Pathaan ದೆಹಲಿಯಲ್ಲಿ ಟಿಕೆಟ್‌ ಬೆಲೆ 2100 ರೂ.; ಮುಂಬೈ - ಬೆಂಗಳೂರು ಬೆಲೆ ಕೇಳಿ ಶಾಕ್ ಆಗ್ಬೇಡಿ

By Vaishnavi Chandrashekar  |  First Published Jan 19, 2023, 9:47 AM IST

ಸಿದ್ಧಾರ್ಥ್‌ ಆನಂದ್‌ ಪಠಾಣ್ ಸಿನಿಮಾದಲ್ಲಿ ಮಿಂಚಿತ್ತಿರುವ ಖಾನ್. ದೆಹಲಿ ಚಿತ್ರಮಂದಿರಗಳಲ್ಲಿ ಟಿಕೆಟ್‌ ಬೆಲೆ ಕೇಳಿ ಶಾಕ್ ಆದ ಜನರು....ಬೆಂಗಳೂರಲ್ಲಿ ಏನ್ ಕಥೆ?


ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯಿಸಿರುವ ಪಠಾಣ್ ಸಿನಿಮಾ ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಕಂಡಿದೆ.  ಸಿದ್ಧಾರ್ಥ್‌ ಆನಂದ್ ನಿರ್ದೇಶನ ಮಾಡಿರುವ ಈ ಸಿನಿಮಾ ದಿನಕ್ಕೊಂದು ವಿಚಾರಕ್ಕೆ ಕಾಂಟ್ರವರ್ಸಿಯಲ್ಲಿತ್ತು. ಝೀರೋ ನಂತರ 5 ವರ್ಷಗಳ ಬ್ರೇಕ್‌ ಖಾನ್ ವೃತ್ತಿ ಜೀವನಕ್ಕೆ ಪಠಾಣ್ ಹಿಟ್‌ ಕೊಡಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಶಾರುಖ್ ಆಕ್ಟಿಂಗ್ ಹೇಗಿದೆ? ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಒಮ್ಮೆ ಸಿನಿಮಾ ನೋಡೋಣ ಅಂತ ಮನಸ್ಸು ಮಾಡಿದ್ದರೂ ಟಿಕೆಟ್ ಬೆಲೆ ಕೇಳಿ ಹಿಂದೆ ಸರಿಯುತ್ತಿದ್ದಾರೆ.

ಹೌದು! ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಈ ಪಿವಿಆರ್‌ ಸೆಲೆಕ್ಟ್‌ ಸಿಟಿ ವಾಕ್‌ನಲ್ಲಿ ಒಂದು ಟಿಕೆಟ್‌ ಬೆಲೆ 2100 ರೂಪಾಯಿ ಎನ್ನಲಾಗಿದೆ. ರೆಕ್ಲೈನರ್‌ಗಳ ಟಿಕೆಟ್‌ಗಳ  ಬೆಲೆ ಗಗನಕ್ಕೇರಿದೆ, ಮೊದಲ ದಿನವೇ ರಾತ್ರಿ 11 ಗಂಟೆ ಶೋ ಟಿಕೆಟ್‌ಗಳು ಫೂಲ್ ಸೋಲ್ಡ್‌ ಔಟ್ ಆಗಿದೆ. ಲಾಜಿಕ್ಸ್ ನೋಯ್ಡಾದಲ್ಲಿ ಒಂದು ಟಿಕೆಟ್‌ ಬೆಲೆ 1090 ರೂಪಾಯಿ ಆಗಿದ್ದು ಸಿಂಗಲ್ ಸ್ಕ್ರಿನ್‌ಗಳಲ್ಲಿ ಒಂದು ಟಿಕೆಟ್‌ಗೆ 700 ರೂಪಾಯಿ. 

Tap to resize

Latest Videos

ಮುಂಬೈನ ಪಿವಿಆರ್‌ ಐಕಾನ್‌ನಲ್ಲಿ ಲೋವರ್ ಪ್ಯಾರೆಲ್‌ಗಳಲ್ಲಿ ರಾತ್ರಿ 11 ಗಂಟೆ ಶೋಗೆ ಒಂದು ಟಿಕೆಟ್‌ ಬೆಲೆ 1450 ರೂಪಾಯಿ. ಅತಿ ಕಡಿಮೆ ಸೌಲಭ್ಯವಿರುವ ಲೋಕಲ್ ಥಿಯೇಟರ್‌ಗಳಲ್ಲಿ ಪಠಾಣ್‌ ಚಿತ್ರದ ಒಂದು ಟಿಕೆಟ್‌ ಬೆಲೆ 300 ರೂ.ಯಿಂದ ಶುರುವಾಗಿ 850 ರೂ.ವರೆಗಿದೆ. ಕೋಲ್ಕತ್ತಾದಲ್ಲಿ ದಿನಕ್ಕೊಂದು ರೇಟ್‌ ತೋರಿಸುತ್ತಿದೆ, ನೈಟ್‌ ಶೋ ಟಿಕೆಟ್‌ಗಳು 650 ರೂ. ಇದೆ. ಸಿಟಿ ಏರಿಯಾದಲ್ಲಿ ಟಿಕೆಟ್‌ ಬೆಲೆ ಸಾವಿರ ಮುಟ್ಟಿದೆ ಎನ್ನಬಹುದು. 

ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗಿಂತ ಪಠಾಣ್ ಚಿತ್ರದ ಟಿಕೆಟ್‌ ದುಬಾರಿಯಾಗಿದೆ. 2D ಸ್ಕ್ರೀನ್‌ಗಳಲ್ಲಿ ಟಿಕೆಟ್‌ ಬೆಲೆ 230 ರೂ. ಯಿಂದ ಆರಂಭವಾಗಿದೆ 800 ರೂಪಾಯಿ ಮುಟ್ಟಿದೆ. ಮಾಲ್‌ಗಳಲ್ಲಿರುವ ಚಿತ್ರಮಂದಿರಗಳಲ್ಲಿ ಟಿಕೆಟ್‌ 900 ರೂ.ಯಿಂದ ಆರಂಭವಾಗಿ 1500 ರೂ. ಮುಟ್ಟಿದೆ. ಪುಣೆಯಲ್ಲಿ ಟಿಕೆಟ್ ಬೆಲೆ 650 ರೂ., ಹೈದರಾಬಾದ್‌ನಲ್ಲಿ 295 ರೂ. ಎನ್ನಲಾಗಿದೆ. ಆನ್‌ಲೈನ್‌ ಬುಕ್ಕಿಂಗ್‌ನಲ್ಲಿ ಬಹುತೇಕ ಫಾಸ್ಟ್‌ ಫಿಲಿಂಗ್ ಅಥವಾ ಸೋಲ್ಡ್‌ ಔಟ್‌ ಎಂದು ತೋರಿಸುತ್ತಿದೆ. 

'ಪಠಾಣ್'​ ವಿಲನ್​ ಜಾನ್​ ಅಬ್ರಾಹಂ ಅಲ್ಲ, ಹಾಗಿದ್ರೆ ಯಾರು? ಕ್ಲೈಮ್ಯಾಕ್ಸ್ ರಿವೀಲ್‌

ಮೊದಲ ದಿನ ಕಲೆಕ್ಷನ್: 

2013ರಲ್ಲಿ ಚೆನ್ನೈ ಎಕ್ಸ್‌ಪ್ರೆಸ್‌ ಸಿನಿಮಾ ನಂತರ ಶಾರುಖ್‌ ಖಾನ್‌ ಹೇಳಿಕೊಳ್ಳುವಂತಹ ಸೂಪರ್ ಹಿಟ್‌ ಗೆಲುವು ಕಾಣಲಿಲ್ಲ. ಪಠಾಣ್‌ ಒಳ್ಳೆಯ ಕಮ್‌ ಬ್ಯಾಕ್‌ ಕೊಡಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಏಕೆಂದರೆ 57ನೇ ವಯಸ್ಸಿನಲ್ಲೂ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡು ಮನೋರಂಜಿಸಲು ಮುಂದಾಗಿರುವುದಕ್ಕೆ. ಸಾಮಾಜಿಕ ಜಾಲತಾಣದಲ್ಲಿ  ಕೆಜಿಎಫ್ 2’ ಸಿನಿಮಾವನ್ನು ಪಠಾಣ್​ ಹಿಂದಿಕ್ಕಲಿ ಎಂದು ಶಾರುಖ್​, ದೀಪಿಕಾ ಅಭಿಮಾನಿಗಳು ಹೇಳುತ್ತಿದ್ದಾರೆ. ಕೆಜಿಎಫ್ 2 ಸಿನಿಮಾ ಬಾಲಿವುಡ್‌ನಲ್ಲಿ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಸಿತ್ತು.ಸಾಗರೋತ್ತರ ಮುಂಗಡ ಬುಕ್ಕಿಂಗ್ ವಿಚಾರದಲ್ಲಿ ಚಿತ್ರ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಚಿತ್ರ ಕೆಜಿಎಫ್ 2 ಚಿತ್ರವನ್ನು ಹಿಂದಿಕ್ಕಿದೆ. ವರದಿ ಪ್ರಕಾರ ಪಠಾಣ್ 1.32 ಕೋಟಿ ಗಳಿಸಿದೆ. ಆದ್ದರಿಂದ 1.2 ಕೋಟಿ ರೂಪಾಯಿ ಗಳಿಸಿದ್ದ  ಕೆಜಿಎಫ್ 2 ದಾಖಲೆಯನ್ನು ಅದು ಹಿಂದಿಕ್ಕಿದೆ.

click me!