ಬಾಲಿವುಡ್‌ನ ಧಕ್ ಧಕ್ ಗರ್ಲ್ ಎಂದೇ ಫೇಮಸ್ ಆಗಿರುವ ನಟಿ ಮಾಧುರಿ ದೀಕ್ಷಿತ್ ಅವರು ಡಾ. ನೇನೆ ಅವರನ್ನು ಮದುವೆಯಾದ ಬಳಿಕ ಸಂಸಾರ ಹೇಗಿತ್ತು? ನಟಿ ಹೇಳಿದ್ದೇನು?
ಬಾಲಿವುಡ್‌ನ 'ಧಕ್ ಧಕ್ ಗರ್ಲ್' ಎಂದೇ ಫೇಮಸ್ ಆಗಿರುವ ಮಾಧುರಿ ದೀಕ್ಷಿತ್ (Madhuri Dixit) ಹೆಸರು ಕೇಳಿದರೆ ಸಿನಿ ರಸಿಕರಿಗೆ ಒಂದು ಕ್ಷಣ ರೋಮಾಂಚನವಾಗುತ್ತದೆ. 80-90ರ ದಶಕದಲ್ಲಿ ಬಾಲಿವುಡ್‌ನ ನಂ.1 ನಟಿ ಎನಿಸಿಕೊಂಡಿರೋ ಮಾಧುರಿ ದೀಕ್ಷಿತ್ ಅವರು ಚೆಲುವು, ನಟನೆ, ನೃತ್ಯ ಎಲ್ಲದಕ್ಕೂ ಮನಸೋಲದವರೇ ಇಲ್ಲ ಎನ್ನಬಹುದೇನೋ. 1992ರಲ್ಲಿ ಬಿಡುಗಡೆಯಾದ ಬೇಟಾ ಚಿತ್ರದ ಧಕ್ ಧಕ್ ಕರನೇ ಲಗಾದಲ್ಲಿ ಮೈಚಳಿ ಬಿಟ್ಟು ನಟ ಅನಿಲ್ ಕಪೂರ್ ಜೊತೆ ನಟಿಸಿದ ಮೇಲಂತೂ ಮಾಧುರಿ ಪಡ್ಡೆ ಹುಡುಗರ ನಿದ್ದೆಯನ್ನೇ ಕದ್ದು ಬಿಟ್ಟವರು. ಅಲ್ಲಿಂದ ಧಕ್ ಧಕ್ ಗರ್ಲ್ ಎಂದೇ ಪ್ರಸಿದ್ಧಿಗೆ ಬಂದರು. ಈಗ ಅವರಿಗೆ 55 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ಮಾಧುರಿ ಶಾಸ್ತ್ರೀಯ ನೃತ್ಯದ (Classical dance) ಜೊತೆಗೆ ಸಿನಿಮಾ ನೃತ್ಯಗಳಿಂದ ಈಗಲೂ ಮೋಡಿ ಮಾಡುತ್ತಿದ್ದಾರೆ.
ಬಾಲಿವುಡ್‌ನಲ್ಲಿ (Bollywood) ಭಾರಿ ಡಿಮಾಂಡ್ನಲ್ಲಿ ಇರುವಾಗಲೇ ಇವರು ಡಾಕ್ಟರ್ ಆಗಿರುವ ಶ್ರೀರಾಮ್ ನೆನೆ ಅವರನ್ನು ಮಾಧುರಿ ದೀಕ್ಷಿತ್ ಮದುವೆಯಾದರು. 1999ರಲ್ಲಿ ಇವರ ಮದುವೆ ನಡೆಯಿತು. ಅಲ್ಲಿಂದ ಮಾಧುರಿ ದೀಕ್ಷಿತ್ ಜೊತೆ ನೇನೆ ಕೂಡ ಸೇರಿಕೊಂಡಿತು. ಮದುವೆಗೂ ಮುನ್ನ ಮಾಧುರಿ ಅವರ ಹೆಸರು ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಿಥುನ್ ಚಕ್ರವರ್ತಿಯಂತಹ ನಟರೊಂದಿಗೆ ಸೇರಿಕೊಂಡಿತ್ತು. ಆದರೆ ಮಾಧುರಿ ಭಾರತೀಯ ಕ್ರಿಕೆಟಿಗ ಅಜಯ್ ಜಡೇಜಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಎಲ್ಲಾ ಗುಸುಗುಸು ಪಿಸುಪಿಸು ನಡುವೆಯೇ ಮಾಧುರಿ ಅವರ ಮದುವೆ ವೈದ್ಯರ ಜೊತೆ ನಡೆಯಿತು. ಮದುವೆಯ ನಂತರ ಮಾಧುರಿ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟು ವಿದೇಶದಲ್ಲಿ ನೆಲೆಸಿದರು.
Wedding Annivesary ದಿನ ಮದುವೆಯ ಸೀಕ್ರೇಟ್ ರಟ್ಟು ಮಾಡಿದ ಕಾಜೋಲ್-ಅಜಯ್
ಇದೀಗ ಮಾಧುರಿ ದೀಕ್ಷಿತ್ ಮದುವೆಯಾದ ಬಳಿಕ ತಮ್ಮ ದಾಂಪತ್ಯ ಜೀವನದ ಕೆಲವೊಂದು ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಪತಿ ಶ್ರೀರಾಮ್ ನೆನೆ (Shreeram Nene) ಅವರ ಯೂಟ್ಯೂಬ್ ಚಾನೆಲ್ನಲ್ಲಿ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿ ಇದ್ದರೆ ಇಲ್ಲವೇ ಇಬ್ಬರಲ್ಲಿ ಒಬ್ಬರು ತುಂಬಾ ಹೊಣೆಗಾರಿಕೆ ಕೆಲಸದಲ್ಲಿ ಇದ್ದಾಗ ಸಾಮಾನ್ಯವಾಗಿ ಆಗುವ ತೊಂದರೆಗಳನ್ನು ತಾವು ಅನುಭವಿಸಿರುವ ಕುರಿತು ಅವರು ಮಾತನಾಡಿದ್ದಾರೆ. ಇವರ ಪತಿ ದೊಡ್ಡ ವೈದ್ಯರಾಗಿದ್ದ ಕಾರಣ, ತಮಗೆ ಮದುವೆಯಾದ ಮೇಲೆ ಒಟ್ಟಿಗೆ ಇರಲು ಸಮಯವೇ ಸಿಗುತ್ತಿರಲಿಲ್ಲ ಎಂದು ಮಾಧುರಿ ದೀಕ್ಷಿತ್ ಹೇಳಿಕೊಂಡಿದ್ದಾರೆ. ಅವರು ಇಲ್ಲದೇ ನಾನು ಎಷ್ಟೋ ಸಮಯವನ್ನು ಒಂಟಿಯಾಗಿಯೇ ಕಳೆಯಬೇಕಿತ್ತು ಎಂದಿದ್ದಾರೆ.
ಇವರಿಗೆ ಇಬ್ಬರು ಮಕ್ಕಳು ಅರಿಯನ್ ಮತ್ತು ರಿಯಾನ್. ಮಕ್ಕಳು ಹುಟ್ಟಿದ ಮೇಲೂ ಪತಿಯ (Husband) ಜೊತೆ ಟೈಂ ಸ್ಪೆಂಡ್ ಮಾಡುವುದು ಕಷ್ಟವೇ ಆಯಿತು. ಅವರಿಗೆ ನಮಗೆ ಹೆಚ್ಚು ವೇಳೆ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ಎಲ್ಲಾ ಪ್ಲಾನ್ (Plan) ಬದಲಾಗಿತ್ತು. ನಾನು ಇಡೀ ದಿನ ಫೋನ್ನಲ್ಲಿ ಬ್ಯುಸಿಯಾಗಿ ಇರಬೇಕಿತ್ತು. ಆ ದಿನಗಳು ನನಗೆ ನಿಜವಾಗಿಯೂ ಕಷ್ಟಕರವಾಗಿತ್ತು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯೂ ನನ್ನ ಮೇಲೆಯೇ ಇತ್ತು. ಅಷ್ಟೇ ಅಲ್ಲ... ನಮ್ಮ ಮನೆಯಲ್ಲಿ ಏನಾದರೂ ವಿಶೇಷವಿದ್ದರೂ, ಹಬ್ಬದ ಸಮಯದಲ್ಲಿಯೂ ಅವರು ಜೊತೆಯಲ್ಲಿ ಇರುತ್ತಿರಲಿಲ್ಲ ಎಂದಿರುವ ಮಾಧುರಿ, ಒಂದು ಹಂತದಲ್ಲಿ ಕಣ್ಣೀರಿಟ್ಟಿದ್ದಾರೆ. 'ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ, ನೀವು ಬೇರೆಯವರನ್ನು ನೋಡಿಕೊಂಡಿದ್ದೀರಿ. ಇದೆಲ್ಲಾ ನನಗೆ ಕೆಲವೊಮ್ಮೆ ತುಂಬಾ ಕಷ್ಟಕರ ಅನಿಸಿದೆ. ಇದರ ಹೊರತಾಗಿಯೂ ನಾನು ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ನೀವು ಯಾವಾಗಲೂ ರೋಗಿಗಳ ಪರವಾಗಿ ನಿಂತಿದ್ದೀರಿ, ಅವರ ಜೀವಕ್ಕಾಗಿ ಶ್ರಮಿಸಿದ ರೀತಿ ನನ್ನ ಹೃದಯವನ್ನು ಗೆದ್ದಿವೆ' ಎಂದು ಪತಿಯನ್ನು ಉದ್ದೇಶಿಸಿ ನಟಿ ಹೇಳಿದ್ದಾರೆ.
ಮಕ್ಕಳು ಬೇಕು... ಹುಡುಗನನ್ನು ಹುಡುಕಿ ಕೊಡಿ ಎಂದ ನಟಿ Parineeti Chopra!
ಪತಿ ನೆನೆ ಕೂಡ ಮಾತನಾಡಿದ್ದು, 'ನಾವಿಬ್ಬರೂ ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿದ್ದೇವೆ. ಮಕ್ಕಳಿಗಾಗಿ ಸದಾ ಜೊತೆಯಾಗಿ ನಿಂತಿದ್ದೇವೆ. ಜೀವನದಲ್ಲಿ ಏನೇ ಮಾಡಿದರೂ ಕುಟುಂಬದ ಒಳಿತಿಗಾಗಿ ಮಾಡುತ್ತೇವೆ’ ಎಂದು ಹೇಳಿದರು.