ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಗರ್ಭಿಣಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ಅವರ ಫಿಟ್ನೆಸ್ ಸೀಕ್ರೆಟ್ ಕೇಳ್ತಿದ್ದಾರೆ ಅಭಿಮಾನಿಗಳು!
ಪಠಾಣ್, ಜವಾನ್ ಬೆಡಗಿ ದೀಪಿಕಾ ಪಡುಕೋಣೆ ಅಮ್ಮ ಆಗುವ ಖುಷಿಯಲ್ಲಿದ್ದಾರೆ. ಬರುವ ಸೆಪ್ಟೆಂಬರ್ನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕವೂ ತಾವು ನಟಿಸುತ್ತಿದ್ದ ಎಲ್ಲಾ ಚಿತ್ರಗಳ ಶೂಟಿಂಗ್ಗಳನ್ನೂ ಮುಗಿಸಿ ಭೇಷ್ ಅನ್ನಿಸಿಕೊಂಡಿದ್ದಾರೆ ನಟಿ. ಇದೀಗ ಸದ್ಯ ಎಲ್ಲೆಲ್ಲೂ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯದ್ದೇ ಸುದ್ದಿ. ಜುಲೈ 12ರಂದು ಈ ಮದುವೆ ಭರ್ಜರಿಯಾಗಿ ನಡೆದಿದೆ. ಚಿತ್ರರಂಗದ ಘಟಾನುಘಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಮತ್ತು ಮದುವೆ ಸಂಭ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಈ ಮೂಲಕ ಭಾರತ ಅತ್ಯಂತ ವೈಭವೋಪೇತ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಮದುವೆಯ ಬೆನ್ನಲ್ಲೇ ಮದುವೆಗೆ ಸಂಬಂಧಿಸಿದಂತೆ ಒಂದೊಂದೇ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಔಚಿತ್ಯಪೂರ್ಣ ಮದುವೆಯ ಕುರಿತು ಇಂಟರೆಸ್ಟಿಂಗ್ ವಿಷಯಗಳು ಹೊರಬರುತ್ತಿವೆ.
ಅಮ್ಮ ಆಗ್ತಿರೋ ಗುಡ್ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆಯಿಂದ ಇದೆಂಥ ಹೇಳಿಕೆ? ಬಾಲಿವುಡ್ನಲ್ಲಿ ಹಲ್ಚಲ್!
ಇದರಲ್ಲಿ ಹೈಲೈಟ್ ಆಗಿರುವುದು ನಟಿ ದೀಪಿಕಾ ಪಡುಕೋಣೆ. ಅಂದಹಾಗೆ ನಟಿ ಈಗ 7 ತಿಂಗಳ ಗರ್ಭಿಣಿ. ಝಗಮಗ ಡ್ರೆಸ್ ಹಾಕಿಕೊಂಡು ನಟಿ ಕಾಣಿಸಿಕೊಂಡಿದ್ದಾರೆ. ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡಿರುವ ನಟಿ ಅದೇ ಫಿಗರ್ ಮೆಂಟೇನ್ ಮಾಡಿರುವುದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾನ್ಯವಾಗಿ ಗರ್ಭಧರಿಸಿದ ಮೇಲೆ ಹೆಣ್ಣುಮಕ್ಕಳು ತೂಕ ಹೆಚ್ಚಿಸಿಕೊಳ್ಳುವುದು ಮಾಮೂಲು. ಆದರೆ ದೀಪಿಕಾ ಹೊಟ್ಟೆ ಮಾತ್ರ ಬಂದಿರುವುದು ಬಿಟ್ಟರೆ, ಮೊದಲಿನ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇದರ ಸೀಕ್ರೇಟ್ ಏನು ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.
ಇದೇ ವೇಳೆ, ದೀಪಿಕಾ ಚಿತ್ರರಂಗದಿಂದ ದೂರ ಆಗ್ತಾರಾ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳ ತಲೆ ಕೆಡಿಸಿದೆ. ಇದಕ್ಕೆ ಕಾರಣವೂ ಇದೆ. ರಣವೀರ್ ಸಿಂಗ್ ಮತ್ತು ದೀಪಿಕಾ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದದಾರೆ. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು. ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮದುವೆಯಾದ ಮೇಲೆ ಚಿತ್ರರಂಗ ತೊರೆಯಲಿಲ್ಲ. ಆದರೆ ಮಗುವಾದ ಮೇಲೆ ಚಿತ್ರರಂಗ ತೊರೆಯುವುದಾಗಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಈಗ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ಮಾತನ್ನು ದೀಪಿಕಾ ಅವರು ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುವಾಗ ಹೇಳಿದ್ದರು. ಸಾಂಸಾರಿಕ ಜೀವನದ ಸಂತೋಷಕ್ಕಾಗಿ ಮದುವೆಯಾಗಿ ಮಗುವಾದ ಮೇಲೆ ಚಿತ್ರರಂಗ ತೊರೆಯುತ್ತೇನೆ ಎಂದು ಹೇಳಿದ್ದರು. ಅವರು ಇದಾಗಲೇ ತಮ್ಮ ಕೈಯಲ್ಲಿ ಇರುವ ಎಲ್ಲಾ ಚಿತ್ರಗಳ ಶೂಟಿಂಗ್ ಮುಗಿಸಿದ್ದು, ಸದ್ಯ ಯಾವುದೇ ಪ್ರಾಜೆಕ್ಟ್ಗಳಿಗೆ ಸಹಿ ಹಾಕಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಗುವಾದ ಮೇಲೆ ದೀಪಿಕಾ ಚಿತ್ರರಂಗ ತೊರೆಯಲಿದ್ದಾರೆಯೇ ಎನ್ನುವ ಅನುಮಾನ ಬಂದಿದೆ. ಇದರಿಂದ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ಕೂಡ ತಲ್ಲಣಗೊಂಡಿದೆ.
ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್!