ನಿಮ್ಮ ನಟನೆಯಲ್ಲಿ ಪಾತ್ರವು ಬೆಳೆದಂತೆ ನಿಮ್ಮ ನಟನೆ ಕೂಡ ಬೆಳೆವಣಿಗೆ ಹೊಂದುತ್ತಿದೆ ಎನಿಸುತ್ತಿದೆ. ನಾನು ಈ ಬಗ್ಗೆ ತುಂಬಾ ಫ್ಯಾಸನೇಟ್ ಆಗಿದ್ದೇನೆ. ನಿಮ್ಮ ನಟನೆಯ ಪ್ರತಿಯೊಂದು ಸೂಕ್ಷ್ಮ ಸಂಗತಿಯನ್ನೂ ನಾನು ಗಮನಸುತ್ತಿದ್ದೇನೆ.
ಅದೊಂದು ಸಂದರ್ಶನದಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ಅಲ್ಲು ಅರ್ಜುನ್ ಕುಳಿತಿದ್ದಾರೆ. ನಟ ಅಲ್ಲು ಅರ್ಜುನ್ ತಮ್ಮ ನಟನೆಯ ಬಗ್ಗೆ ನಟಿ ರಶ್ಮಿಕಾ ಅಭಿಪ್ರಾಯವೇನು ಎಂದು ಸಂದರ್ಶಕರ ಎದುರೇ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಗುನಗುತ್ತಲೇ ಉತ್ತರಿಸಿದ ರಶ್ಮಿಕಾ, ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ರಶ್ಮಿಕಾ ಅನಿಸಿಕೆ ಅಥವಾ ಅಭಿಪ್ರಾಯವನ್ನು ಸ್ವಾಗತಿಸಿದ್ದಾರೆ ಎನ್ನುವ ರೀತಿಯಲ್ಲಿ ನಟ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಬಹುದು. ರಶ್ಮಿಕಾಗೆ ಕೇಳಲಾದ ಪ್ರಶ್ನೆ ಬಗ್ಗೆ ನಿಮಗೆ ಗೊತ್ತಿದೆ, ಹಾಗಿದ್ದರೆ ಉತ್ತರವನ್ನೂ ನೋಡಿಬಿಡಿ!
'ನನ್ನ ಪ್ರಕಾರ, ನೀವು ಪ್ರತಿಯೊಂದು ಸೀನ್‌ನಲ್ಲಿಯೂ ಮಾಡಿಕೊಂಡ ಪ್ರತಿ ಬದಲಾವಣೆಯನ್ನೂ ಗಮನಿಸಿದ್ದೀರಿ, ಅದನ್ನು ನೀವು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶವಿಲ್ಲದೇ ಮಾಡಿರಬಹುದು. ಆದರೆ ಇಂದಿನ ನಟನೆಯ ಮುಂದುವರೆದ ಭಾಗಕ್ಕೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುತ್ತೀರಿ. ನಾನು ತುಂಬಾ ಟೆಕ್ನಿಕಲ್ ಆಗಿ ಮಾತನಾಡುತ್ತಿದ್ದರಬಹುದು. ಆದರೆ, ನೀವು ದಿನದಿನಕ್ಕೂ ಸಿನಿಮಾದ ಕಂಟಿನ್ಯೂಟಿಗೆ ಒತ್ತುನೀಡಿ, ಅಗತ್ಯಕ್ಕೆ ತಕ್ಕಂತೆ ನಟಿಸುತ್ತಿದ್ದೀರಿ.
ಭಾರತಿಗಿಂತ ಮೊದಲು ನಟ ವಿಷ್ಣುವರ್ಧನ್ ಬಾಳಲ್ಲಿ ಆ ಹುಡುಗಿ ಬಂದಿದ್ದರು; ಆದ್ರೆ ಯಾಕೆ ಮದುವೆಯಾಗಲಿಲ್ಲ?
ನನ್ನ ಅಭಿಪ್ರಾಯದಂತೆ, ನಿಮ್ಮ ನಟನೆಯಲ್ಲಿ ಪಾತ್ರವು ಬೆಳೆದಂತೆ ನಿಮ್ಮ ನಟನೆ ಕೂಡ ಬೆಳೆವಣಿಗೆ ಹೊಂದುತ್ತಿದೆ ಎನಿಸುತ್ತಿದೆ. ನಾನು ಈ ಬಗ್ಗೆ ತುಂಬಾ ಫ್ಯಾಸನೇಟ್ ಆಗಿದ್ದೇನೆ. ನಿಮ್ಮ ನಟನೆಯ ಪ್ರತಿಯೊಂದು ಸೂಕ್ಷ್ಮ ಸಂಗತಿಯನ್ನೂ ನಾನು ಗಮನಸುತ್ತಿದ್ದೇನೆ. ನೀವು ಮಾಡುತ್ತಾ ಇರಿ, ನಾನು ನೋಡುತ್ತ ಎಂಜಾಯ್ ಮಾಡುತ್ತ, ಗಮನಿಸುತ್ತ ಇರುತ್ತೇನೆ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಮಿಲ್ಕಿ ಬ್ಯೂಟಿ ತಮನ್ನಾ ಜೊತೆ 'ರೇಲ್ವೇ ಸ್ಟೇಷನ್'ನಲ್ಲಿ ಕಂಡ ಕನ್ನಡದ ನಟ ವಸಿಷ್ಠ ಸಿಂಹ
ಅಂದಹಾಗೆ, ನಟ ಅಲ್ಲು ಅರ್ಜುನ್ ಹಾಗು ನಟಿ ರಶ್ಮಿಕಾ ಮಂದಣ್ಣ ಅವರು ಬ್ಲಾಕ್ ಬಸ್ಟರ್ ಸಿನಿಮಾ 'ಪುಷ್ಪಾ'ದಲ್ಲಿ ಒಟ್ಟಿಗೇ ನಟಿಸಿದ್ದರು. ಈಗ ಅದೇ ಸಿನಿಮಾದ ಸೀಕ್ವೆಲ್ 'ಪುಷ್ಪಾ 2'ದಲ್ಲಿ ಮತ್ತೆ ಜೋಡಿಯಾಗಿದ್ದಾರೆ. ಪುಷ್ಪಾದಲ್ಲಿ ನಟಿ ಸಮಂತಾ ಅವರು 'ಹೂ ಉಂಟಾವಾ ಮಾವಾ ಉಹೂ ಉಂಟಾವಾ..; ಎಂಬ ಹಾಡಿಗೆ ಮಸ್ತ್ ಆಗಿ ಡಾನ್ಸ್ ಮಾಡಿ ಭಾರೀ ಮೆಚ್ಚುಗೆ ಗಳಿಸಿದ್ದರು.
ನಟನಾಗುವುದು ಹಾಗಿರಲಿ, ಡಾನ್ಸ್ ಮಾಡಲೂ ಅಸಾಧ್ಯ ಅಂದಿದ್ರು ಡಾಕ್ಟರ್; ಇಂದು ಸೂಪರ್ ಸ್ಟಾರ್!
ಪುಷ್ಪಾ ಬಳಿಕ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅವರಿಬ್ಬರ ಜೋಡಿ ಸಿನಿಮಾಗೆ ತೆಲುಗು ಸಿನಿಮಾರಂಗದಲ್ಲಿ ಈಗ ಬೇಡಿಕೆ ಹೆಚ್ಚಿದೆ. ಎಲ್ಲರೂ ಈ ಜೋಡಿಯ ಮುಂದಿನ ಚಿತ್ರ 'ಪುಷ್ಪಾ 2'ಗೆ ಕಾಯುತ್ತಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ, ಇದೀಗ ತಮ್ಮ ಸಹನಟ ಅಲ್ಲು ಅರ್ಜುನ್ ಬಗ್ಗೆ ರಶ್ಮಿಕಾ ಹೇಳಿರುವ ಮಾತುಗಳು ವೈರಲ್ ಆಗುತ್ತಿವೆ.
ಹೆಂಡತಿ-ಮಗನ ಮುಂದೆ ಯಾಕೆ 'ಭಯ'ದ ಬಗ್ಗೆ ಮಾತನಾಡಿದ್ರು ನಟ ವಿಜಯ್ ಸೇತುಪತಿ?