The Kerala Story: ಟ್ಯಾಕ್ಸ್ ಫ್ರೀ ಮಾಡಲು ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

By Ravi JanekalFirst Published May 7, 2023, 4:04 PM IST
Highlights

ನಿನ್ನೆಯಷ್ಟೇ ‘ದಿ ಕೇರಳ ಸ್ಟೋರಿ' ಚಲನಚಿತ್ರ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ ಕೇರಳ ರಾಜ್ಯದಲ್ಲಿ 32,000 ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಧ್ಯಮದಿಂದ ಕಪಟ, ವಂಚನೆ, ಮೋಸದಿಂದ ಹೇಗೆ ಐಎಸ್‌ಐಎಸ್ ಭಯೋತ್ಪಾದಕರನ್ನಾಗಿ ಮಾಡಲಾಗಿದೆ ಎಂಬ ಸತ್ಯ ಘಟನೆಯನ್ನು ಚಿತ್ರಿಸಲಾಗಿದೆ. ಹಾಗಾಗಿ ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.

ಉಡುಪಿ (ಮೇ.7) : ನಿನ್ನೆಯಷ್ಟೇ ‘ದಿ ಕೇರಳ ಸ್ಟೋರಿ' ಚಲನಚಿತ್ರ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ ಕೇರಳ ರಾಜ್ಯದಲ್ಲಿ 32,000 ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಧ್ಯಮದಿಂದ ಕಪಟ, ವಂಚನೆ, ಮೋಸದಿಂದ ಹೇಗೆ ಐಎಸ್‌ಐಎಸ್ ಭಯೋತ್ಪಾದಕರನ್ನಾಗಿ ಮಾಡಲಾಗಿದೆ ಎಂಬ ಸತ್ಯ ಘಟನೆಯನ್ನು ಚಿತ್ರಿಸಲಾಗಿದೆ. ಹಾಗಾಗಿ ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.

ಇಂದು ಕರ್ನಾಟಕ ರಾಜ್ಯದಲ್ಲಿಯೂ ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್‌(Love jihad)ಗೆ ಬಲಿಯಾಗುತ್ತಿದ್ದಾರೆ. ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು, ದಕ್ಷಿಣ ಕನ್ನಡ ಈ ಜಿಲ್ಲೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ಜಿಹಾದ್ ನಡೆಯುತ್ತಿರುವುದು ಎನ್‌ಐಎ(NIA) ತನಿಖೆಯಲ್ಲೂ ಬೆಳಕಿಗೆ ಬಂದಿದೆ ಎಂದು ಸಮಿತಿ ಗಮನ ಸೆಳೆದಿದೆ.

Latest Videos

 

The Kerala Story: 'ಭಾರತಕ್ಕೆ ಬರೋದೇ ಬೇಡ..; ಐಸಿಸ್‌ ಸೇರಿದ ನಾಲ್ವರು ಕೇರಳ ಮಹಿಳೆಯರ ಕುರಿತು ಸರ್ಕಾರದ ಖಡಕ್‌ ನಿರ್ಧಾರ!

ಆದ್ದರಿಂದ ರಾಜ್ಯದ ಯುವಕರು, ಹಿಂದೂ ಯುವತಿಯರು ಈ ಜಿಹಾದ್‌ನ ಬಗ್ಗೆ ಜಾಗೃತರಾಗಿ ಲವ್ ಜಿಹಾದ್ ತಡೆಯಲು ಪ್ರಯತ್ನಿಸುವುದು ಅತ್ಯಾವಶ್ಯಕವಾಗಿದೆ.
ಈಗಾಗಲೇ ಮಧ್ಯಪ್ರದೇಶ ಸರಕಾರವು ‘ದಿ ಕೇರಳ ಸ್ಟೋರಿ' (The Keral story) ಚಿತ್ರವನ್ನು ಟ್ಯಾಕ್ಸ್ ಫ್ರೀ(Tax free) ಮಾಡಿದೆ. ಅದೇ ರೀತಿಯಲ್ಲಿ ಕರ್ನಾಟಕ(Karnataka)ದಲ್ಲಿಯೂ ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಅದಕ್ಕಾಗಿ ಕರ್ನಾಟಕದಲ್ಲಿಯೂ ಈ ಚಿತ್ರವನ್ನು ಸರಕಾರವು ‘ಟ್ಯಾಕ್ಸ್ ಫ್ರೀ' ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

 

The Kerala Story Review: ಬರಿ ಸಿನಿಮಾವಲ್ಲ, ಹೆಣ್ಣು ಮಕ್ಕಳ ಬದುಕು ಬದಲಿಸೋ ನೈಜಕಥೆ!

click me!