ ಸನ್ನಿವೇಶಗಳ ಮೂಲಕ ಹೇಳುತ್ತ, ಕೊನೆಗೆ ಮಾದಕ ಪದಾರ್ಥಗಳಿಂದ ದೂರ ಮಾಡುವ ಕೇಂದ್ರಗಳು ಹುಟ್ಟಿಕೊಂಡಂತೆ ಮುಂದೆ ಮೊಬೈಲ್‌ ಚಟ ನಿವಾರಣಾ ಕೇಂದ್ರಗಳು ಬಂದರೂ ಅಚ್ಚರಿ ಇಲ್ಲವೆಂದು ಎಚ್ಚರಿಸುತ್ತಾರೆ. ಅಲ್ಲದೆ ಮೊಬೈಲ್‌ ಫ್ರೀ ಜೋನ್‌ ಹೆಸರಿನ ಪಾರ್ಕ್ಗಳು ಹುಟ್ಟಿಕೊಂಡು ಇಲ್ಲಿ ದುಡ್ಡು ಕೊಟ್ಟು ಮೊಬೈಲ್‌ ಇಲ್ಲದೆ ಕಾಲ ಕಳೆಯುವ ದಿನಗಳು ದೂರವಿಲ್ಲ ಎಂದು ಅತ್ಯಂತ ಮಾರ್ಮಿಕವಾಗಿ ಹೇಳುವ ಮೂಲಕ ಮನರಂಜನೆ ಮತ್ತು ಸಂದೇಶ ಎರಡನ್ನೂ ಸಮತಟ್ಟಾಗಿ ತೂಗಿಸಿದ್ದಾರೆ ನಿರ್ದೇಶಕರು. ಈ ಕಾರಣಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡಬಹುದಾದ ಸಿನಿಮಾ ಇದು.

ಸಿನಿಮಾದಲ್ಲಿ ಬರುವ ಬಹುತೇಕ ಸನ್ನಿವೇಶಗಳು ಮಾಧ್ಯಮಗಳಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ ನೋಡಿದ, ಕೇಳಿದ ಮತ್ತು ಓದಿದಂತೆ ಕಾಣುತ್ತವೆ. ಅದೇ ಚಿತ್ರದ ಪ್ಲಸ್‌ ಪಾಯಿಂಟ್‌. ಯಾಕೆಂದರೆ ನಿರ್ದೇಶಕರು ಅಪರಿಚಿತ ಎನಿಸುವ ಕತೆ, ಸನ್ನಿವೇಶ, ಘಟನೆಗಳನ್ನು ಇಲ್ಲಿ ಹೇಳಿಲ್ಲ. ಈಗಾಗಲೇ ಗೊತ್ತಿರುವುದನ್ನೇ ಸಿನಿಮಾ ರೂಪದಲ್ಲಿ ತೋರಿಸಿದ್ದಾರೆ. ಸೆಲ್ಫಿ ಮೋಹದ ಒಂದು ಮಗುವಿನ ತಾಯಿ, ಯಾವಾಗಲೂ ಫೋನ್‌ಗೆ ಅಂಟಿಕೊಂಡಿರುವ ತಂದೆ, ಟೀವಿ ಧಾರಾವಾಹಿಗಳಲ್ಲಿ ಮುಳುಗಿರುವ ಅಜ್ಜ, ಮಕ್ಕಳನ್ನು ಬಿಟ್ಟು ವಿದೇಶಗಳಲ್ಲಿ ನೆಲೆಸಿರುವ ದಂಪತಿ, ಶಾಲೆಗಳಲ್ಲಿ ಕದ್ದು ಮುಚ್ಚಿ ಮೊಬೈಲ್‌ ಬಳಸುವ ಮಕ್ಕಳು... ಹೀಗೆ ಹಲವು ಪಾತ್ರ ಮತ್ತು ತಿರುವುಗಳಿಂದ ಚಿತ್ರದ ಕತೆ ಸಾಗುತ್ತದೆ. ಕ್ಯಾಮೆರಾ, ಸಂಕಲನ ಸೇರಿದಂತೆ ತಾಂತ್ರಿಕ ವಿಭಾಗದ ಕಡೆ ಕೊಂಚ ಗಮನ ಕೊಟ್ಟಿದ್ದರೆ ಮತ್ತಷ್ಟುಒಳ್ಳೆಯ ಸಿನಿಮಾ ಇದಾಗುತ್ತಿತ್ತು. ತುಂಬಾ ದಿನಗಳ ನಂತರ ತೆರೆ ಮೇಲೆ ಬಂದಿರುವ ಮೇಘನಾ ರಾಜ್‌ ಅವರು ಅದೇ ಉತ್ಸಾಹದಲ್ಲಿ ನಟಿಸಿದ್ದಾರೆ. ಸೃಜನ್‌ ಲೋಕೇಶ್‌, ಗಿರಿಜಾ ಲೋಕೇಶ್‌, ದತ್ತಣ್ಣ, ಅಚ್ಯುತ್‌ ಕುಮಾರ್‌ ಪಾತ್ರಗಳು ಇಷ್ಟವಾಗುತ್ತವೆ.

click me!