Pathaan Twitter Review; 'ಪಠಾಣ್' ಸಿನಿಮಾ ಹೇಗಿದೆ, ಶಾರುಖ್ ಖಾನ್ ನೋಡಿ ಫ್ಯಾನ್ಸ್ ಹೇಳಿದ್ದೇನು?

Published : Jan 25, 2023, 11:03 AM IST
Pathaan Twitter Review; 'ಪಠಾಣ್' ಸಿನಿಮಾ ಹೇಗಿದೆ, ಶಾರುಖ್ ಖಾನ್ ನೋಡಿ ಫ್ಯಾನ್ಸ್ ಹೇಳಿದ್ದೇನು?

ಸಾರಾಂಶ

ಶಾರುಖ್ ಖಾನ್ ನಟನೆಯ ಬಹುನಿರೀಕ್ಷೆಯ ಪಠಾಣ್ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. 

ಪಠಾಣ್, ಭಾರಿ ನಿರೀಕ್ಷೆ ಮತ್ತು ಕುತೂಹಲದಿಂದ ತೆರೆಗೆ ಬಂದ ಸಿನಿಮಾ. ಇಂದು (ಜನವರಿ 25) ಬೆಳಗ್ಗೆಯೇ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳು ಸಾರುಖ್ ನೋಡಿ ಫುಲ್ ಖುಷ್ ಆಗಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ಖಾನ್ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹಾಡುಗಳು ಮತ್ತು ಟ್ರೈಲರ್ ನಿಂದ ಭಾರಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿದ್ದ ಪಠಾಣ್ ಕೊನೆಗೂ ಚಿತ್ರಮಂದಿರಕ್ಕೆ ಅಪ್ಪಳಿಸಿದೆ. ಶಾರುಖ್ ಮತ್ತು ದೀಪಿಕಾ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಸಿನಿಮಾ ರಿಲೀಸ್ ಆಗಿದ್ದು ಅಭಿಮಾನಿಗಳು ಶಾರುಖ್ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪಠಾಣ್ ಸಿನಿಮಾದ ಬಗ್ಗೆ ಟ್ವಿಟ್ಟರ್ ನಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. ಚಿಕ್ಕದಾಗಿ ಶಾರುಖ್ ಮತ್ತು ಸಿದ್ಧಾರ್ಥ್ ಆನಂದ್ ಕಾಂಬಿನೇಷನ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, 'ಪಠಾಣ್ ಸಿನಿಮಾ ಹೈ ವೋಲ್ಟೇಜ್ ಆಕ್ಷನ್ ಸಿನಿಮಾ. ಸ್ಟೋರಿ ಲೈನ್ ಅದ್ಭುತವಾಗಿದೆ. ಶಾರುಖ್ ಖಾನ್ ನಟನೆಯ ಅತ್ಯುತ್ತಮವಾಗಿದೆ. ಜಾನ್ ಅಬ್ರಾಹಂ, ದೀಪಿಕಾ ಪಡುಕೋಣೆ ಕೂಡ ಸೂಪರ್. ಅನೇಕ ಸರ್ಪ್ರೈಸ್ ಮತ್ತು ಟ್ವಿಸ್ಟ್ ಗಳಿವೆ' ಎಂದು ಹೇಳಿದ್ದಾರೆ. ಸಿನಿಮಾಗೆ 5ಕ್ಕೆ 4.5 ಸ್ಟಾರ್ ಕೊಟ್ಟಿದ್ದಾರೆ.

'ಪಠಾಣ್' ತಂಡಕ್ಕೆ ದೊಡ್ಡ ಶಾಕ್; ರಿಲೀಸ್‌ಗೂ ಮೊದಲೇ ಲೀಕ್ ಆಯ್ತಾ ಶಾರುಖ್ ಖಾನ್ ಸಿನಿಮಾ?

ಮತ್ತೋರ್ವ ವ್ಯಕ್ತಿ ಸಿನಿಮಾದ ಬಗ್ಗೆ, ಇತ್ತೀಚಿಗಿನ ಸಿನಿಮಾಗಳಲ್ಲೇ ಶಾರುಖ್ ಸಿನಿಮಾ ಬೆಸ್ಟ್ ಆಗಿದೆ. ಜಾನ್ ಅಬ್ರಾಹಂ ಮತ್ತು ದೀಪಿಕಾ ಗ್ರೇಟ್. ಅತಿಥಿ ಪಾತ್ರ ತುಂಬಾ ಸರ್ಪ್ರೈಸ್ ಆಗಿದೆ. ನಂಬಲಸಾಧ್ಯ ಕ್ಲೈಮ್ಯಾಕ್ಸ್' ಎಂದು ಹೇಳಿದ್ದಾರೆ. 5ಕ್ಕೆ 4 ಸ್ಟಾರ್ ನೀಡಿದ್ದಾರೆ.

ಪಠಾಣ್, ನಟನೆ, ಆಕ್ಷನ್, ಸ್ಕ್ರೀನ್ ಪ್ಲೇ, ಬಿಜೆಎಂ, ಸಂಭಾಷಣೆ, ಟ್ವಿಸ್ಟ್ ಎಲ್ಲವೂ ಅದ್ಭುತ. ಸಿದ್ಧಾರ್ಥ್ ಆನಂದ್   , ಶಾರುಖ್ ಖಾನ್ ಅವರಿಗೆ ಭರ್ಜರಿ ಕಮ್ ಬ್ಯಾನ್ ನೀಡಿದ್ದಾರೆ.  ನನ್ನ ನಿರೀಕ್ಷೆಗಳು ಹೆಚ್ಚಿದ್ದವು ಆದರೆ ಪಠಾಣ್ ಇನ್ನೂ ಅವುಗಳನ್ನು ಮೀರಿದೆ. ಒಂದು ಅದ್ಭುತ ಅನುಭವ' ಎಂದು ಬರೆದುಕೊಂಡಿದ್ದಾರೆ.

ಪಠಾಣ್ ಸಿನಿಮಾ ಅನೇಕ ವಿವಾದಗಳನ್ನು ಎದುರಿಸಿ ಚಿತ್ರಮಂದಿರಕ್ಕೆ ಬಂದಿದೆ. ಸಿನಿಮಾ ಸಿನಿಮಾದ ಮೊದಲ ಹಾಡು ರಿಲೀಸ್ ಮಾಡಿದಾಗಿನಿಂದ ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿ ಮಾಡಿತ್ತು. ಬೇಷರಂಗ್ ರಂಗ್ ಹಾಡು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಈ ಹಾಡಿನಲ್ಲಿ ದೀಪಿಕಾ ಅತಿಯಾದ ಗ್ಲಾಮರ್ ಪ್ರದರ್ಶಿಸಿದ್ದಾರೆ, ಅಶ್ಲೀಲವಾಗಿದೆ, ಕೇಸರಿ ಬಣ್ಣದ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಅಂತ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಾಡನ್ನು ಬ್ಯಾನ್ ಮಾಡಬೇಕು, ಪಠಾಣ್ ಸಿನಿಮಾದ ವಿರುದ್ಧ ಬೈಕಾಟ್ ಟ್ರೆಂಡ್ ಜೋರಾಗಿತ್ತು. ಆದರೆ ಎಲ್ಲವನ್ನೂ ಎದುರಿಸಿ ಪಠಾಣ್ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಅಭಿಮಾನಿಗಳು ಶಾರುಖ್ ನೋಡಿ ಸಂಭ್ರಮಿಸುತ್ತಿದ್ದಾರೆ. ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎಂದು ಸಿನಿಮಾತಂಡ ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?