ತುಂಡುಡುಗೆ ಸಹವಾಸ ಉರ್ಫಿಗೆ ಸಂಕಟ, ರಕ್ಷಣೆ ನೀಡುವಂತೆ ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ!

Published : Jan 18, 2023, 04:55 PM IST
ತುಂಡುಡುಗೆ ಸಹವಾಸ ಉರ್ಫಿಗೆ ಸಂಕಟ, ರಕ್ಷಣೆ ನೀಡುವಂತೆ ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ!

ಸಾರಾಂಶ

ಪ್ರತಿ ದಿನ ಸುದ್ದಿಯಲ್ಲಿರುವ ನಟಿ, ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ನಾಯಕಿ ಎಚ್ಚರಿಕೆ ಬೆನ್ನಲ್ಲೇ ಇದೀಗ ಉರ್ಫೀಗೆ ಬೆದರಿಕೆ ಹೆಚ್ಚಾಗಿದೆ. ಹೀಗಾಗಿ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದ ಉರ್ಫಿಗೆ ರಕ್ಷಣೆ ನೀಡಲು ಸೂಚನೆ ನೀಡಲಾಗಿದೆ. 

ಮುಂಬೈ(ಜ.18): ಕಿರುತೆರೆ ನಟಿ ಉರ್ಫಿ ಜಾವೇಜ್ ಭಾರತ ಮಾತ್ರವಲ್ಲ ವಿದೇಶದಲ್ಲೂ ಭಾರಿ ಜನಪ್ರಿಯರಾಗಿದ್ದಾರೆ. ತುಂಡುಡುಗೆ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಉರ್ಫಿ ಜಾವೇದ್‌ ಸದ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿ ಬಾರಿ ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಆಕ್ರೋಶಗಳು ಹೆಚ್ಚಾಗುತ್ತದೆ. ಇತ್ತೀಚಗೆ ಬಿಜೆಪಿ ನಾಯಕ ಚೈತ್ರಾ ವಾಘ್ ಎಚ್ಚರಿಕೆ ನೀಡಿದ್ದರು. ಉರ್ಫಿ ಜಾವೇದ್ ನಗ್ನತೆ ಪ್ರದರ್ಶಿಸಿಸುತ್ತಿದ್ದಾರೆ. ಇದು ಸಮಾಜಕ್ಕೆ ಮಾರಕ ಎಂದು ಬೆದರಿಕೆ ಹಾಕಿದ್ದರು. ಚೈತ್ರಾ ವಾಘ್ ಎಚ್ಚರಿಕೆ ಬೆನ್ನಲ್ಲೇ ಇದೀಗ ಉರ್ಫೀ ಜಾವೇದ್‌ಗೆ ಬೆದರಿಕೆ ಹೆಚ್ಚಾಗಿದೆ. ಹೀಗಾಗಿ ಮಹಿಳಾ ಆಯೋಗದ ಮೊರೆ ಹೋಗಿದ್ದರು. ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಉರ್ಫಿ ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ, ಮುಂಬೈ ಪೊಲೀಸರಿಗೆ ಮಹತ್ವದ ಸೂಚನೆ ನೀಡಿದೆ. ಉರ್ಫಿ ಜಾವೇದ್‌ಗೆ ರಕ್ಷಣೆ ನೀಡುವಂತೆ ಸೂಚಿಸಿದೆ.

ಸಂದರ್ಶನವೊಂದರಲ್ಲಿ ಚೈತ್ರಾ ವಾಘ್ (BJP lader Chaitra Wagh) ನಗ್ನತೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಉರ್ಫಿ ಜಾವೇದ್‌ಗೆ(Urfi Javed) ಥಳಿಸವುದಾಗಿ ಎಚ್ಚರಿಕೆ ನೀಡಿದ್ದರು.  ಈ ಕುರಿತು ಉರ್ಫಿ ಜಾವೇದ್ ವಕೀಲರು ಮಹಾರಾಷ್ಟ್ರ ಮಹಿಳಾ ಆಯೋಗದಲ್ಲಿ(Maharashtra State Women Commission) ದೂರು ನೀಡಿದ್ದರು. ಇಷ್ಟೇ ಅಲ್ಲ ಉರ್ಫಿ ಜಾವೇದ್‌ ಬೆದರಿಕೆ ಎದುರಿಸುತ್ತಿದ್ದಾರೆ. ಹೀಗಾಗಿ ರಕ್ಷಣೆ(Demand Security) ನೀಡುವಂತೆಯೂ ಮನವಿ ಮಾಡಿದ್ದರು.

ಬೋಲ್ಡ್ ಬಟ್ಟೆ ತಂದ ಸಂಕಷ್ಟ; ಪೊಲೀಸ್ ವಿಚಾರಣೆಗೆ ಹಾಜರಾದ ನಟಿ

ಮಹಾರಾಷ್ಟ್ರ ಮಹಿಳಾ ಆಯೋಗ ಉರ್ಫಿ ಜಾವೇದ್ ಮನವಿಗೆ ಸ್ಪಂದಿಸಿದೆ. ಈ ಕುರಿತು ಮುಂಬೈ ಪೊಲೀಸರಿಗೆ(Mumbai Police) ಸೂಚನೆ ನೀಡಿದೆ. ರಕ್ಷಣೆ ನೀಡುವಂತೆ ಸೂಚನೆ ನೀಡಿದೆ. 53(A)(B), 504, 506, 506(ii) ಐಪಿಸಿ ಸೆಕ್ಷನ್ ಅಡಿಯಲ್ಲಿ ಉರ್ಫಿ ಜಾವೇದ್ ದೂರು ದಾಖಲಿಸಿದ್ದಾರೆ. ಸಾರ್ವಜನಿಕ ಪ್ರದೇಶ ಸೇರಿದಂತೆ ಉರ್ಫಿ ಜಾವೇದ್‌ಗೆ ಬೆದರಿಕೆ ಇದೆ. ಹೀಗಾಗಿ ತಕ್ಷಣವೇ ರಕ್ಷಣೆ ನೀಡಬೇಕು. ಇಷ್ಟೇ ಅಲ್ಲ ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಚೈತ್ರಾ ವಾಘ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಇತ್ತ ಬಿಜೆಪಿ ನಾಯಕಿ ಚೈತ್ರಾ ವಾಘ್ ಕೂಡ ಉರ್ಫಿ ಜಾವೇದ್ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.  ಉರ್ಫಿ ಜಾವೇದ್ ನಗ್ನತೆ ಪ್ರದರ್ಶಿಸುತ್ತಿದ್ದಾರೆ. ನಗ್ನತೆ ಪ್ರದರ್ಶಿಸುತ್ತಾ ಮುಂಬೈ ರಸ್ತೆಯಲ್ಲಿ ಉರ್ಫಿ ಜಾವೇದ್ ಸಾಗುತ್ತಿದ್ದಾರೆ. ಮಹಿಳಾ ಕಮಿಷನ್ ಯಾಕೆ ಗಮನ ನೀಡುತ್ತಿಲ್ಲ ಎಂದು ಚೈತ್ರಾ ವಾಘ್ ಪ್ರಶ್ನಿಸಿದ್ದರು.

ಎದೆಯಿಂದ ಮೂಡಿಬಂದ ಕೊಂಬು; ಪೊಲೀಸ್‌ ಕಂಪ್ಲೇಂಟ್‌ ಆದ್ರೂ ಉರ್ಫಿ ಜಾವೇದ್ ಹುಚ್ಚಾಟ ಕಮ್ಮಿ ಅಗಿಲ್ಲ

ಉತ್ತೀಚಗೆ ಮುಂಬೈ ಪೊಲೀಸರು ಉರ್ಫಿ ಜಾವೇದ್ ವಿಚಾರಣೆ ಕರೆಸಿದ್ದರು. ಉರ್ಫಿ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಉತ್ತರ ಪಡೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ಜಾವೇದ್ ತುಂಡುಡುಗೆ ಮೂಲಕವೇ ಹೆಚ್ಚು ಜನಪ್ರಿಯರಾಗಿದ್ದಾರೆ. ಚಿತ್ರವಿಚಿತ್ರ ಉಡುಪುಗಳ ಮೂಲಕ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?