ಕೆಜಿಎಫ್ ನಟಿ ಮೌನಿ ರಾಯ್‌ ಬಿಕಿನಿ ಆಕರ್ಷಣೆಯಲ್ಲಿ ಈ ಉದ್ಯಮಿ ಮಾಡಿದ್ದೇನು ನೋಡಿ!

By Suvarna NewsFirst Published Apr 25, 2023, 12:36 PM IST
Highlights

ಕೆಜಿಎಫ್ ಮೊದಲ ಭಾಗದಲ್ಲಿ ಹಾಡೊಂದಕ್ಕೆ ಮಾದಕವಾಗಿ ಹೆಚ್ಚೆ ಹಾಕಿ ಗಮನ ಸೆಳೆದ ನಟಿ ಮೌನಿ ರಾಯ್. ಇದೀಗ ಈಕೆಯ ಬಿಕಿನಿ ಆಕರ್ಷಣೆಗೆ ಸಿಲುಕಿದ ಉದ್ಯಮಿ ಅಶ್ಮೀರ್ ಗ್ರೋವರ್ ಮಾಡಿದ್ದೇನು ನೋಡಿ.

ಮಾದಕತೆಗೆ ಇನ್ನೊಂದು ಹೆಸರಿನ ಹಾಗಿರುವ ನಟಿ ಮೌನಿ ರಾಯ್. ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಮೌನಿ ರಾಯ್ ಸಿಕ್ಕಾಪಟ್ಟೆ ಬೋಲ್ಡ್ ಅನ್ನೋದು ಎಲ್ಲರಿಗೂ ಗೊತ್ತೇ ಇದೆ ಈಕೆ. ಇನ್‌ಸ್ಟಾಗ್ರಾಂನಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ. ಅನೇಕರು ಈಕೆ ಇದರಲ್ಲಿ ಶೇರ್ ಮಾಡುವ ಬೋಲ್ಡ್ ಫೋಟೊಗಳಿಗೆ ಎದುರು ನೋಡುತ್ತಿರುತ್ತಾರೆ. ಅವರನ್ನು ನಿರಾಸೆ ಮಾಡದೇ ಈಕೆ ಮಾದಕ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈಕೆಯನ್ನು ಫಾಲೋ ಮಾಡೋರ ಸಂಖ್ಯೆ ಬಹಳಷ್ಟಿದೆ. ಸುಮಾರು 26.9 ಮಿಲಿಯನ್ ಮಂದಿ ಈಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ವಿಶೇಷ ಅಂದರೆ ಇವರಲ್ಲಿ ಆಗರ್ಭ ಶ್ರೀಮಂತ ಉದ್ಯಮಿಗಳೂ ಅನೇಕರಿದ್ದಾರೆ. ಅಂಥವರಲ್ಲಿ ಜನಪ್ರಿಯ ಬ್ಯುಸಿನೆಸ್ ಶೋ ಶಾರ್ಕ್ ಟ್ಯಾಂಕ್ ಸೀಸನ್ 1ರ ಜಡ್ಜ್ ಅಶ್ಮೀರ್ ಗ್ರೋವರ್ ಕೂಡ ಆಗಿದ್ದವರು.

ಹಾಗೆ ನೋಡಿದವರೆ ಬೇರೆ ಭಾಷೆಯವರು ಮೌನಿ ರಾಯ್‌ ಅನ್ನು ಬಾಲಿವುಡ್ ನಟಿ ಅಂತ ಗುರುತಿಸಿಕೊಂಡರೆ ಕನ್ನಡಿಗರು ಆಕೆಯನ್ನು ಕನ್ನಡ ಸಿನಿಮಾ ಮೂಲಕವೇ ಗುರುತಿಸುತ್ತಾರೆ. ರಾಕಿ ಭಾಯ್ ಯಶ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1'ರ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದರು. ಈಕೆ ಬಿಕಿನಿ ಆಕರ್ಷಣೆಗೆ ಸಿಲುಕಿದ ಉದ್ಯಮಿಯೊಬ್ಬರು ಏನು ಮಾಡಿದ್ರು ಅನ್ನೋದು ಇದೀಗ ಸಖತ್ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಈ ಮೂಲಕ ಪೇಚಿಗೆ ಸಿಲುಕಿದ ಉದ್ಯಮಿ ಅಶ್ನೀರ್ ಗ್ರೋವರ್. ಅಸಲಿಗೆ ಅವರನ್ನು ಪೇಚಿಗೆ ಸಿಲುಕಿಸಿದ ಘಟನೆಯನ್ನು ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Upasana Kamineni: ರಾಮ್ ಚರಣ್ ಪತ್ನಿಯ ಅದ್ದೂರಿ ಸೀಮಂತ; ಸಾನಿಯಾ ಮಿರ್ಜಾ, ಅಲ್ಲು ಅರ್ಜುನ್ ಸೇರಿ ಅನೇಕರು ಭಾಗಿ

ದೇಶದ ಯಶಸ್ವಿ ಬ್ಯುಸಿನೆಸ್ ಮ್ಯಾನ್ ಆಗಿ ಗುರುತಿಸಿಕೊಂಡವರು 40 ವರ್ಷದ ಅಶ್ನೀರ್ ಗ್ರೋವರ್. ಇವರು ಭಾರತದ ಜನಪ್ರಿಯ ಉದ್ಯಮಿ. ಭಾರತ್ ಪೇ ಸಂಸ್ಥೆ ಮಾಜಿ ಸಂಸ್ಥಾಪಕ ಹಾಗೂ ಎಂಡಿ ಆಗಿದ್ದವರು. ಇತ್ತೀಚೆಗೆ ಕಿರುತೆರೆಯಲ್ಲಿ ಜನಪ್ರಿಯವಾಗಿರುವ 'ಶಾರ್ಕ್ ಟ್ಯಾಂಕ್‌ ಇಂಡಿಯಾ' ಸೀಸನ್ 1ರ ಜಡ್ಜ್ ಆಗಿದ್ದರು. ಆ ಜನಪ್ರಿಯ ಶೋ(Show) ಮೂಲಕ ಎಲ್ಲೆಡೆ ಮನೆಮಾತಾದರು. ಆದರೆ ಕೆಲವು ಸಮಯದ ಹಿಂದೆ ವಿವಾದಕ್ಕೆ ಸಿಲುಕಿದ್ದ ಅಶ್ನೀರ್ 'ಭಾರತ್ ಪೇ'ಯಿಂದ ಹೊರಬರಬೇಕಾಯಿತು. ಹಾಗಂತ ಆಶ್ನೀರ್ ಗ್ರೋವರ್ ಜನಪ್ರಿಯತೆ ಇನ್ನೂ ಕಡಿಮೆಯಾಗಿಲ್ಲ. ಅವರು ಈಗ ಈಗ ಥರ್ಡ್ ಯುನಿಕಾರ್ನ್ ಅನ್ನೋ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ.

ಇತ್ತೀಚೆಗೆ ಉದ್ಯಮಿ ಅಶ್ನೀರ್ ಗ್ರೋವರ್ ಹಾಗೂ ಪತ್ನಿ ಮಾಧುರಿ ಜೈನ್ ಇಬ್ಬರೂ 'ಕಪಲ್ ಆಫ್ ಥ್ರಿಂಗ್ಸ್'(Couple of things) ಅನ್ನೋ ಶೋನಲ್ಲಿ ಭಾಗವಹಿಸಿದ್ದರು. ಇದನ್ನು ಬಾಲಿವುಡ್ ನಟಿ ಅಮೃತಾ ರಾವ್ ಹಾಗೂ ಆರ್‌ಜೆ ಅನ್‌ಮೋಲ್ ನಡೆಸಿಕೊಡುತ್ತಾರೆ. ಈ ವೇಳೆ ಮೌನಿ ರಾಯ್ ಬಿಕಿನಿ ಫೋಟೊ ಲೈಕ್ ಮಾಡಿದ್ದಕ್ಕೆ ಹೆಂಡತಿಯ ಸಿಟ್ಟಿಗೆ ಸಿಲುಕಿದ್ದಾಗಿ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಅಂದು ಸಿಕ್ಕಾಪಟ್ಟೆ ಭಯ(Fear) ಪಟ್ಟಿದ್ದರಂತೆ. 'ನಾನು ಇನ್‌ಸ್ಟಾಗ್ರಾಂ(Instagram)ನಲ್ಲಿ ಕೆಲವೇ ಮಂದಿಯನ್ನು ಫಾಲೋ ಮಾಡುತ್ತೇನೆ. ಕೇವಲ 60 ಮಂದಿ ಅಷ್ಟೇ. ಆ ಜನರಲ್ಲಿ ಮೌನಿ ರಾಯ್ ಅವರನ್ನು ಫಾಲೋ ಮಾಡುತ್ತಿದೆ. ಮೌನಿ ರಾಯ್ ಬಿಕಿನಿಯಲ್ಲಿ ಒಂದು ಫೋಟೊ ಪೋಸ್ಟ್ ಮಾಡಿದ್ದರು. ನಾನು ಲೈಕ್ ಮಾಡಿದೆ. ಮನೆಗೆ ಬಂದಾಗ ನನ್ನ ಹೆಂಡ್ತಿ ಕೋಪಗೊಂಡಿದ್ದಳು' ಎಂದು ಅಶ್ನೀರ್ ಗ್ರೋವರ್ ಅಂದಿನ ಘಟನೆಯನ್ನು ನೆನೆಸಿದ್ದಾರೆ. ಕೊನೆಗೆ ಅವರು ಈ ಕಾರಣಕ್ಕಾಗಿ ಮೌನಿ ರಾಯ್ ಅವರನ್ನು ಅನ್‌ಫಾಲೋ ಮಾಡಬೇಕಾಯಿತಂತೆ. ಉದ್ಯಮಿ ಅಶ್ಮೀರ್ ಗ್ರೋವರ್ ಹಾಗೂ ಮಾಧುರಿ ಜೈನ ವೈವಾಹಿಕ ಜೀವನಕ್ಕೆ ಕಾಲಿಟ್ಟು 17 ವರ್ಷಗಳಾಗಿವೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ.

Kiara Advani: ಮದ್ವೆಯಾದ ಮೇಲೆ ಹರಿದಾಡ್ತಿಗೆ ಬೆತ್ತಲೆ ಫೋಟೋ- ಏನಪ್ಪಾ ಅಂತಿದ್ದಾರೆ ನೆಟ್ಟಿಗರು!

click me!