ನನ್ನ ಸಿನಿಮಾ ನೋಡೋಕೆ ಜನರ ಬಳಿ ಹಣವಿಲ್ಲ; ಸಾಲು ಸಾಲು ಚಿತ್ರಗಳ ಸೋಲಿಗೆ ರಾಕುಲ್ ಪ್ರೀತ್‌ಸಿಂಗ್ ರಿಯಾಕ್ಷನ್

Published : Mar 01, 2023, 01:26 PM IST
ನನ್ನ ಸಿನಿಮಾ ನೋಡೋಕೆ ಜನರ ಬಳಿ ಹಣವಿಲ್ಲ; ಸಾಲು ಸಾಲು ಚಿತ್ರಗಳ ಸೋಲಿಗೆ ರಾಕುಲ್ ಪ್ರೀತ್‌ಸಿಂಗ್ ರಿಯಾಕ್ಷನ್

ಸಾರಾಂಶ

ನಟಿ ರಾಕುಲ್ ಪ್ರೀತ್ ಸಿಂಗ್ ಸರಣಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಜನರ ಬಳಿ ಹಣವಿಲ್ಲದ ಕಾರಣ ಸಿನಿಮಾ ನೋಡುತ್ತಿಲ್ಲ ಎಂದು ಹೇಳಿದ್ದಾರೆ.  

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯ ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಾಕುಲ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಆದರೇ ಯಾವುದೇ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ. ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ಸರಣಿ ಸೋಲಿನ ಬಗ್ಗೆ ನಟಿ ರಾಕುಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ ಬಾಲಿವುಡ್‌ಗೆ ಹಾರುತ್ತಿದ್ದಂತೆ ರಾಕುಲ್ ಸಿನಿಮಾಗಳು ನೆಲಕಚ್ಚಿವೆ. ಹಿಂದಿಯಲ್ಲಿ ರಾಕುಲ್ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬಂದರೂ ಬಾಕ್ಸ್ ಆಫೀಸ್ ನಲ್ಲಿ ರಾಕುಲ್ ಸಿನಿಮಾಗಳು ಕಮಾಯಿ ಮಾಡಲು ವಿಫಲವಾಗಿವೆ.

ಬಾಲಿವುಡ್‌ನಲ್ಲಿ ರಾಕುಲ್ ಅಟ್ಯಾಕ್,  ರನ್‌ವೇ 34, ಕಟ್‌ಪುಟ್ಲಿ, ಡಾಕ್ಟರ್ ಜೀ, ಥ್ಯಾಂಕ್ ಗಾಡ್ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ಈ ಬಗ್ಗೆ ಮಾತನಾಡಿದ ರಾಕುಲ್ ನನ್ನ ಕೆಲಸವನ್ನು ಬಾಕ್ಸ್ ಆಫೀಸ್ ಸಂಖ್ಯೆಯಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕುಲ್ ಪ್ರೀತ್ ಸಿಂಗ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಬಾಕ್ಸ್ ಆಫೀಸ್ ಸಂಖ್ಯೆ ಎಷ್ಟು ಪ್ರಮುಖವಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಕುಲ್ ಜನರ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಹಣವಿಲ್ಲದ ಕಾರಣ ಜನರು ತಿಂಗಳಿಗೆ ಒಂದು ಸಿನಿಮಾವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ. 

‘ಪ್ರತಿವಾರ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕೆಲವೊಮ್ಮೆ ಎರಡು ಚಿತ್ರಗಳು ಬಿಡುಗಡೆಯಾಗುತ್ತವೆ. ಪ್ರತಿ ಚಿತ್ರಕ್ಕೂ ಪ್ರೇಕ್ಷಕರು ಬಂದು ನೋಡುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಇದು ದುಬಾರಿ ವಿಚಾರ’ಎಂದು ಹೇಳಿದರು. ಇದು ಕೇವಲ ಒಂದು ಅಂಶ ಅಷ್ಟೇ ಎಂದಿರುವ ರಾಕುಲ್ ಪ್ರೀತ್ ಪ್ರೇಕ್ಷಕರು ನಿಮ್ಮ ಚಿತ್ರವನ್ನು ನೋಡಿಲ್ಲ ಎಂದರೆ ಅದು ಕೆಟ್ಟ ಸಿನಿಮಾ ಎಂದು ಅರ್ಥವಲ್ಲ, ಆದರೆ ಚಲನಚಿತ್ರ ವೀಕ್ಷಣೆ ದುಬಾರಿ ವ್ಯವಹಾರವಾಗಿರುವುದರಿಂದ ಆಗಿರಬಹುದು ಎಂದು ಹೇಳಿದ್ದಾರೆ. 

Rakul Preeth Singh: ಎರಡು ಕಾಂಡೋಮ್ ಒಟ್ಟಿಗೇ​ ಧರಿಸಿದ್ರೆ ಏನಾಗತ್ತೆ? ನಟಿ ವಿವರಿಸಿದ್ದು ಹೀಗೆ!

ಪ್ರೇಕ್ಷಕರ ಪ್ರೀತಿಯೇ ಮುಖ್ಯ ಎಂದಿರುವ ರಾಕುಲ್ ಬಾಕ್ಸ್ ಆಫೀಸ್ ಸಂಖ್ಯೆ ಅಥವಾ ಜಡ್ಜಮೆಂಟ್ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸೌತ್ ಸಿನಿಮಾಗಳ ಬಾಲಿವುಡ್ ನಲ್ಲಿ ಸಕ್ಸಸ್ ಕಾಣುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. ಇದರಲ್ಲಿ ಯಾವುದೇ ಚರ್ಚೆ ಇಲ್ಲ ಎಂದು ರಾಕುಲ್ ಹೇಳಿದರು. ಪ್ರಾದೇಶಿಕ ಮತ್ತು ಬಾಲಿವುಡ್ ಸಿನಿಮಾಗಳು ಎಲ್ಲವೂ ಭಾರತದ ಸಿನಿಮಾಗಳು. ಚಿತ್ರವು ಉತ್ತಮವಾಗಿದ್ದರೆ ಅದು ಭಾಷೆಯ ಹೊರತಾಗಿ ತನ್ನ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ ಎಂದು ರಾಕುಲ್ ಹೇಳಿದರು. 

ರಾಕುಲ್ ಸದ್ಯ ಚತ್ರಿವಾಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದು ಚಿತ್ರಮಂದಿರಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ. ಚತ್ರಿವಾಲಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಈಗಾಗಲೇ ಕುತೂಹಲ ಹೆಚ್ಚಿಸಿದೆ. 

ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದೆ; ನಟಿ ರಾಕುಲ್ ಪ್ರೀತ್ ಸಿಂಗ್

ರಾಕುಲ್ ಸಿನಿಮಾ ಜೊತೆಗೆ ಪ್ರೀತಿ ಪ್ರೇಮದ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ. ರಾಕುಲ್ ನಟ ಜಾಕಿ ಭಗ್ನಾನಿ ಜೊತೆ ಡೇಟಿಂಗ್ ನಲ್ಲಿದ್ದಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಕುಲ್ ಇದರಲ್ಲಿ ಮುಚ್ಚಿಡುವುದು ಏನು ಇಲ್ಲ ಎಂದು ಹೇಳಿದರು. ಮದುವೆ ಬಗ್ಗೆ ಮಾತನಾಡಿದ ರಾಕುಲ್ ನಾನು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೀನಿ, ಜಾಕಿ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಮದುವೆಗೆ ಸಮಯವೆಲ್ಲಿದೆ ಎಂದು ಹೇಳಿದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!