ಬಟ್ಟೆಗೂ ನಾನು ದುಡ್ಡು ಕೊಡ್ಬೇಕು ಅಂದ್ರೆ ಅಲ್ಲ: ಬೇಸರ ವ್ಯಕ್ತ ಪಡಿಸಿದ ನಟಿ ರಾಜಶ್ರೀ

Published : Apr 20, 2023, 01:26 PM IST
ಬಟ್ಟೆಗೂ ನಾನು ದುಡ್ಡು ಕೊಡ್ಬೇಕು ಅಂದ್ರೆ ಅಲ್ಲ: ಬೇಸರ ವ್ಯಕ್ತ ಪಡಿಸಿದ ನಟಿ ರಾಜಶ್ರೀ

ಸಾರಾಂಶ

ಬಟ್ಟೆಗೂ ನಾನು ದುಡ್ಡು ಕೊಡಬೇಕು ಅವಾರ್ಡ್‌ಗೂ ನಾನು ದುಡ್ಡು ಕೊಡಬೇಕು. ಬದಲಿಗೆ ಮತ್ತೊಂದು ಜಾಗದಲ್ಲಿ ಹಣ ಖರ್ಚು ಮಾಡುವೆ....

Angry Indian Goddesses ಚಿತ್ರದಲ್ಲಿ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿ-ಟೌನ್‌ನಲ್ಲಿ ಹೆಸರು ಮಾಡಿರುವ ನಟಿ ರಾಜಶ್ರೀ ದೇಶಪಾಂಡೆ ಮೊದಲ ಸಲ ಕಾಂಟ್ರವರ್ಷಿಯಲ್ ಹೇಳಿಕೆ ನೀಡಿದ್ದಾರೆ. ಟ್ವಿಟರ್‌ನಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಸಮ್ಮರ್ ವೆಕೇಷನ್ ಎಂಜಾಯ್ ಮಾಡುತ್ತಿರುವ ರಾಜಶ್ರೀ ಬೀಜ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಬರೆದಿರುವ ಸಾಲುಗಳು ವೈರಲ್ ಆಗಿತ್ತು. 

'ಸುಂದರವಾಗಿ ಅಲಂಕಾರ ಮಾಡಿಕೊಳ್ಳುವುದಕ್ಕೆ ಹಣ ಕೊಡಬೇಕು ಎಂದು ಹೇಳಿದ್ದರು, ಮ್ಯಾಗಜಿನ್ ಕವರ್‌ನಲ್ಲಿ ಸುದ್ದಿಯಾಗುವುದಕ್ಕೆ ಹಣ ಕೊಡಬೇಕಿತ್ತು ಅಷ್ಟೇ ಅಲ್ಲ ಅವಾರ್ಡ್‌ ಕಾರ್ಯಕ್ರಮದಲ್ಲಿ ಅವಾರ್ಡ್‌ ಪಡೆಯುವುದಕ್ಕೆ ಹಣ ಕೊಡಬೇಕಿತ್ತು. ಅವರಿಗೆ ಹಣ ಕೊಟ್ಟು ಪಡೆಯುವುದಕ್ಕಿಂತ ಅದೇ ಹಣದಿಂದ ದೇಶ ಸುತ್ತೋಣ ಎಂದು ಟ್ರ್ಯಾವಲಿಂಗ್‌ನಲ್ಲಿ ಬ್ಯುಸಿಯಾಗಿರುವೆ. ಪರ್ವತ ಮತ್ತು ಸಮುದ್ರಗಳ ನಡುವೆ ನಗುತ್ತಾ ದಿನ ಎಂಜಾಯ್ ಮಾಡುತ್ತಾರೆ. ನಾನು ಸರಿಯಾಗಿ ಹೇಳುತ್ತಿರುವೆ ಅಲ್ವಾ?' ಎಂದು ಟ್ವೀಟ್ ಮಾಡಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ರಾಜಶ್ರೀ ದೇಶಪಾಂಡೆ ಟ್ವೀಟ್‌ ಬಗ್ಗೆ ನೆಟ್ಟಿಗರು ಚರ್ಚೆ ಮಾಡಿದ್ದಾರೆ. 

ರಾಘವೇಂದ್ರ ಸ್ಟೋರ್ಸ್‌ನಲ್ಲಿ ವ್ಯಾಪಾರಕ್ಕೆ ನಿಂತ ನಟಿ ಶ್ವೇತಾ ಶ್ರೀವಾಸ್ತವ್ ಫೋಟೋ ವೈರಲ್?

'ಅಪಾರ ಪ್ರೀತಿಯನ್ನು ನಿಮಗೆ ಕಳುಹಿಸುತ್ತಿರುವೆ. ಬೆಸ್ಟ್‌ ದಾರಿಯಲ್ಲಿ ಜೀವನ ನಡೆಸುತ್ತಿರುವೆ. ದೇಶ ಸುತ್ತಿ ವಿಚಾರ ತಿಳಿದುಕೊಳ್ಳುವುದರ ಮುಂದೆ ಈ ಅವಾರ್ಡ್ ಏನೂ ಇಲ್ಲ' ಎಂದು ದಾನಿಶ್ ಮತ್ತು ಶ್ರಿಯಾ ಕಾಮೆಂಟ್ ಮಾಡಿದ್ದಾರೆ.

ಮಹರಾಷ್ಟ್ರದ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸಿರುವ ರಾಜಶ್ರೀ ಸಿಂಬಯೋಸಿಸ್ ಕಾನೂನು ಶಾಲೆಯಿಂದ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ ಹಾಗೂ ಜಾಹೀರಾತಿನಲ್ಲೂ ಪದವಿ ಪಡೆದಿದ್ದಾರೆ. ಕುಟುಂಬದ ಕಷ್ಟ ನೀಗಿಸಬೇಕು ಎಂದು ರಾಜಶ್ರೀ ಬೇಗ ಕೆಲಸ ಆರಂಭಿಸಿದ್ದರು ಆದರೆ ಅಷ್ಟರಲ್ಲಿ ಆಕೆಗೆ ಆಕ್ಟಿಂಗ್‌ನಲ್ಲಿ ಆಫರ್‌ ಪಡೆದುಕೊಂಡರು. ಸಿನಿಮಾ ಮಾಡುತ್ತಲೇ ಮುಂಬೈನ ವಿಸ್ಲಿಂಗ್ ವುಡ್ಸ್ ಇಂಟರ್‌ನ್ಯಾಶನಲ್‌ನಿಂದ ಫಿಲ್ಮ್‌ಮೇಕಿಂಗ್‌ನಲ್ಲಿ ಡಿಪ್ಲೊಮಾ ಕೂಡ ಪಡೆದಿದ್ದಾರೆ.

2012ರಲ್ಲಿ ಅಮಿರ್ ಖಾನ್‌ ತಲಾಷಾ ಸಿನಿಮಾ ಮೂಲಕ ಬಿ-ಟೌನ್‌ಗೆ ಕಾಲಿಟ್ಟರು.  ಅದಾದ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಸುಮಾರು 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ. ನವದೀಪ್ ಪುರಾಣಿಕ್ ಜೊತೆ ಮದುವೆಯಾಗಿದ್ದರೂ ರಾಜಶ್ರೀ ಬೋಲ್ಡ್‌ ಅವತಾರಕ್ಕೆ ಏನೂ ಕಡಿಮೆ ಇಲ್ಲ. 

ಕೊರೋನಾ ಸಮಯದಲ್ಲಿ ರಾಜಶ್ರೀಗೆ ಶಾರುಖ್ ಖಾನ್ ಸಹಾಯ ಮಾಡಿದ್ದರು ಎನ್ನಲಾಗಿದೆ. 'ಕೊರೋನಾ ಸಮಯದಲ್ಲಿ ನನಗೆ, ಕೇರಳ, ಮರತವಾಡ ಮತ್ತು ಛತ್ತೀಸ್‌ಗಢಕ್ಕೆ ಶಾರುಖ್ ತಮ್ಮ ಮೀರ್ ಸಂಸ್ಥೆ ಮೂಲಕ ಸಹಾಯ ಮಾಡಿದ್ದರು. ಇಂದು ಫಿಲ್ಮಂ ಕಂಪ್ಯಾನಿಯನ್ ಸಂಸ್ಥೆ ನಮ್ಮನ್ನು ಜನವರಿಯ ಬೆಸ್ಟ್‌ ಕಲಾವಿದರು ಎಂದು ಹೇಳಿದೆ. ಕಿಂಗ್ ಖಾನ್‌ ಅವರನ್ನು ಎಲ್ಲಿ ಭೇಟಿ ಮಾಡುತ್ತೀನಿ ಗೊತ್ತಿಲ್ಲ ಆದರೆ ಅವರ ಜೊತೆ ಕೆಲಸ ಮಾಡುವುದು ನನ್ನ ದೊಡ್ಡ ಕನಸು' ಎಂದು ರಾಜಶ್ರೀ ಟ್ವೀಟ್ ಮಾಡಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?