
ಬೆಂಗಳೂರು (ಜೂನ್ 27): ಕೇವಲ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಬಾಲಿವುಡ್‌ನ ಸುಪ್ರಸಿದ್ಧ ಜೋಡಿ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ಸೋಮವಾರ ಬೆಳಗ್ಗೆ ಅಚ್ಚರಿಯ ಸುದ್ದಿಯನ್ನು ಪ್ರಕಟಿಸಿದರು. ಇನ್ಸ್‌ಟಾಗ್ರಾಮ್‌ನಲ್ಲಿ (Instagram) ಈ ಜೋಡಿ ತಾವಿಬ್ಬರೂ ತಂದೆ-ತಾಯಿ ಅಗುತ್ತಿರುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ, ಅಭಿಮಾನಿಗಳು ಸಂಭ್ರಮ ಪಡುವುದರ ಬದಲಾಗಿ, ಅಚ್ಚರಿಯಿಂದ ತಲೆಕೆರೆದುಕೊಳ್ಳಲು ಆರಂಭಿಸಿದರು.
ಎಲ್ಲರ ತಲೆಯಲ್ಲಿದ್ದದ್ದು ಒಂದೇ ಪ್ರಶ್ನೆ, ಮದುವೆಯಾದ ಎರಡೇ ತಿಂಗಳಿಗೆ ಪ್ರಗ್ನೆಂಟ್ ಅಂತಾ ಅಷ್ಟು ಕನ್ಫರ್ಮ್ ಆಗಿ ಈ ಜೋಡಿ ಹೇಳೋಕೆ ಹೇಗೆ ಸಾಧ್ಯ? ಎನ್ನುವುದು. ಅದರ ಬೆನ್ನಲ್ಲಿಯೇ ಟ್ವಿಟರ್ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಈ ಕುರಿತಾಗಿ ಇವರಿಬ್ಬರನ್ನು ಸಾಕಷ್ಟು ಟ್ರೋಲ್ ಕೂಡ ಮಾಡಲಾಗಿದೆ.
ನಟಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಲಿಯಾ ಜೊತೆಗೆ ಅವರ ಪತಿ ರಣಬೀರ್ ಕಪೂರ್ ಕ್ಯಾಮೆರಾಗೆ ಬೆನ್ನು ತೋರಿಸಿದ್ದಾರೆ. ಇಬ್ಬರೂ ಪ್ರೀತಿಯಿಂದ ಮಾನಿಟರ್‌ನಲ್ಲಿ ಅಲ್ಟ್ರಾಸೌಂಡ್ ನೋಡುತ್ತಿದ್ದಾರೆ. ಶೀರ್ಷಿಕೆಯಲ್ಲಿ, ಆಲಿಯಾ "ನಮ್ಮ ಮಗು ಶೀಘ್ರದಲ್ಲೇ ಬರಲಿದೆ" ಎಂದು ಬರೆದಿದ್ದಾರೆ.
ಅದರ ಬೆನ್ನಲ್ಲೇ ಆಲಿಯಾ ಮತ್ತು ರಣಬೀರ್ ಅವರ ಕುಟುಂಬ ಸದಸ್ಯರು, ಸಹೋದ್ಯೋಗಿಗಳು ಮತ್ತು ಅಭಿಮಾನಿಗಳಿಂದ ಶುಭಾಶಯಗಳು ಸುರಿಯಲಾರಂಭಿಸಿದವು. ಕೆಲವರಂತೂ, "ಇದೇ ಕಾರಣಕ್ಕಾಗಿ ಇಷ್ಟು ಬೇಗ ಮದುವೆಯಾಗಿದ್ದು, ಈಗ ನಮಗೆ ಅರ್ಥವಾಯಿತು' ಎಂದು ಬರೆದಿದ್ದರೆ, ಮತ್ತೊಬ್ಬರು ರಣಬೀರ್ ಕಪೂರ್‌ನನ್ನು ಹಾರ್ದಿಕ್ ಪಾಂಡ್ಯಗೆ ಹೋಲಿಸಿದ್ದಾರೆ. ಈ ವಿಚಾರದಲ್ಲಿ ರಣಬೀರ್ ಕಪೂರ್‌ಗೆ ಹಾರ್ದಿಕ್ ಪಾಂಡ್ಯ ಅವರೇ ಸ್ಪೂರ್ತಿಯಾಗಿರುವಂತೆ ಕಾಣುತ್ತಿದೆ ಎಂದು ಬರೆದಿದ್ದಾರೆ.
"ಆಲಿಯಾ ಪ್ರೆಗ್ನೆಂಟ್ ಆದ್ಲಾ, ಈಗ ತಾನೆ ಅವರು ಮದುವೆಯಾಗಿದ್ರಲ್ಲ; ಎಂದು ಅಭಿಮಾನಿಯೊಬ್ಬ (@taekooking___) ಬರೆದಿದ್ದಾನೆ.
"ಅಡ್ವಾನ್ಸ್ ಬುಕಿಂಗ್‌ಗೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.. ಇಬ್ಬರಿಗೂ ಗುಡ್ ಲಕ್' ಎಂದು ಶಿವ (@s_shiva21) ಎನ್ನುವ ಅಭಿಮಾನಿ ಬರೆದಿದ್ದಾರೆ.
ಆಲಿಯಾ ಪ್ರೆಗ್ನೆಂಟ್ ಆಗಿರುವ ಸುದ್ದಿ ಕೇಳಿ, ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ರಿಯಾಕ್ಷನ್ ಹೀಗೆ ಇರಬಹುದು ಎಂದು ಅಭಿಮಾನಿ (@Stormtweets_) ಒಬ್ಬರು ಊಹೆ ಮಾಡಿದ್ದಾರೆ.
ಆಲಿಯಾ ಭಟ್ ತಾನು ಗರ್ಭಿಣಿ ಎಂದು ಹೇಳಿದ್ದಾಳೆ. ನಾನು ದೀಪಿಕಾ ಹಾಗೂ ರಣವೀರ್‌ಗೆ ಹೇಳುವ ಡೈಲಾಗ್ ಇದು ಎಂದು ಶಾನು (@Shahnawazsingle) ಬರೆದಿದ್ದಾನೆ.
ಆಲಿಯಾ ಹಾಗೂ ರಣಬೀರ್ ಮದುವೆಯಾದ ಮೂರು ತಿಂಗಳ ಒಳಗಾಗಿಯೇ ತಾಯಿಯಾಗುವ ಸುದ್ದಿ ಕೊಟ್ಟಿದ್ದಾರೆ. ಇದನ್ನು ಕೇಳಿದ ಬಳಿಕ ಭಾರತದ ತಾಯಂದಿರರು ದೀಪಿಕಾ ಹಾಗೂ ಕತ್ರಿನಾಗೆ ಕೇಳುವ ಪ್ರಶ್ನೆ ಇದು ಅಭಿಮಾನಿ (@swatic12) ಬರೆದಿದ್ದಾರೆ. ಇದರ ಅರ್ಥ "ಇವರಿಂದ ಆದ್ರೂ ಸ್ವಲ್ಪ ಕಲೀರಿ' ಎನ್ನುವುದಾಗಿದೆ.
ಆಲಿಯಾ ಭಟ್ ಪ್ರೆಗ್ನೆಂಟ್ ಆಗಿರುವ ಸುದ್ದಿ ಕೇಳಿದ ಬಳಿಕ, ದೀಪಿಕಾ, ರಣವೀರ್ ಗೆ ಹೀಗೆ ಹೇಳಬಹುದು ಎಂದು ವರದ್ ರಲೆಗಾಂವ್ಕರ್ (@varadr_tistic) ಬರೆದಿದ್ದಾರೆ.
ರಣಬೀರ್ ಹಾಗೂ ಆಲಿಯಾ ಮೊದಲ ಮಗುವಿನ ಸುದ್ದಿ ಕೊಟ್ಟಿದ್ದಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಸ್ಥಿತಿ ಹೀಗಿರಬಹುದಾ ಎಂದು ಅಭಿಮಾನಿ (@MehdiShadan) ಟ್ವೀಟ್ ಮಾಡಿದ್ದಾನೆ.
ರಣಬೀರ್ ಕಪೂರ್‌ನನ್ನು ಮದುವೆಯಾಗುವ ಕೋಡ್ ಏನು ಅನ್ನೋದನ್ನು ಆಲಿಯಾ ಭಟ್ ಕಂಡುಹಿಡಿದುಕೊಂಡಳು. ದೀಪಿಕಾ ಹಾಗೂ ಕತ್ರಿನಾ, ಆಲಿಯಾ ಭಟ್‌ರಿಂದ ತುಂಬಾ ಕಲಿಯೋದಿದೆ ಎಂದು ಮತ್ತೊಬ್ಬರು (@mainbhiengineer) ಟ್ವೀಟ್ ಮಾಡಿದ್ದಾರೆ.
ಆಲಿಯಾ ಅವರ ಮುಂಬರುವ ಚಿತ್ರಗಳು: ಆಲಿಯಾ ಭಟ್ ಅವರ ಮುಂದಿನ ಚಿತ್ರ ಬ್ರಹ್ಮಾಸ್ತ್ರ ಭಾಗ-I, ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ಅವರ ಬ್ಯಾನರ್ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾದ ಡಾರ್ಲಿಂಗ್ಸ್‌ನಲ್ಲಿ ಅವರು ಪ್ರಮುಖ ತಾರೆಯಾಗಿ ನಟಿಸುತ್ತಿದ್ದಾರೆ. ಗಾಲ್ ಗಡೋಟ್ ಮತ್ತು ಫಿಫ್ಟಿ ಷೇಡ್ಸ್ ಆಫ್ ಗ್ರೇ ಸ್ಟಾರ್ ಜೇಮಿ ಡೋರ್ನಾನ್ ಅವರ ಚಿತ್ರದ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾಳೆ. ಈ ಚಲನಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ ಮತ್ತು ಆಲಿಯಾ ತಾನು ಪ್ರೆಗ್ನೆಂಟ್ ಆಗಿರುವ ಸುದ್ದಿಯನ್ನು ಅಭಿಮಾನಿಗಳಿಗೆ ತಲುಪಿಸುವ ಮೊದಲು ಅದರ ಚಿತ್ರೀಕರಣಕ್ಕಾಗಿ ಹಾಲಿವುಡ್‌ಗೆ ತೆರಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.