ಸಿನಿಮಾರಂಗಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದ 'ಕೈದಿ' ನಿರ್ದೇಶಕ: ಲೋಕೇಶ್ ಕನಗರಾಜ್‌ಗೆ ಏನಾಯ್ತು?

Published : Jun 20, 2023, 10:58 AM IST
ಸಿನಿಮಾರಂಗಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದ 'ಕೈದಿ' ನಿರ್ದೇಶಕ: ಲೋಕೇಶ್ ಕನಗರಾಜ್‌ಗೆ ಏನಾಯ್ತು?

ಸಾರಾಂಶ

ಸಿನಿಮಾರಂಗಕ್ಕೆ ಗುಡ್‌ಬೈ ಹೇಳುವುದಾಗಿ 'ಕೈದಿ' ನಿರ್ದೇಶಕ ಲೋಕೇಶ್ ಕನಗರಾಜ್ ಹೇಳಿದ್ದಾರೆ. ಸೂಪರ್ ಹಿಟ್ ಚಿತ್ರ ನೀಡಿರುವ ನಿರ್ದೇಶಕ ಲೋಕೇಶ್ ನಿರ್ಧಾರಕ್ಕೆ ಫ್ಯಾನ್ಸ್ ಶಾಕ್ ಆಗಿದ್ದಾರೆ. 

ಕಾಲಿವುಡ್​ನ ಖ್ಯಾತ ನಿರ್ದೇಶಕ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್​ ಕನಗರಾಜ್​ ಚಿತ್ರರಂಗಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ. ಲೋಕೇಶ್ ಅವರ ಈ ನಿರ್ಧಾರ ಅಚ್ಚರಿ ಮೂಡಿಸಿದೆ. ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಲೋಕೇಶ್ ಭಾರತೀಯ ಚಿತ್ರರಂಗದ ಪ್ರಭಾವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ‘ಕೈದಿ’, ‘ವಿಕ್ರಮ್​’, ‘ಮಾಸ್ಟರ್​’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತಿ ಲೋಕೇಶ್​ ಕನಗರಾಜ್​ ಅವರಿಗೆ ಸಲ್ಲುತ್ತದೆ. ಸದ್ಯ ಲೋಕೇಶ್ ‘ಲಿಯೋ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ದಳಪತಿ ವಿಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಬಹುಬೇಡಿಕೆಯ ನಿರ್ದೇಶಕರಾಗಿರುವ ಲೋಕೇಶ್ ನಿವೃತ್ತಿ ಬಗ್ಗೆ ನೀಡಿದ ಹೇಳಿಕೆ ಅಭಿಮಾನಿಗಳಿಗೆ ಶಾಕ್ ನೀಡಿದಂ. 10 ಸಿನಿಮಾ ಮಾಡಿದ ಬಳಿಕ ನಿರ್ದೇಶನವನ್ನು ತೊರೆಯುವುದಾಗಿ ಲೋಕೇಶ್​ ಕನಗರಾಜ್​ ಹೇಳಿದ್ದಾರೆ. 

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೋಕೇಶ್​ ಕನಗರಾಜ್​ ಈ ವಿಚಾರ ಹೇಳಿದ್ದಾರೆ.‘ನನ್ನ ವೃತ್ತಿಜೀವನದಲ್ಲಿ ಹೆಚ್ಚು ಸಿನಿಮಾ ಮಾಡಬೇಕು ಎಂಬ ಪ್ಲ್ಯಾನ್​ ನನಗೆ ಇಲ್ಲ. ಚಿತ್ರರಂಗದಲ್ಲಿ ಏನಾದರೂ ಮಾಡೋಣ ಅಂತ ನಾನು ಈ ಕ್ಷೇತ್ರಕ್ಕೆ ಬಂದೆ ಅಷ್ಟೇ. ಲೋಕೇಶ್​ ಸಿನಿಮ್ಯಾಟಿಕ್​ ಯೂನಿವರ್ಸ್​ ಸಾಧ್ಯವಾಗಿದ್ದು ನಿರ್ಮಾಪಕರ ನೆರವಿನಿಂದ. ಹಾಗಾಗಿ ನಾನು ನಿರ್ಮಾಪಕರಿಗೆ ಮತ್ತು ಎಲ್ಲ ನಟರ ಅಭಿಮಾನಿಗಳಿಗೆ ಪ್ರಮಾಣಿಕನಾಗಿ ಇರುತ್ತೇನೆ. ನಾನು 10 ಸಿನಿಮಾ ಮಾಡಿದ ಬಳಿಕ ಚಿತ್ರರಂಗ ತೊರೆಯುತ್ತೇನೆ’ ಎಂದು ಲೋಕೇಶ್​ ಕನಗರಾಜ್​ ಹೇಳಿದ್ದಾರೆ.

ನಟನೆಗೆ ಗುಡ್ ಬೈ ಹೇಳ್ತಾರಂತೆ ಸೂಪರ್ ಸ್ಟಾರ್ ರಜನಿಕಾಂತ್: ಏನಾಯ್ತು ತಲೈವಾಗೆ?

ಲೋಕೇಶ್​ ಕನಗರಾಜ್ ಸದ್ಯ  5 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 6ನೇ ಚಿತ್ರವಾಗಿ ‘ಲಿಯೋ’ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್​ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ. ಬಹಳ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ಹಲವು ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ. ಇದು ಕೂಡ ಲೋಕೇಶ್​ ಸಿನಿಮ್ಯಾಟಿಕ್​ ಯೂನಿವರ್ಸ್​ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಇದರ ನಂತರ ಅವರು ಮಾಡಲಿರುವುದು ಇನ್ನು ಕೇವಲ 4 ಚಿತ್ರಗಳು ಮಾತ್ರ ಎಂಬುದನ್ನು ಅಭಿಮಾನಿಗಳಿಗೆ ಒಪ್ಪಿಕೊಳ್ಳಲು ಕಷ್ಟ ಆಗುತ್ತಿದೆ.

ವಿಕ್ರಮ್ ಸಕ್ಸಸ್;ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ಮಾಡಿದ ಕಮಲ್ ಹಾಸನ್

ಲೋಕೇಶ್​ ಕನಗರಾಜ್​ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ಸ್ಟಾರ್​ ನಟರು ಕೂಡ ಬಯಸುತ್ತಿದ್ದಾರೆ. ಇಂಥ ಸಮಯದಲ್ಲಿ ಅವರು ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿರುವುದು ಬೇಸರ ಮೂಡಿಸಿದೆ. ಲೋಕೇಶ್​ ಕನಗರಾಜ್​ ಅವರ ನಿರ್ದೇಶನದಲ್ಲಿ ಬಂದ ‘ವಿಕ್ರಮ್​’ ಸಿನಿಮಾದಲ್ಲಿ ಕಮಲ್​ ಹಾಸನ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಆ ಚಿತ್ರದಲ್ಲಿ ನಟ ಸೂರ್ಯ ಅವರು ರೋಲೆಕ್ಸ್​ ಎಂಬ ವಿಲನ್​ ಮಾಡಿ ಸಖತ್​ ಹೈಲೈಟ್​ ಆಗಿದ್ದರು. ಇಷ್ಟೆಲ್ಲ ಕ್ರೇಜ್​ ಸೃಷ್ಟಿಸಿದ ಲೋಕೇಶ್​ ಕನಗರಾಜ್​ ಅವರು ನಿವೃತ್ತಿ ಬಗ್ಗೆ ಮಾತನಾಡಿದ್ದು ನಿಜಕ್ಕೂ ಅಚ್ಚರಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?