ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ; ಸ್ಟಾರ್ ನಟನ ಮಗನಿಂದ ಕರಾವಳಿ ಸುಂದರಿ ಕೃತಿ ಶೆಟ್ಟಿಗೆ ಕಿರುಕುಳ

Published : Jul 02, 2023, 03:49 PM ISTUpdated : Jul 04, 2023, 03:04 PM IST
ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ; ಸ್ಟಾರ್ ನಟನ ಮಗನಿಂದ ಕರಾವಳಿ ಸುಂದರಿ ಕೃತಿ ಶೆಟ್ಟಿಗೆ ಕಿರುಕುಳ

ಸಾರಾಂಶ

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ಸ್ಟಾರ್ ಹೀರೋ ಮಗನಿಂದ ಕಿರುಕುಳ ಎದುರಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಎಂದು ಚಿತ್ರಹಿಂಸೆ ಮಾಡುತ್ತಿದ್ದಾರಂತೆ.

ಕರ್ನಾಟಕ ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆಯ ನಟಿಯಾಗಿದ್ದಾರೆ. ಉಪ್ಪೇನಾ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ ಕೃತಿ ಚೊಚ್ಚಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸುಂದರ ನಟಿ ಕೃತಿ ಸಿನಿಮಾ ಜೊತೆಗೆ ಆಗಾಗ ಫೋಟೋಶೂಟ್ ಮೂಲಕವೂ ಸದ್ದು ಮಾಡುತ್ತಿರುತ್ತಾರೆ. ಉಪ್ಪೇನಾ ಬಳಿಕ ಬಂದ ಕೃತಿ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಆದರೂ ಕೃತಿಗೆ ಬೇಡಿಕೆ ಕಡಿಮೆಯಾಗಿಲ್ಲ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸ್ಟಾರ್ ನಟನ ಮಗ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್  ಅಂಗಳದಲ್ಲಿ ವೈರಲ್ ಆಗಿದೆ.  ಎಷ್ಟು ಕೋಟಿಯಾದರೂ ಕೊಡುತ್ತೇನೆ ಬಾ ಎಂದು ಟಾರ್ಚರ್ ಮಾಡುತ್ತಿದ್ದಾರಂತೆ. 

ಬುಚ್ಚಿಬಾಬು ನಿರ್ದೇಶನದ ಉಪ್ಪೇನಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಈ ಸಿನಿಮಾದಲ್ಲಿ ಕೃತಿ ಜೊತೆ ನಾಯಕನಾಗಿ ಪಂಜ ವೈಷ್ಣವ್ ತೇಜ್ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ಸಿನಿಮಾವೇ ಕೃತಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಆದರೆ ಬಳಿಕ ಬಂದ ಸಿನಿಮಾಗಳು ಅಷ್ಟು ದೊಡ್ಡ ಸಕ್ಸಸ್ ಕಾಣುವಲ್ಲಿ ವಿಫಲವಾಗಿವೆ. ಮತ್ತೊಂದು ಸೂಪರ್ ಸಕ್ಸಸ್‌ಗಾಗಿ ಕಾಯತ್ತಿರುವ ಕೃತಿಗೆ ಸ್ಟಾರ್ ಹೀರೋ ಒಬ್ಬರ ಮಗ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಸ್ಟಾರ್ ಹೀರೋ ಮಗನೊಬ್ಬ ಕೃತಿ ಶೆಟ್ಟಿ ಹಿಂದೆ ಬಿದ್ದಿದ್ದಾರಂತೆ. ಹೇಗಾದರೂ ಮಾಡಿ ಕೃತಿ ಶೆಟ್ಟಿ ಜೊತೆ ಸ್ನೇಹ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದಾನಂತೆ. ಪ್ರತಿ ಕಾರ್ಯಕ್ರಮದಲ್ಲೂ ಕೃತಿ ಶೆಟ್ಟಿ ಜೊತೆಯೇ ಓಡಾಡಿ ತೊಂದರೆ ಕೊಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚೆಗಷ್ಟೆ ಕೃತಿ ಶೆಟ್ಟಿಗೆ ಫೋನ್ ಮಾಡಿ ಶೂಟಿಂಗ್ ನಿಲ್ಲಿಸಿ ಬರುವಂತೆ ಒತ್ತಾಯ ಮಾಡಿದ್ದರಂತೆ. ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಪಾರ್ಟಿಗೆ ಬರುವಂತೆ ಚಿತ್ರಹಿಂಸೆ ನೀಡಿದ್ದರಂತೆ. ಈ ಬಗ್ಗೆ ನಟಿ ಕೃತಿ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

ಸೀರೆಯಲ್ಲಿ ಮಸ್ತ್ ಪೋಸ್ ನೀಡಿದ ಕರಾವಳಿ ಸುಂದರಿ; ಕೃತಿ ಶೆಟ್ಟಿ ಫೋಟೋ ವೈರಲ್

ಆದರೆ ಕೃತಿ ಯಾವುದೇ ಪಾರ್ಟಿಗೂ ಹೋಗಲ್ಲ ಎಂದು ಫೋನ್ ಕಟ್ ಮಾಡಿ ಸೈಲೆಂಟ್ ಆದರಂತೆ. ಕೃತಿ ಶೆಟ್ಟಿಗೆ ಟಾರ್ಚರ್ ಮಾಡುತ್ತಿರುವ ಸ್ಟಾರ್ ಹೀರೋ  ಮಗ ಯಾರು? ತೆಲುಗು ನಟನ ಮಗನ ಅಥವಾ ತಮಿಳು ನಟನ ಮಗನ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಕೃತಿಯನ್ನು ಬೆಂಬಿಡದೇ ಕಾಡುತ್ತಿರುವ ಆ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಹರಸಾಹಸ ಪಡುತ್ತಿದ್ದಾರೆ. 

ಮೊದಲ ಬಾರಿಗೆ ದೇಹ ಸಿರಿ ತೋರಿಸಲು ಮುಂದಾದ ಕರಾವಳಿ ಬೆಡಗಿ Krithi Shetty?

ನಟಿ ಕೃತಿ ಶೆಟ್ಟಿ ಮೊದಲ ಹೃತಿಕ್ ರೋಷನ್ ನಟನೆಯ ಸೂಪರ್ 30 ಸಿನಿಮಾದಲ್ಲಿ ಕಾಣಿಸಿಕೊಂಡರು. ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ 'ಉಪ್ಪೇನ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮೊದಲ ಸಿನಿಮಾದಲ್ಲಿ ಗೆದ್ದು ಬೀಗಿದರು. ಬಳಿಕ ನಾನಿ ನಟನೆಯ 'ಶ್ಯಾಮ್‌ ಸಿಂಗ್ ರಾಯ್' ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದುರ. ಬಳಿಕ 'ಬಂಗಾರ್ರಾಜು', 'ದಿ ವಾರಿಯರ್', 'ಮೀಚೆರ್ಲ ನಿಯೋಜಕವರ್ಗಂ', 'ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ', 'ಕಸ್ಟಡಿ' ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಎಲ್ಲಾ ಸಿನಿಮಾಗಳು ನೆಲಕಚ್ಚಿವೆ. ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿರುವ ಕೃತಿ ಶೆಟ್ಟಿಗೆ ಹೊಸ ಸಮಸ್ಯೆ ಶುರುವಾಗಿದೆ. ಇದನ್ನು ಹೇಗೆ ನಿಭಾಯಿಸುತ್ತಾರೆ, ಸ್ಟಾರ್ ಹೀರೋ ಮಗ ಯಾರು ಎನ್ನುವುದು ಬಹಿರಂಗವಾಗುತ್ತಾ ಕಾದು ನೋಡಬೇಕು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!