ಲಾಠಿ ಚಿತ್ರದ ಶೂಟಿಂಗ್ ವೇಳೆ ನಟ ವಿಶಾಲ್‌ಗೆ ಗಾಯ,ಚಿತ್ರೀಕರಣ ರದ್ದು!

Published : Jul 04, 2022, 08:59 PM ISTUpdated : Jul 04, 2022, 09:07 PM IST
ಲಾಠಿ ಚಿತ್ರದ ಶೂಟಿಂಗ್ ವೇಳೆ ನಟ ವಿಶಾಲ್‌ಗೆ ಗಾಯ,ಚಿತ್ರೀಕರಣ ರದ್ದು!

ಸಾರಾಂಶ

ಶೂಟಿಂಗ್ ವೇಳೆ ನಟ ವಿಶಾಲ್ ಕಾಲಿಗೆ ಗಾಯ ಲಾಠಿ ಚಿತ್ರದ ಶೂಟಿಂಗ್ ವೇಳೆ‌ ಅವಘಡ ಕಳೆದ ತಿಂಗಳು ಕೈಗೆ ಗಾಯವಾಗಿ ಚಿಕಿತ್ಸೆ

ಚೆನ್ನೈ(ಜು.04): ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ತಯರಾಗುತ್ತಿರುವ ಲಾಠಿ ಸಿನಿಮಾ ಶೂಟಿಂಗ್ ವೇಳೆ ಅವಘಡ ನಡೆದಿದೆ. ಚಿತ್ರದ ನಟ ವಿಶಾಲ್ ಕಾಲಿಗೆ ಗಾಯವಾಗಿದೆ. ಇದರಿಂದ ಲಾಠಿ ಸಿನಿಮಾ ಚಿತ್ರೀಕರಣ ರದ್ದು ಮಾಡಲಾಗಿದೆ. ವಿಶಾಲ್‌ಗೆ ಚಿಕಿತ್ಸೆ ನೀಡಲಾಗಿದೆ.

ಲಾಠಿ ಚಿತ್ರದ ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್‌ನಲ್ಲಿ ಈ ಅವಘಡ ಸಂಭವಿಸಿದೆ. ಆ್ಯಕ್ಷನ್ ಸೀನ್ ಚಿತ್ರೀಕರಣ ಮಾಡುವ ವೇಳೆ ಈ ಘಟನೆ ನಡೆದಿದೆ. ಅವಘಡದಲ್ಲಿ ವಿಶಾಲ್ ಕಾಲಿಗೆ ಗಾಯವಾಗಿದೆ. ತಕ್ಷಣವೇ ವಿಶಾಲ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. 

ಲಾಠಿ ಚಿತ್ರದಲ್ಲಿ ವಿಶಾಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳು ಇದೇ ಲಾಠಿ ಚಿತ್ರದ ಶೂಟಿಂಗ್ ವೇಳೆ ಕೈಗೆ ಗಾಯಮಾಡಿಕೊಂಡಿದ್ದರು. ಕೈ ಹಾಗೂ ಬೆರಳು ಮೂಳೆ ಮುರಿತಗೊಂಡಿತ್ತು. ಹೀಗಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದಿದ್ದ ವಿಶಾಲ್ ಚೇತರಿಸಿಕೊಂಡು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದರು. 

ಕೈಗೆ ಆಗಿದ್ದ ಗಾಯಕ್ಕೆ ಕೇರಳದ ಆಯುರ್ವೇದ ಚಿಕಿತ್ಸೆ ಪಡೆದಿದ್ದ ವಿಶಾಲ್, ವೇಗವಾಗಿ ಚೇತರಿಸಿಕೊಂಡಿದ್ದರು. ಬಳಿಕ ಹೈದರಾಬಾದ್‌ನಲ್ಲಿ ಲಾಠಿ ತಂಡವನ್ನು ಸೇರಿಕೊಂಡು ಚಿತ್ರೀಕರಣ ಮುಂದುವರಿಸಿದ್ದರು. ಇದೀಗ ಕಾಲಿಗೆ ಗಾಯವಾಗಿದ್ದು ವಿಶಾಲ್ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಲಾಠಿ ಚಿತ್ರ ತಂಡ ಹೇಳಿದೆ. 

ಕ್ಲಮ್ಯಾಕ್ಸ್ ಹಂತದ ಆ್ಯಕ್ಷನ್ ಸೀನ್‌ಗಳನ್ನು ಖ್ಯಾತ ಸ್ಟಂಟ್ ಕೊರಿಯೋಗ್ರಾಫರ್ ಪೀಟರ್ ಹೈನ್ ನಿರ್ದೇಶನದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?