ಪಠಾಣ್ ಚಿತ್ರದ ಯಶಸ್ಸಿನ ಬಳಿಕವೂ ಟಾಪರ್ ಲಿಸ್ಟ್ ನೋಡಿದಾಗ ಶಾರುಖ್ ಖಾನ್ ಹಾಗೂ ಅವರ ಅಭಿಮಾನಿಗಳಿಗೆ ಶಾಕ್ ಆಗುವಂಥ ಸುದ್ದಿ ಹೊರಬಂದಿದೆ. ಏನದು?
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ (Pathaan) ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವುದು ಮಾತ್ರವಲ್ಲದೇ ಚಿತ್ರ ಬಿಡುಗಡೆಯಾಗಿ ಒಂದೇ ವಾರದಲ್ಲಿ 600 ಕೋಟಿ ರೂಪಾಯಿ ಸಂಗ್ರಹಿಸಿದೆ ಎನ್ನಲಾಗುತ್ತಿದೆ. ಬೈಕಾಟ್ ಬಿಸಿಯ ನಡುವೆಯೂ ಶಾರುಖ್, ದೀಪಿಕಾ ಅಭಿಮಾನಿಗಳು ಇವರ ಕೈಬಿಟ್ಟಿಲ್ಲ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪಠಾಣ್ ಅಬ್ಬರಿಸುತ್ತಿದೆ. ಇದಾಗಲೇ ಹಲವಾರು ದಾಖಲೆಗಳನ್ನೂ ಪಠಾಣ್ ಮುರಿದಿದೆ. ಕೆಜಿಎಫ್ 2 ಅನ್ನೂ ಮೀರಿಸಿ ಪಠಾಣ್ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಗೊಂಡ ಆರು ದಿನಗಳಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ 27.56 ಮಿಲಿಯನ್ ಡಾಲರ್ (ಸುಮಾರು 224.6 ಕೋಟಿ ರೂಪಾಯಿ) ಗಳಿಸಿದ್ದು, ಅದರ ದೇಶೀಯ ನಿವ್ವಳ ಗಳಿಕೆಯು ಪ್ರಸ್ತುತ 307.25 ಮಿಲಿಯನ್ (ಹಿಂದಿ 296.50 ಕೋಟಿ ರೂ ಹಾಗೂ ಡಬ್ಬಿಂಗ್ 10.75 ಕೋಟಿ ರೂ) ಎನ್ನಲಾಗಿದೆ.
ಇಷ್ಟೆಲ್ಲಾ ಅಬ್ಬರದಿಂದ ಪಠಾಣ್ ಮುನ್ನುಗ್ಗುತ್ತಿದ್ದರೂ, ಶಾರುಖ್ ಖಾನ್ (Sharukh Khan) ಹಾಗೂ ಅವರ ಅಭಿಮಾನಿಗಳಿಗೆ ಒಂದು ಬ್ಯಾಡ್ ನ್ಯೂಸ್ ಬಂದಿದೆ. ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬ್ರೇಕ್ ನಂತರ ಪಠಾಣ್ಗೆ ಕಮ್ ಬ್ಯಾಕ್ ಮಾಡಿದ್ದರು. ಆದರೆ ಇದರ ಬೆನ್ನಲ್ಲೇ ಪಟ್ಟಿಯೊಂದು ಬಿಡುಗಡೆಯಾಗಿತ್ತು. ಶಾರುಖ್ ಬಾಲಿವುಡ್ (Bollywood) ಗೆ ಎಂಟ್ರಿ ಕೊಟ್ಟು ಮೂರು ದಶಕ ಮೀರಿದ್ದರೂ, ಈ ಪಟ್ಟಿಯನ್ನು ಗಮನಿಸಿದಾಗ ಶಾರುಖ್ ಅಭಿನಯಿಸಿರುವ ಯಾವುದೇ ಚಿತ್ರವೂ ಗಳಿಕೆಯಲ್ಲಿ ಟಾಪ್ 20 ಸ್ಥಾನ ಪಡೆದುಕೊಂಡಿರಲಿಲ್ಲ. ಇದರ ಅರ್ಥ ಶಾರುಖ್ ಖಾನ್ ಅವರು ಹಲವಾರು ಸೂಪರ್ಹಿಟ್ (superhit) ಚಿತ್ರ ಕೊಟ್ಟಿದ್ದರೂ ಗಳಿಕೆಯನ್ನು ಪರಿಗಣನೆಗೆ ತೆಗೆದುಕೊಂಡರೆ ಇವರು ಅಭಿನಯಿಸಿದ್ದ ಯಾವ ಚಿತ್ರಗಳೂ ಟಾಪ್ 20ರ ಒಳಗೆ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದವು. ಇದೀಗ ಪಠಾಣ್ ಗಳಿಕೆಯಿಂದಾಗಿ ಈ ಸ್ಥಾನ ಶಾರುಖ್ಗೆ ದಕ್ಕಿದ್ದರೂ ಈಗಲೂ ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಂದಿದೆ.
Shah Rukh Khan: ಊರಿಗೆ ವಾಪಸ್ ಹೋಗೋಣ ಅನ್ನಿಸ್ತಿದೆ ಎಂದ ಶಾರುಖ್ ಖಾನ್!
ಅದೇನೆಂದರೆ, ಪಠಾಣ್ 600 ಕೋಟಿ ರೂಪಾಯಿ ಗಳಿಸಿದ್ದರೂ ಖಾನ್ ತ್ರಯರಾದ ಆಮೀರ್, ಸಲ್ಮಾನ್ ಹಾಗೂ ಶಾರುಖ್ ಇವರ ಪೈಕಿ ಶಾರುಖ್ ಖಾನ್ಗೆ ಕೊನೆಯ ಸ್ಥಾನವೇ ಉಳಿದುಕೊಂಡಿದೆ. ವಿಶ್ವಾದ್ಯಂತ ಕಲೆಕ್ಷನ್ (collection) ಮಾಡಿದ ಟಾಪ್ 10 ಚಿತ್ರಗಳನ್ನು ಗಮನಿಸಿದರೆ, ಅದರಲ್ಲಿ ಅಮೀರ್ ಖಾನ್ (Aamir Khan) ಗರಿಷ್ಠ ನಾಲ್ಕು ಚಿತ್ರಗಳನ್ನು ಹೊಂದಿದ್ದಾರೆ. ಮೂರು ಸಲ್ಮಾನ್ ಖಾನ್ (Salman Khan) ಮತ್ತು ಉಳಿದ 3 ರಲ್ಲಿ ಒಂದು ಶಾರುಖ್ ಖಾನ್, ಒಂದು ರಣಬೀರ್ ಕಪೂರ್ ಮತ್ತು ಒಂದು ರಣವೀರ್ ಸಿಂಗ್ ಇದ್ದು, ಶಾರುಖ್ ಇನ್ನೂ ಟಾಪ್ ಆಗಲು ಬಹಳಷ್ಟು ಶ್ರಮ ಪಡಬೇಕಾಗಿದೆ ಎಂದು ಸಿನಿ ವಿಶ್ಲೇಷಕರು ಹೇಳುತ್ತಿದ್ದಾರೆ.
ಇನ್ನು ವಿಶ್ವದಾದ್ಯಂತ ಟಾಪ್ 10 ಅತ್ಯಧಿಕ ಗಳಿಕೆಗಳ ಕುರಿತು ಹೇಳುವುದಾದರೆ, ಆಮೀರ್ ಖಾನ್ ಅವರ ನಾಲ್ಕು ಚಿತ್ರಗಳು ಟಾಪರ್ ಆಗಿವೆ. ಅವುಗಳ ಪೈಕಿ 'ದಂಗಲ್', 'ಸೀಕ್ರೆಟ್ ಸೂಪರ್ ಸ್ಟಾರ್', 'ಪಿಕೆ' ಮತ್ತು 'ಧೂಮ್ 3' (Dhoom 3) ಸೇರಿವೆ. ಈ ನಾಲ್ಕು ಚಿತ್ರಗಳು ವಿಶ್ವಾದ್ಯಂತ ಕ್ರಮವಾಗಿ 1968 ಕೋಟಿ, 875 ಕೋಟಿ, 769 ಕೋಟಿ ಮತ್ತು 556 ಕೋಟಿ ರೂಪಾಯಿ ಗಳಿಸಿವೆ. ಟಾಪರ್ ಲಿಸ್ಟ್ನಲ್ಲಿ ಈ ಚಿತ್ರಗಳ ಸ್ಥಾನ ಕ್ರಮವಾಗಿ ಮೊದಲ, ಮೂರನೇ, ನಾಲ್ಕು ಮತ್ತು ಹತ್ತನೇ ಸ್ಥಾನದಲ್ಲಿದೆ. ಇನ್ನು ಸಲ್ಲು ಭಾಯಿ ಅವರ ಬಗ್ಗೆ ಹೇಳುವುದಾದರೆ, ಅವರ ಮೂರು ಚಿತ್ರಗಳು ಟಾಪೆಸ್ಟ್ ಆಗಿವೆ. ಅವುಗಳೆಂದರೆ 'ಬಜರಂಗಿ ಭಾಯಿಜಾನ್' (Bhajarangi Bhaijan), 'ಸುಲ್ತಾನ್' (Sulthan) ಮತ್ತು 'ಟೈಗರ್ ಜಿಂದಾ ಹೈ'. ಇವು ಕ್ರಮವಾಗಿ ಎರಡು, ಐದು ಮತ್ತು ಒಂಬತ್ತನೇ ಸ್ಥಾನದಲ್ಲಿದ್ದು, ಇವುಗಳು ಕ್ರಮವಾಗಿ 918 ಕೋಟಿ, 614 ಕೋಟಿ ಮತ್ತು 564 ಕೋಟಿ ರೂಪಾಯಿ ಗಳಿಸಿವೆ.
ಶಾರುಖ್ ಖಾನ್ ಇಲ್ಲವೇ ಸೆಕ್ಸ್ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?
ಶಾರುಖ್ ಖಾನ್ ಅವರ ಏಕೈಕ ಚಿತ್ರ 'ಪಠಾಣ್' ಈ ಪಟ್ಟಿಯಲ್ಲಿ ಸೇರಿದೆ. ಸದ್ಯ ಚಿತ್ರ 6ನೇ ಸ್ಥಾನದಲ್ಲಿದೆ (ಜನವರಿ 30ರವರೆಗಿನ ಕಲೆಕ್ಷನ್ ಪ್ರಕಾರ). ಚಿತ್ರದ ಕಲೆಕ್ಷನ್ ಸುಮಾರು 600 ಕೋಟಿ ರೂ. ಈ ಪಟ್ಟಿಯಲ್ಲಿ ರಣಬೀರ್ ಕಪೂರ್ ಅವರ ಚಿತ್ರವೂ ಸೇರಿದೆ. ಆ ಚಿತ್ರ 'ಸಂಜು'. 7ನೇ ಸ್ಥಾನದಲ್ಲಿರುವ ಚಿತ್ರ ವಿಶ್ವಾದ್ಯಂತ ಸುಮಾರು 587 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ರಣವೀರ್ ಸಿಂಗ್ ಅಭಿನಯದ ಏಕೈಕ ಚಿತ್ರ 'ಪದ್ಮಾವತ್'(Padmavath) 8ನೇ ಸ್ಥಾನದಲ್ಲಿದ್ದು, ಈ ಚಿತ್ರದ ಕಲೆಕ್ಷನ್ ಸುಮಾರು 572 ಕೋಟಿ ರೂಪಾಯಿಗಳು.