ಆ ನಟಿ ಕೈಕೊಟ್ಟಾಗ ಹೃದಯವೇ ಕಿತ್ತುಬಂತು, ಆಮೇಲೆ ಅದೃಷ್ಟದ ಬಾಗಿಲೇ ತೆರೆಯಿತು: ನಟ ಮಿಥುನ್​ ಚಕ್ರವರ್ತಿ

By Suchethana D  |  First Published May 13, 2024, 2:18 PM IST

ಬಾಲಿವುಡ್​ನ ಸ್ಟಾರ್​ ನಟಿಯೊಬ್ಬಳು ತಮಗೆ ಕೈಕೊಟ್ಟದ್ದು ಹಾಗೂ ಆ ಬಳಿಕ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ನಟ ಮಿಥುನ್​ ಚಕ್ರವರ್ತಿ ಬಣ್ಣಿಸಿದ್ದು ಹೀಗೆ... 
 


ನಾನು ಪ್ರೀತಿಯಲ್ಲಿ ಬಿದ್ದೆ ಮತ್ತು ಸಂಪೂರ್ಣವಾಗಿ ಹುಚ್ಚನಾಗಿದ್ದೆ. ಅವಳೂ ನನ್ನನ್ನು ಅಷ್ಟೇ ಪ್ರೀತಿಸಿದಳು. ಆದರೆ ಅದೇನಾಯಿತೋ ಗೊತ್ತಿಲ್ಲ, ಒಂದು ದಿನ  ಅವಳು ನನ್ನನ್ನು ತೊರೆದು ಹೋದಳು. ಅವಳು ತೊರೆದು ಹೋದಾಗ ಆಕಾಶವೇ ಕಳಚಿ ಬಿದ್ದ ಅನುಭವವಾಯ್ತು, ಹೃದಯಾಘಾತವೂ ಸಂಭವಿಸಿತು. ಹೃದಯವೇ ಕಿತ್ತುಬಂದ ಅನುಭವವಾಯ್ತು. ಆದರೆ... ಆದರೆ... ಕೊನೆಗೆ ಆಗಿದ್ದೇ ಬೇರೆ. ಅವಳು ನನಗೆ ಕೈಕೊಟ್ಟಿದ್ದರಿಂದಲೇ ನನ್ನ ಅದೃಷ್ಟದ ಬಾಗಿಲು ತೆರೆಯಿತು. ಒಂದೊಂದೇ ಹಂತಕ್ಕೇರುತ್ತಲೇ  ನಾನು ಸ್ಟಾರ್, ನಂತರ ಸೂಪರ್​ಸ್ಸಾರ್​ ಬಳಿಕ ದೊಡ್ಡ ಸೂಪರ್​ಸ್ಟಾರ್​ ಪಟ್ಟಕ್ಕೇರಿದೆ. ಅವಳು ಕೈ ಕೊಡದೇ ಹೋಗಿದ್ದರೆ ಬಹುಶಃ ನಾನು ಇನ್ನೂ ಪ್ರೀತಿ, ಪ್ರೇಮ, ಪ್ರಣಯ ಎಂದುಕೊಂಡು ಅಲ್ಲಿಯೇ ಉಳಿಯುತ್ತಿದ್ದೇನೋ ಏನೋ...

- ಹೀಗೆಂದವರು  ಹಿರಿಯ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ. ಅವರು ಇತ್ತೀಚೆಗೆ ರಿಯಾಲಿಟಿ ಷೋ  ಸಾರೆಗಮಪ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಸಂದರ್ಭದಲ್ಲಿ ನಟಿಯ ಹೆಸರನ್ನು ಬಹಿರಂಗಗೊಳಿಸದೇ ತಮ್ಮ ಭಗ್ನಪ್ರೇಮದ ಕುರಿತು ಮಾತನಾಡಿದರು.  ಮಿಥುನ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಇನ್ನೂ ಬಾಲಿವುಡ್​ನಲ್ಲಿ ತಮ್ಮ ಸ್ಥಾನ ಗಳಿಸಿಕೊಳ್ಳಲು ಹೋರಾಡುತ್ತಿದ್ದ ಸಂದರ್ಭದಲ್ಲಿ, ಆಗಲೇ ಸ್ಟಾರ್​ ನಟಿಯಾಗಿದ್ದವಳ ಜೊತೆ ಪ್ರೀತಿಗೆ ಬಿದ್ದು, ನಂತರ ಆಕೆ ಕೈಕೊಟ್ಟು ಹೋದ ಘಟನೆಯನ್ನು ನೆನಪಿಸಿಕೊಂಡರು.  ನಾನು ಪ್ರೀತಿಯಲ್ಲಿ ಬಿದ್ದೆ ಮತ್ತು ಸಂಪೂರ್ಣವಾಗಿ ಹುಚ್ಚನಾಗಿದ್ದೆ. ಆದರೆ ಒಂದು ದಿನ ಅವಳು ನನ್ನನ್ನು ತೊರೆದಳು. ನಂತರ ಸಮಯ ಬದಲಾಯಿತು, ನಾನು ಸ್ಟಾರ್, ನಂತರ ಸೂಪರ್​ ಸ್ಟಾರ್​ ಮತ್ತು ನಂತರ ದೊಡ್ಡ ಸೂಪರ್​ಸ್ಟಾರ್​ ಆದೆ ಎಂದರು. ಬಹುಶಃ ಅವಳು ಹಾಗೆ ಮಾಡದಿದ್ದರೆ ನಾನು ಇಂದು ದಂತಕಥೆಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು. 

Tap to resize

Latest Videos

ಬೆನ್ನ ಹಿಂದೆ ಬಾಲ್ ತೋರಿಸಿದ ಜಾಹ್ನವಿ ಕಪೂರ್, ಥೂ ನೆಟ್ಟಿಗರು ಹಿಂಗಾ ಕಮೆಂಟ್ ಮಾಡೋದು?
 
 ಅಷ್ಟಕ್ಕೂ ನಟ ಯಾರ ಬಗ್ಗೆ ಹೇಳುತ್ತಿದ್ದಾರೆ ಎನ್ನುವುದು ಬಾಲಿವುಡ್​ ಅಂಗಳದಲ್ಲಿ ಗುಟ್ಟಾಗಿ ಏನೂ ಉಳಿದಿಲ್ಲ. ಮಿಥುನ್​ ಚಕ್ರವರ್ತಿಯವರು ಹೇಳಿದ್ದ ನಟಿ, ಶ್ರೀದೇವಿ.   ಮಿಥುನ್ ಚಕ್ರವರ್ತಿ ಹಾಗೂ ಶ್ರೀದೇವಿ ಅವರ ಲವ್​ ಸ್ಟೋರಿ ಅಂದು ಬಹು ಚರ್ಚಿತ ವಿಷಯವಾಗಿತ್ತು. ಈ ಜೋಡಿ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿವೆ. ಮಿಥುನ್ ಚಕ್ರವರ್ತಿ ಶ್ರೀದೇವಿ ಸೌಂದರ್ಯಕ್ಕೆ ಮನಸೋತಿದ್ದರು. ತಮ್ಮ ಪ್ರೇಮವನ್ನು ನಟಿ ಶ್ರೀದೇವಿಗೆ ಹೇಳಲು ಅವರು ಬಹಳಷ್ಟು ಕಷ್ಟ ಅನುಭವಿಸಬೇಕಾಯ್ತು. ಕಾರಣ, ಆಕೆಯ ಜತೆ ಯಾವಾಗಲೂ ಶೂಟಿಂಗ್ ಜಾಗದಲ್ಲಿ ತಾಯಿ ಅಥವಾ ತಂಗಿ ಇದ್ದೇ ಇರುತ್ತಿದ್ದರು.  ಈ ಎಲ್ಲ ಕಾರಣಗಳಿಂದ ನಟ ಮಿಥುನ್ ಚಕ್ರವರ್ತಿ ನಟಿ ಶ್ರೀದೇವಿಗೆ ಪ್ರೊಪೋಸ್ ಮಾಡಲು ಸಾಧ್ಯವೇ ಆಗಲಿಲ್ಲ. ಆದರೆ ಕೊನೆಗೆ ಹೇಗೆ ಹುಂಬು ಧೈರ್ಯ ಮಾಡಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದರಂತೆ.  ಆರಂಭದಲ್ಲಿ ಶ್ರೀದೇವಿ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೂ  ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಇದನ್ನು ಮಿಥುನ್‌ ಚಕ್ರವರ್ತಿ ಅವರು ಕೂಡ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದರು. 1984 ರಲ್ಲಿ ಬಿಡುಗಡೆಯಾದ 'ಜಗ್ ಉಟಾ ಇನ್ಸಾನ್' ಸಿನಿಮಾದಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು.  ಅದರ ಶೂಟಿಂಗ್ (Shooting) ಸಮಯದಲ್ಲಿ ಇಬ್ಬರೂ ತುಂಬಾ ಹತ್ತಿರವಾಗಿದ್ದರು. ನಂತರ ಶ್ರೀದೇವಿ ಮಿಥುನ್​ ಚಕ್ರವರ್ತಿ ಅವರಿಂದ ದೂರವಾದರು ಎನ್ನಲಾಗುತ್ತದೆ. 

ಇನ್ನು ಮಿಥುನ್ ಚಕ್ರವರ್ತಿಯವರ ಕುರಿತು ಹೇಳುವುದಾದರೆ, ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ನಟ,  ಕೊನೆಯದಾಗಿ ಕಾಣಿಸಿಕೊಂಡಿದ್ದು,  ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ವಿವಾದಾತ್ಮಕ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್​ನಲ್ಲಿ. 2022 ರಿಂದ, ಅವರು ಪ್ರಾಥಮಿಕವಾಗಿ ಬಂಗಾಳಿ ಚಲನಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಿಥುನ್ ಅವರು  ಮೊದಲಿಗೆ  ಹೆಲೆನಾ ಲ್ಯೂಕ್ ಅವರನ್ನು ವಿವಾಹವಾದರು. ಹೆಲೆನಾ 70 ರ ದಶಕದ ಫ್ಯಾಷನ್ ಐಕಾನ್ ಆಗಿದ್ದರು. ಹಲವು ಚಿತ್ರಗಳಲ್ಲಿ ಸೈಡ್ ರೋಲ್ ಕೂಡ ಮಾಡಿದ್ದಾರೆ. ಮದುವೆಯಾದ ನಾಲ್ಕು ತಿಂಗಳಲ್ಲೇ ಈ ಜೋಡಿ ದಾಂಪತ್ಯ ಮುರಿದು ಕೊಂಡರು.  ನಂತರ ನಟ ಯೋಗಿತಾ ಬಾಲಿಯನ್ನು  ವಿವಾಹವಾದರು. ಯೋಗಿತಾ

ನಿಗೂಢ ಸಾವನ್ನಪ್ಪಿದ ನಟಿ ಶ್ರೀದೇವಿಗೆ ಹೀಗೊಂದು ನಮನ: ಪಾಲಿಕೆಯಿಂದ ರಸ್ತೆಗೆ ನಟಿಯ ಹೆಸರು

click me!