ಭೀಕರ ರಸ್ತೆ ಅಪಘಾತ, ಡಿವೈಡರ್‌ಗೆ ಕಾರು ಡಿಕ್ಕಿ; 'ಪೊನ್ನಿಯಿನ್ ಸೆಲ್ವನ್' ಗಾಯಕಿ ರಕ್ಷಿತಾ ಅದೃಷ್ಟವಶಾತ್ ಪಾರು

Published : May 07, 2023, 05:23 PM IST
ಭೀಕರ ರಸ್ತೆ ಅಪಘಾತ, ಡಿವೈಡರ್‌ಗೆ ಕಾರು ಡಿಕ್ಕಿ; 'ಪೊನ್ನಿಯಿನ್ ಸೆಲ್ವನ್' ಗಾಯಕಿ ರಕ್ಷಿತಾ ಅದೃಷ್ಟವಶಾತ್ ಪಾರು

ಸಾರಾಂಶ

ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕಿ ರಕ್ಷಿತಾ ಸುರೇಶ್ ಕಾರು ಅಪಘಾತಕ್ಕೆ ಈಡಾಗಿದೆ. ಇಂದು ಬೆಳಗ್ಗೆ ( ಮೇ 7) ರಕ್ಷಿತಾ ಸುರೇಶ್ ಚಲಾಯಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಗಾಯಕಿ ರಕ್ಷಿತಾ ಅಪಾಯದಿಂದ ಕಾರಾಗಿದ್ದಾರೆ.

ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕಿ ರಕ್ಷಿತಾ ಸುರೇಶ್ ಕಾರು ಅಪಘಾತಕ್ಕೆ ಈಡಾಗಿದೆ. ಇಂದು ಬೆಳಗ್ಗೆ ( ಮೇ 7) ರಕ್ಷಿತಾ ಸುರೇಶ್ ಚಲಾಯಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಗಾಯಕಿ ರಕ್ಷಿತಾ ಅಪಾಯದಿಂದ ಕಾರಾಗಿದ್ದಾರೆ. ಈ ಘಟನೆ  ಮಲೇಷಿಯಾದಲ್ಲಿ ನಡೆದಿದೆ. ಗಾಯಕಿ ರಕ್ಷಿತಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ವತಃ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದು ಅದೃಷ್ಟವಶಾತ್ ಏನು ಆಗಿಲ್ಲ ಎಂದು ಹೇಳಿದ್ದಾರೆ. ಗಾಯಕಿ ರಕ್ಷಿತಾ ಎಆರ್ ರೆಹಮಾನ್ ಅವರೊಂದಿಗೆ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಹಾಡುವ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದ್ದರು. 

ಮಲೇಷ್ಯಾದಲ್ಲಿ ನಡೆದ ಅಪಘಾತದದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದಾರೆ. 'ನನ್ನ ಸಂಪೂರ್ಣ ಜೀವನ ನನ್ನ ಕಣ್ಣು ಮುಂದೆ ಬಂದು ಹೋಯಿತು' ಎಂದು ಹೇಳಿದ್ದಾರೆ. ಇನ್ನೂ  ಏರ್‌ಬ್ಯಾಗ್‌ಗಳಿಂದಾಗಿ ಜೀವ ಉಳಿಯಿತು ಎಂದು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ರಕ್ಷಿತಾ ಸಾಾಜಿಕ ಜಾಲತಾಣದಲ್ಲಿ, 'ಇಂದು ದೊಡ್ಡ ಅಪಘಾತ ಸಂಭವಿಸಿದೆ. ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ನಾನು ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆಯಿತು. ಕಾರು ಜಖಂಗೊಂಡಿದೆ. ಇಂದು ಬೆಳಿಗ್ಗೆ ಮಲೇಷಿಯಾದಲ್ಲಿ 10 ಸೆಕೆಂಡುಗಳಲ್ಲಿ ನನ್ನ ಇಡೀ ಜೀವನ ನನ್ನ ಮುಂದೆ ಬಂದುಹೋಯಿತು' ಎಂದು ಹೇಳಿದ್ದಾರೆ. 

ವಿಜಯ್-ರಶ್ಮಿಕಾ ಮಂದಣ್ಣ 'ವಾರಿಸು' ಕಲೆಕ್ಷನ್ ಬ್ರೇಕ್ ಮಾಡಿದ 'ಪೊನ್ನಿಯಿನ್ ಸೆಲ್ವನ್-2': ಮೊದಲ ದಿನ ಭರ್ಜರಿ ಗಳಿಕೆ

ಗಾಯಕಿ ರಕ್ಷಿತಾ, 'ಏರ್‌ಬ್ಯಾಗ್‌ಗಳಿಗೆ ಧನ್ಯವಾದ, ಇಲ್ಲವಾಗಿದ್ದರೆ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು.  ಆ ಘಟನೆ ನೆನೆದರೆ ಇನ್ನೂ ನಡುಕ ಬರುತ್ತದೆ. ಆದರೆ ನಾನು, ಚಾಲಕ ಮತ್ತು ಮುಂದಿನ ಸೀಟಿನಲ್ಲಿ ಕುಳಿತಿದ್ದ ಇತರ ಸಹ-ಪ್ರಯಾಣಿಕರು ಸುರಕ್ಷಿತವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕೇವಲ ಸಣ್ಣ ಪುಟ್ಟ ಗಾಯಗಳಾಗಿದೆ. ನಾವು ಜೀವಂತವಾಗಿರುವುದಕ್ಕೆ ಅದೃಷ್ಟವಂತರು' ಎಂದು ಹೇಳಿದ್ದಾರೆ.

ನಟಿ ತ್ರಿಷಾ ಸೆಲ್ವಾರ್ ನೋಡೋಕೆ ಸಿಂಪಲ್ ಆದ್ರೆ ಕೊಟ್ಟಿರೋ ಹಣ ಕೇಳಿದ್ರೆ ಹಾರ್ಟ್‌ ಅಟ್ಯಾಕ್ ಆಗುತ್ತೆ!

ರಕ್ಷಿತಾ ಸುರೇಶ್ ಬಗ್ಗೆ 

ರಕ್ಷಿತಾ ಸುರೇಶ್ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಗಾಯಕಿ. ಲಿಟ್ಲ್ ಸ್ಟಾರ್ ಸಿಂಗರ್ 2009 ರ ವಿಜೇತರಾಗಿದ್ದಾರೆ.  ಸೂಪರ್ ಸಿಂಗರ್ 6 ರ ರಿಯಾಲಿಟಿ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು. ಅನೇಕ ಸಿನಿಮಾ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಹಿಂದಿಯ ಸೂಪರ್ ಹಿಟ್ ಮಿಮಿ, ಕೋಬ್ರಾ, ಪೊನ್ನಿಯಿನ್ ಸೆಲ್ವನ್ ಸೇರಿದಂತೆ ಅನೇಕ ಗೀತೆಗಳಿಕೆ ಧ್ವನಿ ನೀಡಿದ್ದಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ