ದೇವಸ್ಥಾನದಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್ ಚಡ್ಡಾ- ಪರಿಣೀತಿ ಚೋಪ್ರಾ: ವಿಡಿಯೋ ವೈರಲ್

Published : Jul 02, 2023, 04:48 PM IST
ದೇವಸ್ಥಾನದಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್ ಚಡ್ಡಾ- ಪರಿಣೀತಿ ಚೋಪ್ರಾ: ವಿಡಿಯೋ ವೈರಲ್

ಸಾರಾಂಶ

ಬಾಲಿವುಡ್ ಖ್ಯಾತ ನಟಿ ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ದೇವಸ್ಥಾನದಲ್ಲಿ ಪಾತ್ರೆ ತೊಳೆಯುವ ಸೇವೆ ಸಲ್ಲಿಸಿದ್ದಾರೆ. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಬಾಲಿವುಡ್ ಖ್ಯಾತ ನಟಿ ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಹೊಸ ಬಾಳಿನ ಹೊಸಿಲಿನಲ್ಲಿ ನಿಂತಿದ್ದಾರೆ. ಏಪ್ರಿಲ್ ತಿಂಗಳಲ್ಲಿ ರಾಘವ್ ಚಡ್ಡಾ ಮತ್ತು ಪರಿಣೀತಿ ಎಂಗೇಜ್ಮೆಂಟ್ ಮಾಡಿಕೊಂಡರು. ದೆಹಲಿಯಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಅನೇಕ ಗಣ್ಯರು ಹಾಜರಿದ್ದರು. ಇಬ್ಬರ ನಿಶ್ಚಿತಾರ್ಥದ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ರಾಘವ್ ಮತ್ತು ಪರಿಣೀತಿ ಜೋಡಿ  ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಪಾಪರಾಜಿಗಳು ಕೂಡ ಈ ಜೋಡಿಯ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದಾರೆ. 

ಇತ್ತೀಚಿಗಷ್ಟೆ ಪರಿಣೀತಿ ಮತ್ತು ರಾಘವ್ ಚಡ್ಡಾ  ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದರು. ಇಬ್ಬರೂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರ ಆಶೀರ್ವಾದ ಪಡೆದ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಪರಿಣೀತಿ ಮತ್ತು ರಾಘವ್ ಚಡ್ಡಾ ಅವರ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.   

ಮದುವೆಗೂ ಮೊದಲು ಪರಿಣೀತಿ ಮತ್ತು ರಾಘವ್ ಚಡ್ಡಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಪರಿಣೀತಿ ಮತ್ತು ರಾಘವ್ ಇಬ್ಬರೂ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಪಾತ್ರೆ ತೊಳೆಯುವ ಸೇವೆ ಸಲ್ಲಿಸಿದ್ದಾರೆ. ಭಕ್ತರ ಜೊತೆ ಸೇರಿ ರಾಘವ್ ಮತ್ತು ಪರಿಣೀತಿ ಕೂಡ ಪಾತ್ರ ತೊಳೆಯುತ್ತಿದ್ದಾರೆ. ಇಬ್ಬರೂ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ. ಇಬ್ಬರ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ಮದ್ವೆ ಫಿಕ್ಸ್ ಆಗ್ತಿದ್ದಂತೆ ನಟಿ ಪರಿಣಿತಿ ಚೋಪ್ರಾ ಭಾವಿ ಪತಿಗೆ ಸಂಕಷ್ಟ: ಸರ್ಕಾರಿ ಬಂಗಲೆ ಖಾಲಿ ಮಾಡಲು ಆದೇಶ

ನೆಟ್ಟಿಗರು ರಾಘವ್ ಮತ್ತು ಪರಿಣೀತ್ ಜೋಡಿಯನ್ನು ಹೊಗಳುತ್ತಿದ್ದಾರೆ. ಡೌನ್ ಟು ಅರ್ಥ್ ಜೋಡಿ ಎಂದು ಹೇಳುತ್ತಿದ್ದಾರೆ.  ಇನ್ನು ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗುವ ಮೊದಲು ಪರಿಣೀತಿ ಭಾವಿ ಪತಿ ಜೊತೆ ದೇವಸ್ಥಾನದಲ್ಲಿದ್ದ ಪಾರ್ಥನೆ ಸಲ್ಲಿಸುತ್ತಿದ್ದ ಫೋಟೋ ಶೇರ್ ಮಾಡಿದ್ದರು. ಫೋಟೋಗೆ, 'ಈ ಬಾರಿಯ ನನ್ನ ಭೇಟಿ ಇನ್ನಷ್ಟು ವಿಶೇಷವಾಗಿತ್ತು. ನನ್ನ ಪಕ್ಕದಲ್ಲಿ ರಾಘವೇ ಇದ್ದಾರೆ. ಗೆಲುವು ದೇವರಿಗೆ ಸೇರಿದ್ದು' ಎಂದು ಬರೆದುಕೊಂಡಿದ್ದರು.

ಬೆನ್ನು ತೋರಿಸಿ ಮದ್ವೆ ಫೋಟೋಗಳಿಗೆ 'ಲೈಕ್ಸ್'​ ಕಳಕೊಂಡ ನಟಿ ಪರಿಣಿತಿ ಚೋಪ್ರಾ?

ಸಿನಿಮಾ ವಿಚಾರಕ್ಕೆ ಬರುವುದಾರೆ ಪರಿಣಿತಿ ಚೋಪ್ರಾ ಕೊನೆಯದಾಗಿ ಅಮಿತಾಭ್ ಬಚ್ಚನ್, ಬೋಮನ್ ಇರಾನಿ ಮತ್ತು ಅನುಪಮ್ ಖೇರ್ ಜೊತೆ ಉಂಚೈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಊಂಚೈ ಅಭಿಮಾನಿಗಳ ಹೃದಯ ಗೆದ್ದಿತ್ತು. ಸದ್ಯ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಇಮ್ತಿಯಾಜ್ ಅಲಿ ಅವರ ಚಮ್ಕಿಲಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು 2024 ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?