
ಲೈಂಗಿಕ ಕಿರುಕುಳ ಆರೋಪದ ಮೇಲೆ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ನಿರ್ಮಾಪಕ ಅಸಿತ್ ಕುಮಾರ್ ಮೋದಿ, ಆಪರೇಷನ್ ಹೆಡ್ ಸೊಹೈಲ್ ರಮಣಿ ಹಾಗೂ ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 354 ಮತ್ತು 509 ಅಡಿಯಲ್ಲಿ ಪೋವೈ ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ ಇನ್ನೂ ಯಾರ ಬಂಧನವೂ ಆಗಿಲ್ಲ.
ಜನಪ್ರಿಯ ಸಿಟ್ಕಾಮ್ ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾದ ನಟಿ ಜೆನ್ನಿಫರ್ ಮಿಸ್ತ್ರಿ ಬನ್ಸಿವಾ ನಿರ್ಮಾಪಕರ ವಿರುದ್ಧ ದೂರು ನೀಡಿದ್ದರು. ಶೋನಿಂದ ಹೊರಬಂದ ಬಳಿಕ ನಟಿ ಕಾರ್ಯಕ್ರಮದ ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ಧ ಮಾನಸಿಕ ಮತ್ತು ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದರು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಆರೋಪದ ಮೇಲೆ ನಿರ್ಮಾಪಕ ಮೋದಿ, ಪ್ರಾಜೆಕ್ಟ್ ಹೆಡ್ ಸೊಹೈಲ್ ರಮಣಿ ಮತ್ತು ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಅವರು ದೂರು ದಾಖಲಿಸಿದ್ದಾರೆ.
ಒಂಟಿಯಾಗಿ ಬನ್ನಿ ಅಂತಾರೆ, ತಾಯಿ ಜೊತೆ ಬಂದ್ರೆ ಅವಕಾಶ ಇಲ್ಲ; ಚಿತ್ರರಂಗದ ಕಹಿ ಘಟನೆ ಬಿಚ್ಚಿಟ್ಟ ಖ್ಯಾತ ನಟಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಜೆನ್ನಿಫರ್ ಮಿಸ್ತ್ರಿ ಬನ್ಸಿವಾ, ನನ್ನ ಪ್ರಕರಣವನ್ನು ತಾಳ್ಮೆಯಿಂದ ನಿರೀಕ್ಷಿಸಿದ ನಂತರ, ನಾನು ಪೋಲಿಸರ ಬಳಿ ಹೋಗಲು ನಿರ್ಧರಿಸಿದೆ. ನಾನು ರಾತ್ರಿ 7.30 ರಿಂದ 12.30 ರವರೆಗೆ ಪೊವೈ ಪೊಲೀಸ್ ಠಾಣೆಯಲ್ಲಿದ್ದೆ. ಪೊಲೀಸರು ಕೊನೆಗೂ ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ರು' ಎಂದು ಹೇಳಿದ್ದಾರೆ.
MeToo Case: ಶ್ರುತಿ ಹರಿಹರನ್ ಪ್ರಕರಣಕ್ಕೆ ಟ್ವಿಸ್ಟ್, ಬಿ-ರಿಪೋರ್ಟ್ ಚಾಲೆಂಜ್ ಮಾಡಿದ್ದ ನಟಿಗೆ ಕೋರ್ಟ್ ನೋಟಿಸ್
ಈ ಪ್ರಕರಣ ಯಾಕೆ ಇಷ್ಟು ತಡವಾಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ದೂರು ನೀಡಿದ್ದೇನೆ ಮತ್ತು ಹೇಳಿಕೆ ದಾಖಲಿಸಿದ್ದೀನಿ. ನನ್ನ ದೂರಿಗೆ ಆಸಿಸ್ ಮೋದಿ ನೀಡಿದ ಉತ್ತರದಲ್ಲಿ ಕೆಲವು ಗಂಭೀರವಾದ ಆರೋಪ ಮಾಡಿದ್ದಾರೆ' ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಪೊಲೀಸರು ಅಸಿತ್ ಕುಮಾರ್ ಮೋದಿಯನ್ನು ಕರೆಸಿ ವಿಚಾರಣೆ ನಡೆಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.