ಲೈಂಗಿಕ ದೌರ್ಜನ್ಯ: ಮಲಯಾಳಂ ನಟ ವಿಜಯ್ ಬಾಬು ಬಂಧನ

Published : Jun 27, 2022, 03:48 PM ISTUpdated : Jun 27, 2022, 03:59 PM IST
ಲೈಂಗಿಕ ದೌರ್ಜನ್ಯ:  ಮಲಯಾಳಂ ನಟ ವಿಜಯ್ ಬಾಬು ಬಂಧನ

ಸಾರಾಂಶ

 ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಅವರನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಗೆ ಹಾಜರುಪಡಿಸಿದ ನಂತರ ಅವರನ್ನು ಬಂಧಿಸಲಾಯಿತು.

ತಿರುವನಂತರಪುರ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಅವರನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಗೆ ಹಾಜರುಪಡಿಸಿದ ನಂತರ ಅವರನ್ನು ಬಂಧಿಸಲಾಯಿತು. ಜೂನ್ 22 ರಂದು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಸಿನಿಮಾಗಳಲ್ಲಿ ಪಾತ್ರ ನೀಡುವುದಾಗಿ ಹೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ನಟಿಯೂ ಆಗಿರುವ ಮಹಿಳೆಯೊಬ್ಬರು ವಿಜಯ್ ಬಾಬು ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ನಟನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. 

ನಟ ವಿಜಯ್‌ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸುವಾಗ, ಕೇರಳ ಹೈಕೋರ್ಟ್ ಈ ಸಮಯದಲ್ಲಿ ರಾಜ್ಯವನ್ನು ತೊರೆಯದಂತೆ ಮತ್ತು  ಪಾಸ್‌ಪೋರ್ಟ್ ಮರಳಿಸುವಂತೆ ಕೇಳಿತ್ತು. ಇಂದಿನಿಂದ(ಜೂ.27) ಜುಲೈ 3 ರವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಅವರನ್ನು ಪ್ರಶ್ನಿಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿದೆ. ನಿನ್ನೆ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ವಿಜಯ್ ಬಾಬು ಅವರಿಗೆ ಬೆಂಬಲ ನೀಡಿತು. ಅಲ್ಲದೇ ನ್ಯಾಯಾಲಯದ ತೀರ್ಪಿನ ನಂತರವಷ್ಟೇ ನಟ ವಿಜಯ್‌ ಬಾಬು ವಿರುದ್ಧ  ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚಲನಚಿತ್ರ ಕಲಾವಿದರ ಸಂಘ ಹೇಳಿತ್ತು. 

ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ, ಖ್ಯಾತ ನಟ ವಿಜಯ್ ಬಾಬು ವಿರುದ್ಧ ರೇಪ್ ಕೆಸ್!

ದೂರು ನೀಡಿದ ಯುವ ನಟಿಯ ಗುರುತನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ ಆರೋಪವೂ ನಟ ವಿಜಯ್ ಮೇಲಿದೆ. ವಿಜಯ್ ಬಾಬು ಏಪ್ರಿಲ್ ಅಂತ್ಯದಲ್ಲಿ ದುಬೈಗೆ ತೆರಳಿದ್ದರು, ಅದೇ ಸಮಯದಲ್ಲಿ ಮಹಿಳೆಯೊಬ್ಬರು ಆತನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು. ಕೊಚ್ಚಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ ನಂತರ ನಟ ದೇಶ ತೊರೆದಿದ್ದರು. 39 ದಿನಗಳ ಕಾಲ ದೇಶದಿಂದ ದೂರವಿದ್ದ ವಿಜಯ್ ಬಾಬು ಜೂನ್ 1 ರಂದು ಕೊಚ್ಚಿಗೆ ಮರಳಿದ್ದರು. 

ವಿಜಯ್ ಬಾಬು ವಿರುದ್ಧದ ಪ್ರಕರಣವೇನು?

ನಟ ವಿಜಯ್ ಬಾಬು ಎರ್ನಾಕುಲಂನಲ್ಲಿರುವ (Ernakulam) ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಯುವ ನಟಿಗೆ ಹಲವು ಬಾರಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ವಿಜಯ್‌ಬಾಬು ಆಕೆಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳ ಭರವಸೆಯನ್ನೂ ನೀಡಿದ್ದರು ಎಂದು ದೂರು ನೀಡಿರುವ ನಟಿ ಆರೋಪಿಸಿದ್ದಾರೆ. 

ಅತ್ಯಾಚಾರ ಪ್ರಕರಣ; ಪರಾರಿಯಾಗುವ ಶಂಕೆ, ನಟ ವಿಜಯ್ ಬಾಬು ಪಾಸ್‌ಪೋರ್ಟ್ ಸೀಜ್
 

ನಾನು ಪ್ರಜ್ಞಾಪೂರ್ವಕವಾಗಿ ಹೌದು ಅಥವಾ ಇಲ್ಲ ಎಂದು ಹೇಳಲು ಅಸಮರ್ಥಳಾಗಿದ್ದಾಗ, ಅವನು ನನ್ನ ದೇಹವನ್ನು ಆತನ ಸಂತೋಷಕ್ಕಾಗಿ ಬಳಸಿದ್ದಾನೆ. ಆತನ ನನ್ನ ಮೇಲೆ ಬಲತ್ಕಾರ ಮಾಡಿದ್ದಾನೆ. ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ. ಅಲ್ಲದೇ ನನ್ನ ಇಚ್ಛೆಗೆ ವಿರುದ್ಧವಾಗಿ ಮೌಖಿಕ ಸೆಕ್ಸ್‌ಗೆ ಒತ್ತಾಯಿಸಿದ್ದಾನೆ. ಈ ವೇಳೆ ನಾನು . ನಾನು ಆಘಾತಗೊಂಡ ಸ್ಥಿತಿಯಲ್ಲಿದ್ದೆ, ಮಾತನಾಡಲು ಅಥವಾ ಪ್ರತಿಕ್ರಿಯಿಸಲು ನಾನು ಅಸಮರ್ಥಳಾಗಿದ್ದೆ ಎಂದು ಸಂತ್ರಸ್ತೆ ಫೇಸ್‌ಬುಕ್ ಪೋಸ್ಟ್‌ನಲ್ಲಿ (Facebook post) ಹೇಳಿಕೊಂಡಿದ್ದರು. ಆದರೆ ಏಪ್ರಿಲ್ 26 ರಂದು ವಿಜಯ್ ಬಾಬು (Vijay Babu) ಈ ಆರೋಪಕ್ಕೆ ತಿರುಗೇಟು ನೀಡಿದ್ದರು.  ಫೇಸ್‌ಬುಕ್‌ನಲ್ಲಿ ಲೈವ್ (live on Facebook) ಬಂದ ನಟ ವಿಜಯ್‌ ನನಗೆ ಚಿತ್ರಹಿಂಸೆ ನೀಡುತ್ತಿರುವುದು ಯುವತಿ ಎಂದು ಆರೋಪಿಸಿದ ಆತ ನಾನೇ ಈ ಪ್ರಕರಣದ ನಿಜವಾದ ಬಲಿಪಶು ಎಂದು ಹೇಳಿಕೊಂಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ