Parineeti weds Raghav: ಪರಿಣಿತಿ ಚೋಪ್ರಾ- ರಾಘವ್​ ಚಡ್ಡಾ ಎಂಗೇಜ್​ಮೆಂಟ್​ ಡೇಟ್​ ಫಿಕ್ಸ್​?

By Suvarna News  |  First Published Apr 4, 2023, 4:28 PM IST

ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಅವರ ಮದುವೆಯಾಗುತ್ತಿದ್ದಾರೆ ಎನ್ನುವ ವಿಷಯ ಬಹಿರಂಗಗೊಳ್ಳುತ್ತಲೇ ಇದೀಗ ಅವರ ವಿವಾಹ ನಿಶ್ಚಿತಾರ್ಥದ ಸುದ್ದಿ ಹರಿದಾಡುತ್ತಿದೆ. ಯಾವಾಗ ಅವರ ಮದುವೆ?
 


 (Parineeti Chopra) ಮತ್ತು ರಾಘವ್ ಚಡ್ಡಾ  (Raghva Chadha) ಅವರೊಂದಿಗೆ ಸಂಬಂಧಿಸಿದ ಭಾರಿ ಸುದ್ದಿ ಹೊರ ಬಂದಿದೆ. ಅದೇನೆಂದರೆ, ಇಬ್ಬರೂ ನಿಶ್ಚಿತಾರ್ಥ ಸಮಾರಂಭದ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮುಂದಿನ ವಾರ ದೆಹಲಿಯಲ್ಲಿ ಅವರ ನಿಶ್ಚಿತಾರ್ಥ ನಡೆಯಲಿದೆ. ದಂಪತಿ ಮೊದಲಿನಿಂದಲೂ ತಮ್ಮ ಸಂಬಂಧವನ್ನು ಸರಳವಾಗಿ ಇಟ್ಟುಕೊಂಡಿದ್ದಾರೆ ಮತ್ತು ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದಾಗಲೂ ಅದನ್ನು ಸರಳವಾಗಿಡಲು ಬಯಸುತ್ತಾರೆ. ಇವರಿಬ್ಬರ ನಿಶ್ಚಿತಾರ್ಥ ಬಹಳ ಅನ್ಯೋನ್ಯವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಾರಂಭದಲ್ಲಿ ಕುಟುಂಬದವರು ಮತ್ತು ಅತ್ಯಂತ ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಇಬ್ಬರ ಮನೆಯವರು ಕೂಡ ನಿಶ್ಚಿತಾರ್ಥದ ಬಗ್ಗೆ ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಕೂಡ ತನ್ನ ಸೋದರ ಸಂಬಂಧಿಯ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಶೀಘ್ರದಲ್ಲೇ ದೆಹಲಿಗೆ ತಲುಪಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಈ ದಿನಗಳಲ್ಲಿ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಅವರೊಂದಿಗೆ ಮುಂಬೈನಲ್ಲಿದ್ದಾರೆ. ತಂಗಿಯ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳುವ ರೀತಿಯಲ್ಲಿ ಪ್ರಿಯಾಂಕಾ ಭಾರತಕ್ಕೆ ಬರಲು ಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಅವರ ಸೋದರ ಸೋದರಿ ಮೀರಾ ಕಪೂರ್ ಕೂಡ ಸಮಾರಂಭಕ್ಕೆ ದೆಹಲಿ ತಲುಪಿದ್ದಾರೆ. ನಿಶ್ಚಿತಾರ್ಥದ (Engagement) ನಂತರ, ಪರಿಣಿತಿ ಮತ್ತೆ ಕೆಲಸಕ್ಕೆ ಹೋಗುತ್ತಾರೆ ಮತ್ತು ತಮ್ಮ ಚಿತ್ರದ ಚಿತ್ರೀಕರಣಕ್ಕಾಗಿ ಲಂಡನ್‌ಗೆ ಹೋಗುತ್ತಾರೆ ಎಂದೂ ಹೇಳಲಾಗುತ್ತಿದೆ. ಸದ್ಯ ಇಬ್ಬರ ಮದುವೆ ದಿನಾಂಕ ಬಹಿರಂಗವಾಗಿಲ್ಲ.

Tap to resize

Latest Videos

Parineeti Chopra- Raghav Chadha: ಆಪ್​ ನಾಯಕನಿಗೆ ಬಾಲಿವುಡ್​ ತಾರೆ ಹೃದಯ ಕೊಟ್ಟಿದ್ದು ಈ ಜಾಗದಲ್ಲಿ!

ಅಷ್ಟಕ್ಕೂ ಇವರ ಪ್ರೇಮದ ಬಗ್ಗೆ ಸಾಕಷ್ಟು ನಿಗೂಢವೇ ಉಳಿದುಕೊಂಡಿದೆ. 34 ವರ್ಷದ ಪರಿಣಿತಿ ಇತ್ತೀಚೆಗೆ  ಸಂದರ್ಶನವೊಂದರಲ್ಲಿ (Interview) ನೀವೇ ಹುಡುಗನನ್ನು ಹುಡುಕಿ ಕೊಡಿ ಎಂದು ಜನರಿಗೆ ಹೇಳಿದ್ದರು.  ಇನ್ನು ತಾವು ಸಿಂಗಲ್ ಇರುವುದಾಗಿ ಹೇಳಿಕೊಂಡಿದ್ದ ನಟಿ, ಮಿಂಗಲ್ ಆಗೋಕೆ ರೆಡಿ ಎಂದಿದ್ದರು. ಬಾಲಿವುಡ್​ನಲ್ಲಿ  ನಡೆಯುತ್ತಿರುವ ತಾರಾ ಮದುವೆಗಳನ್ನು ಕಂಡಾಗ ತಮಗೂ ಮದುವೆ ಆಗಬೇಕು ಎನ್ನುವ ಆಸೆ ಮೂಡುತ್ತಿದೆ ಎಂದಿರುವ ಪರಿಣಿತಿ,  ಒಳ್ಳೆಯ ಹುಡುಗ ಇದ್ದರೆ ತಿಳಿಸಿ ಎಂದಿದ್ದರು. 'ಮದುವೆಯಾಗಬೇಕು ಎಂದರೆ  ಒಳ್ಳೆಯ ಹುಡುಗ ಸಿಗಬೇಕಲ್ಲ. ಬೇಗ ಒಬ್ಬ ಹುಡುಗನನ್ನು ಹುಡುಕಿ ಕೊಡಿ' ಎಂದಿದ್ದರು. ‘ಅನೇಕ ನಟ ನಟಿಯರು ಮದುವೆ ಆಗುತ್ತಿದ್ದಾರೆ. ಅವರನ್ನೆಲ್ಲ ನೋಡುತ್ತಿದ್ದರೆ, ನನಗೂ ಮದುವೆ ಆಗುವ ಆಸೆ ಆಗುತ್ತದೆ. ಮಕ್ಕಳನ್ನು ಹೊಂದಬೇಕು ಅನಿಸುತ್ತದೆ. ನಾನಿನ್ನೂ ಸಿಂಗಲ್ (Single). ಮಿಂಗ್ ಆಗುವುದಕ್ಕೆ ತಯಾರಿದ್ದೇನೆ. ಹುಡುಗ ಸಿಗಬೇಕು ಅಷ್ಟೇ’ ಎಂದು ತಮಾಷೆಯಾಗಿ ಹೇಳಿದ್ದರು. 

ಇದಾದ ಕೆಲವೇದಿನಗಳಲ್ಲಿ ರಾಘವ್​ ಅವರ ಜೊತೆಗಿನ ಹಲವಾರು ವರ್ಷಗಳ ಒಡನಾಟದ ಕುರಿತ ಸುದ್ದಿ ವೈರಲ್​ ಆಗಿತ್ತು. ಇತ್ತೀಚಿಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ರೂಮರ್ಸ್ ಹರಡಲು ಕಾರಣವಾಗಿತ್ತು. ಹೊಟೇಲ್ ಭೇಟಿಯ ವೇಳೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದರೆ ನೀವಿಬ್ಬರೂ ಪ್ರೀತಿಸುತ್ತಿದ್ದೀರಾ ಎಂದು ಸಂಸತ್ತಿನಿಂದ ಹೊರಗೆ ಬರುತ್ತಿರುವ ರಾಘವ್ ಚಡ್ಡಾ ಅವರನ್ನು ಪತ್ರಕರ್ತರೊಬ್ಬರು ಕೇಳಿದ್ದಾಗ,  ರಾಘವ್ ಅವರು, ರಾಜಕೀಯದ ಬಗ್ಗೆ ಕೇಳಿ ಪರಿಣಿತಿ ಬಗ್ಗೆ ಅಲ್ಲ ಎಂದು ಹೇಳಿದ್ದರು. ಆದರೂ ಗುಸುಗುಸು ಮುಂದುವರೆದಿತ್ತು.   ಅದಾದ ಬಳಿಕ ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜೀವ್ ಅರೋರಾ ಈಚೆಗಷ್ಟೇ ಟ್ವೀಟ್ ಮಾಡಿ ಸುದ್ದಿಯನ್ನು ಕನ್​ಫರ್ಮ್​ ಮಾಡಿದ್ದರು. ಇದಾದ ಬಳಿಕ, ಖ್ಯಾತ ನಟ ಗಾಯಕ ಹಾರ್ಡಿ ಸಂಧು ಅವರು ಪರಿಣಿತಿ ಮತ್ತು ರಾಘವ್ ಅವರ ಮದುವೆಯ ಸುದ್ದಿಯ ಬಗ್ಗೆ ಚಿಕ್ಕದಾಗಿ ಹಿಂಟ್ ಕೊಟ್ಟಿದ್ದರು. ಹಾರ್ಡಿ ಸಂಧು ಪರಿಣಿತಿ ಚೋಪ್ರಾ ಅವರ ಬೆಸ್ಟ್​ಫ್ರೆಂಡ್. ನಟಿಯ ಮದುವೆಯ ಸುದ್ದಿಯನ್ನು ಅವರು ಖಚಿತಪಡಿಸಿದ್ದರು.

ಇಬ್ಬರು ಮಕ್ಕಳ ಅಪ್ಪನೊಂದಿಗೆ ಲವ್​ ಆದಾಗ... ನೆನಪು ಬಿಚ್ಚಿಟ್ಟ ನಟಿ ಶಬನಾ ಅಜ್ಮಿ

ಇಷ್ಟಾದರೂ ಈ ಜೋಡಿ ಮಾತ್ರ ಇದುವರೆಗೆ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. 
 

click me!