ಕಿಸ್ಸಿಂಗ್ ಪ್ರಕರಣ; ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

By Suvarna NewsFirst Published Apr 4, 2023, 1:46 PM IST
Highlights

ಹಾಲಿವುಡ್ ಸ್ಟಾರ್ ರಿಚರ್ಡ್ ಗೇರ್ ಸಾರ್ವಜನಿಕ ಸಮಾರಂಭವೊಂದರಲ್ಲಿ ಕೆನ್ನೆಗೆ ಮುತ್ತಿಟ್ಟ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿಗೆಬಿಗ್ ರಿಲೀಫ್ ಸಿಕ್ಕಿದೆ.

ಹಾಲಿವುಡ್ ಸ್ಟಾರ್ ರಿಚರ್ಡ್ ಗೇರ್ ಸಾರ್ವಜನಿಕ ಸಮಾರಂಭವೊಂದರಲ್ಲಿ ಕೆನ್ನೆಗೆ ಮುತ್ತಿಟ್ಟ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿಗೆಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣವೊಂದರಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿದ ಆದೇಶವನ್ನು ಮುಂಬೈ ಸೆಷನ್ಸ್ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ. ಸೆಷನ್ಸ್ ನ್ಯಾಯಾಧೀಶ ಎಸ್‌ಸಿ ಜಾಧವ್ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ರಾಜ್ಯ ಸಲ್ಲಿಸಿದ ಪರಿಷ್ಕರಣೆ ಅರ್ಜಿಯನ್ನು ವಜಾಗೊಳಿಸಿದರು. 

ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಿಚರ್ಡ್ ಗೇರ್ ಇಬ್ಬರೂ ಅಶ್ಲೀಲತೆ ಮತ್ತು ಅಸಭ್ಯತೆ ಆರೋಪ ಎದುರಿಸುತ್ತಿದ್ದರು. ಏಪ್ರಿಲ್ 15, 2007 ರಂದು ಏಡ್ಸ್ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ದೆಹಲಿಯ ಹೊರಭಾಗದಲ್ಲಿರುವ ಸಂಜಯ್ ಗಾಂಧಿ ಸಾರಿಗೆ ನಗರದಲ್ಲಿ ಈ ಚುಂಬನ ಘಟನೆ ನಡೆದಿತ್ತು. ನಟ ರಿಚರ್ಡ್ ಗೇರ್ ವೇದಿಕೆ ಏರುತ್ತಿದ್ದಂತೆ ನಟಿ ಶಿಲ್ಪಾ ಶೆಟ್ಟಿ ಅವರ ಕೈ ಹಿಡಿದು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟಿದ್ದರು. ಆ ಘಟನೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಚುಂಬನ ಪ್ರಕರಣ ದೊಡ್ಡ ಮಟ್ಟದ ವಿವಾದ ಸೃಷ್ಟಿ ಮಾಡಿತ್ತು. ಜೈಪುರ, ಅಲ್ವಾರ್ ಮತ್ತು ಗಾಜಿಯಾಬಾದ್ ನಲ್ಲಿ ಸಾರ್ವಜನಿಕರು  ಕ್ರಿಮಿಮಲ್ ಮೊಕದ್ದಮೆ ದಾಖಲಿಸಲಾಗಿತ್ತು. 

ಯಾವ ಭಾಷೆಲಿ ಸಿನಿಮಾ ಮಾಡ್ತಿದ್ದೀರಿ ಗೊತ್ತಿದ್ಯಾ? ತೆಲುಗಿನಲ್ಲಿ ವಿಶ್ ಮಾಡಿದ ಶಿಲ್ಪಾ ಶೆಟ್ಟಿಗೆ ಕನ್ನಡಿಗರ ತರಾಟೆ

Latest Videos

2011ರಲ್ಲಿ ನಟಿ ಶಿಲ್ಪಾ ಶೆಟ್ಟಿ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ಮುಂಬೈಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಂತಿಮವಾಗಿ ಎರಡು ಪ್ರಕರಣವನ್ನು ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. 2022ರಲ್ಲಿ ಮ್ಯಾಜಿಸ್ಟ್ರೇಟ್ ಕೇತಕಿ ಚವಾಣ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಈ ಪ್ರಕರಣದಿಂದ ಬಿಡುಗಡೆಗೊಳಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗೇರ್ ಅವರಿಂದ ಶಿಲ್ಪಾ ಶೆಟ್ಟಿ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು.

ಹೋಳಿ ಹಬ್ಬ: Shilpa Shetty ಎಡವಟ್ಟು- ಸುಮ್ನೆ ಬಿಡ್ತಾರಾ ಟ್ರೋಲಿಗರು?

ಈ ಆದೇಶವನ್ನು ಮಹಾರಾಷ್ಟ್ರ ರಾಜ್ಯ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆರೋಪಿಯನ್ನು ಬಿಡುಗಡೆ ಮಾಡುವಲ್ಲಿ ಮ್ಯಾಜಿಸ್ಟ್ರೇಟ್ ತಪ್ಪು ಮಾಡಿದೆ ಮತ್ತು ಆದೇಶವು ಕಾನೂನುಬಾಹಿರ ಎಂದು ಅಲ್ವಾರ್ ಪೊಲೀಸರು ಹೇಳಿದ್ದರು. ಶಿಲ್ಪಾ ಶೆಟ್ಟಿ ಪರ ವಕೀಲರು ತಮ್ಮ ಅರ್ಜಿಯಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾ ವಿರುದ್ಧದ ಏಕೈಕ ಆರೋಪವೆಂದರೆ, 'ಸಹ-ಆರೋಪಿ ಗೇರ್ ಅವರನ್ನು ಚುಂಬಿಸಿದಾಗ ಅವರು ಪ್ರತಿಭಟಿಸಲಿಲ್ಲ ಎನ್ನುವುದು. ಅದು ಅವರನ್ನು ಯಾವುದೇ ಅಪರಾಧದ ಸಂಚು ಅಥವಾ ಅಪರಾಧಿಯನ್ನಾಗಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.  

click me!