
ಬಾಲಿವುಡ್ ಎಂಬುದು ಚಮಕ್ ಲೋಕ. ದೃಶ್ಯಗಳಲ್ಲಿ, ಮಾತುಗಳಲ್ಲಿ, ಬೆಳಕಿನಲ್ಲಿ ಕಣ್ಣು ಕೋರೈಸುವ ಜಗತ್ತು. ಇಂಥ ಜಗತ್ತಿನಲಿ, ತೆರೆಯ ಮೇಲೆ ಸದಾ ಲೈಮ್‌ಲೈಟ್‌ನಲ್ಲಿರುವ ಹೀರೋ- ಹೀರೋಯಿನ್‌ಗಳ ಒಳಗೂ ಒಂದು ಕಾವ್ಯಲೋಕವಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಬಾಲಿವುಡ್ ತಾರೆಯರಲ್ಲೂ ಕವಿಗಳಿದ್ದಾರೆ. ಯಾರೆಲ್ಲಾ ಕವಿತೆ ಬರೆಯುತ್ತಾರೆ, ಈ ಹಿಂದೆ ಬರೆದಿದ್ದಾರೆ, ನೋಡಿ.
ಅಮಿತಾಭ್ ಬಚ್ಚನ್
ಸೇಬು ಹಣ್ಣು ಮರದಿಂದ ದೂರ ಹೋಗಿ ಬೀಳುವುದಿಲ್ಲ. ಬುಡದಲ್ಲಿಯೇ ಬೀಳುತ್ತದೆ. ಹಾಗೇ ದೊಡ್ಡ ಕವಿ ಹರಿವಂಶ ರಾಯ್ ಬಚ್ಚನ್ ಅವರ ಮಗ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ತಂದೆಯ ಕೆಲವು ಕಾವ್ಯಾತ್ಮಕ ಪ್ರತಿಭೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರು ತಮ್ಮ ಬ್ಲಾಗ್‌ಗಾಗಿ ನಿಯಮಿತವಾಗಿ ಕವನಗಳನ್ನು ರಚಿಸುತ್ತಾರೆ.
ಸುಷ್ಮಿತಾ ಸೇನ್
ಮಾಜಿ ಸೌಂದರ್ಯ ರಾಣಿ, ಮಾಡೆಲ್ ಮತ್ತು ನಟಿ ಸಾಂದರ್ಭಿಕವಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಬರೆದ ಕವನಗಳನ್ನು ಹಂಚಿಕೊಳ್ಳುತ್ತಾರೆ. ವಾಸ್ತವದಲ್ಲಿ ಸುಶ್ಮಿತಾ ಅವರ ಮಗಳು ರೆನೀ ಕೂಡ ಕವನಗಳನ್ನು ಬರೆಯುತ್ತಾರೆ.
ಟ್ವಿಂಕಲ್ ಖನ್ನಾ
ಟ್ವಿಂಕಲ್ ಖನ್ನಾ ಟೈಮ್ಸ್ ಆಫ್ ಇಂಡಿಯಾದಲ್ಲಿ ಬರೆದ ಕಾಲಂ ಬರಹಗಳ ಪುಸ್ತಕಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಜತೆಗೆ ಈಕೆ ಕಾಲಕಾಲಕ್ಕೆ ಕವಿತೆಯಲ್ಲಿಯೂ ತೊಡಗುತ್ತಾರೆ. ಅವರು ಈ ಹಿಂದೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಕವಿತೆಗಳನ್ನು ಹಂಚಿಕೊಂಡಿದ್ದಾರೆ. ಸಹೋದ್ಯೋಗಿಗಳು ಮತ್ತು ಅಭಿಮಾನಿಗಳಿಂದ ಪ್ರಶಂಸೆಯನ್ನು ಗಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್
ಅನೇಕ ಪ್ರತಿಭೆಗಳನ್ನು ಹೊಂದಿದ್ದ ಹೀರೋ ಸುಶಾಂತ್ ಸಿಂಗ್ ರಜಪೂತ್. ಅವರು ದೆಹಲಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ತಮ್ಮ ಮೊದಲ ಕವಿತೆಯನ್ನು ಬರೆದರು. ತಮ್ಮ ನಟನಾ ವೃತ್ತಿಜೀವನದುದ್ದಕ್ಕೂ ಈ ಪ್ರತಿಭೆಯನ್ನು ಪೋಷಿಸಿದರು. ಅವರು ತಮ್ಮ ಅನೇಕ ಕವಿತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.
ಆಯುಷ್ಮಾನ್ ಖುರಾನಾ
ನಟ-ಕವಿಗಳಲ್ಲಿ ಒಬ್ಬರಾದ ಆಯುಷ್ಮಾನ್ ಹತ್ತಾರು ಕವಿತೆಗಳನ್ನು ಬರೆದಿದ್ದಾರೆ ಮತ್ತು ಕೆಲವೊಮ್ಮೆ ಅವರ ಕೆಲವು ಹಾಡುಗಳ ಸಾಹಿತ್ಯವನ್ನು ಸಹ ಬರೆದಿದ್ದಾರೆ. ಬಹುಮುಖ ನಟ ಹಿಂದಿ, ಉರ್ದು ಮತ್ತು ಪಂಜಾಬಿಯಲ್ಲಿ ಕವನ ಬರೆಯುತ್ತಾರೆ.
ಕಲ್ಕಿ ಕೋಖ್ಲೀನ್
ಕಲ್ಕಿಯವರ ‘ನಾಯ್ಸ್’ ಮತ್ತು ‘ದಿ ಪ್ರಿಂಟಿಂಗ್ ಮೆಷಿನ್’ ಕವನಗಳು ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ವೈರಲ್ ಆಗಿದ್ದವು. ಬಾಡಿ ಶೇಮಿಂಗ್ ಮತ್ತು ಅನೇಕ ಇತರ ವಿಷಯಗಳ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಕವಿತೆ ಬರೆದದ್ದುಂಟು.
ಕೃತಿ ಸನನ್
ಕೃತಿ ಸನನ್ ಕೋವಿಡ್ ಸಮಯದಲ್ಲಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಣ್ಣ ಕಾವ್ಯಾತ್ಮಕ ಶೀರ್ಷಿಕೆಗಳನ್ನು ಬರೆದು ಅವರ ಕಾವ್ಯಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು. ವೈಫಲ್ಯದ ಸ್ವೀಕೃತಿ ಮುಂತಾದ ಅನೇಕ ವಿಷಯಗಳ ಕುರಿತು ಕವಿತೆ ಬರೆದು ಹಂಚಿಕೊಂಡರು.
ಸಿದ್ಧಾಂತ್ ಚತುರ್ವೇದಿ
ಇವರು ʼಗಲ್ಲಿ ಬಾಯ್'ನಲ್ಲಿ ರಾಪರ್ ಆಗಿ ಖ್ಯಾತಿ ಗಳಿಸಿದ್ದಾರೆ. ಆದರೆ ಸಿದ್ಧಾಂತ್ ಚತುರ್ವೇದಿ ನಿಜ ಜೀವನದಲ್ಲಿಯೂ ಕವಿ. ಅವರು ನಿಯಮಿತವಾಗಿ ಸಣ್ಣ ಕವನಗಳು ಮತ್ತು ಪದ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಅರುಣೋದಯ ಸಿಂಗ್
ಅರುಣೋದಯ್ ಸಿಂಗ್ ಅವರ ಇನ್‌ಸ್ಟಾಗ್ರಾಮ್ ಖಾತೆಯು ಚಿತ್ರಗಳಿಗಿಂತ ಹೆಚ್ಚು ಕವಿತೆಗಳನ್ನು ಹೊಂದಿದೆ. ಕವಿತೆಯ ಬಗ್ಗೆ ಅವರು ಪ್ರೀತಿ, ಭರವಸೆ ಹಂಚಿಕೊಳ್ಳುತ್ತಾರೆ. ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಕೈಯಿಂದ ಬರೆಯುತ್ತಾರೆ. ಕ್ಯಾಲಿಗ್ರಫಿ ಅವರ ಇನ್ನೊಂದು ಪ್ರತಿಭೆ. ಅವರು ಇದಕ್ಕೆ ಬಳಸಿಕೊಳ್ಳುತ್ತಾರೆ.
kaun banega crorepati : ಚರ್ಚೆ ಆಗ್ತಿದೆ ಅಮಿತಾಭ್ ಬಚ್ಚನ್ ಸಂಭಾವನೆ
ಮಾನವ್ ಕೌಲ್
ನಟ-ನಾಟಕಕಾರ ಮಾನವ್ ಕೌಲ್ ಅವರು ಕವನಗಳು, ಸಣ್ಣ ಕಥೆಗಳು, ಕಾದಂಬರಿ ಮತ್ತು ಪ್ರವಾಸ ಕಥನಗಳ ಸಂಗ್ರಹಗಳನ್ನು ಪ್ರಕಟಿಸಿದ ಸಮೃದ್ಧ ಲೇಖಕ. ಕಾಲಕಾಲಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅವರ ಕವನಗಳು ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿವೆ.
ಮೀನಾ ಕುಮಾರಿ
ಮೀನಾ ಕುಮಾರಿ ಅವರ ಪೀಳಿಗೆಯ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಆಕೆ ನಿಪುಣ ಕವಿಯೂ ಆಗಿದ್ದರು. ಅವರು ʼನಾಜ್' ಎಂಬ ಕಾವ್ಯನಾಮದಲ್ಲಿ ಹಲವಾರು ನಾಜ್ಮ್‌ಗಳು ಮತ್ತು ಗಜಲ್‌ಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಹಲವು ಅವಳ ಮರಣದ ನಂತರ ಪ್ರಕಟವಾದವು.
ಶಾರುಖ್ ಕಾರಣಕ್ಕೆ ಸೆಟ್‌ನಲ್ಲಿ ಕಣ್ಣೀರಿಟ್ಟಿದ್ದ ಪ್ರಿಯಾಂಕಾ ಚೋಪ್ರಾ; ಓಡಿ ಹೋಗಿ ಕ್ಷಮೆ ಕೇಳಿದ್ದ 'ಕಿಂಗ್ ಖಾನ್'!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.