ರಾಮ್ ಚರಣ್-ವೆಂಕಟೇಶ್ ಜೊತೆ ಸಲ್ಮಾನ್ ಮಸ್ತ್ ಲುಂಗಿ ಡಾನ್ಸ್; ಪಂಚೆ ಕಟ್ಟಿ ಕುಣಿದ ಪೂಜಾ ಹೆಗ್ಡೆ

By Shruthi Krishna  |  First Published Apr 4, 2023, 3:24 PM IST

ರಾಮ್ ಚರಣ್ ಮತ್ತು ವೆಂಕಟೇಶ್ ಜೊತೆ ನಟ ಸಲ್ಮಾನ್ ಮಸ್ತ್ ಲುಂಗಿ ಡಾನ್ಸ್ ಮಾಡಿದ್ದಾರೆ. 'ಯೆಂಟಮ್ಮಾ..' ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. 


ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾದ  ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಮತ್ತು ಒಂದು ಸಾಂಗ್ ರಿಲೀಸ್ ಆಗಿತ್ತು. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಸಿನಿಮಾದ 'ಯೆಂಟಮ್ಮಾ..' ಎನ್ನುವ ಹಾಡು ರಿಲೀಸ್ ಆಗಿದೆ. ಈ ಹಾಡು ಪಕ್ಕಾ ದಕ್ಷಿಣ ಭಾರತೀಯ ಸಿನಿಮಾರಂಗದ ಸೈಲಿಯಲ್ಲಿ ಮೂಡಿ ಬಂದಿದೆ. ಇನ್ನೂ ವಿಶೇಷ ಎಂದರೆ ಇಬ್ಬರೂ ಸೌತ್ ಸ್ಟಾರ್‌ಗಳ ಜೊತೆ ಸಲ್ಮಾನ್ ಖಾನ್ ಹೆಜ್ಜೆ ಹಾಕಿದ್ದಾರೆ. ಪಂಚೆ ಎತ್ತಿಕಟ್ಟಿ ಮಸ್ತ್ ಡಾನ್ಸ್ ಮಾಡಿದ್ದಾರೆ. ಹೌದು ಬಾಲಿವುಡ್ ಸ್ಟಾರ್ ಸೌತ್ ಸ್ಟಾರ್‌ದಗಳಾದ ರಾಮ್ ಚರಮ್ ಮತ್ತು ವೆಂಕಟೇಶ್ ಜೊತೆ 'ಯೆಂಟಮ್ಮಾ..' ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

ಸಲ್ಮಾನ್ ಖಾನ್, ರಾಮ್ ಚರಣ್ ಮತ್ತು ವೆಂಕಟೇಶ್ ಮೂವರು ಸ್ಟಾರ್ಸ್ ಪಂಚೆಯಲ್ಲಿ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. ಈ ಹಾಡು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಮೂವರು ಸ್ಟಾರ್​ ನಟರ ಜೊತೆ ನಟಿ ಪೂಜಾ ಹೆಗ್ಡೆ ಕೂಡ ಸಖತ್​ ಆಗಿ ಹೆಜ್ಜೆ ಹಾಕಿದ್ದಾರೆ. ವಿಶೇಷ ಎಂದರೆ ಪೂಜಾ ಕೂಡ ಪಂಚೆ ಕಟ್ಟಿ ಕುಣಿದಿದ್ದಾರೆ. ಈ ಬಗ್ಗೆ ರಾಮ್ ಚರಣ್ ಹಾಡಿನ ಲಿಂಕ್ ಶೇರ್ ಮಾಡಿ ಸಲ್ಮಾನ್ ಖಾನ್ ಬಗ್ಗೆ ಬರೆದುಕೊಂಡಿದ್ದಾರೆ. ನನ್ನ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

One of my most precious on screen moments.
Love you Bhai ❤️

Dancing with these absolute legends... song out now.https://t.co/9gSJhidu0y pic.twitter.com/raRa2zl8Zy

— Ram Charan (@AlwaysRamCharan)

ಜಾಕ್ವೆಲಿನ್‌ಗೆ ಕಿಸ್ ಮಾಡಿ ತನ್ನದೇ ಬಟ್ಟೆಯಿಂದ ಬಾಯಿ ಒರೆಸಿಕೊಂಡ ಸಲ್ಮಾನ್ ಖಾನ್; ವಿಡಿಯೋ ವೈರಲ್

Tap to resize

Latest Videos

'ಕಿಸಿ ಕಾ ಭಾಯ್​ ಕಿಸಿ ಕಿ ಜಾನ್​' ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟಿಸುತ್ತಿರುವ ಸಿನಿಮಾವಾಗಿದೆ. ಮೊದಲ ಹಾಡು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಸಲ್ಮಾನ್ ಖಾನ್ ಡಾನ್ಸ್‌ ಸ್ಟೆಪ್ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು. ಆದರೆ ಈ ಹಾಡಿನಲ್ಲಿ ಸಲ್ಮಾನ್ ಖಾನ್ ಸೌತ್ ಸ್ಟಾರ್ ಗಳ ಜೊತೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಪಾಯಲ್​ ದೇವ್​ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್​ ನೀಡುತ್ತಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ರಾಮ್ ಚರಣ್ ವಿಶೇಷ ಹಾಡಿನಲ್ಲಿ ಮಾತ್ರ ಮಿಂಚಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ ತೆಲುಗು ಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ನಟಿಸಿದ್ದರು. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಾಮ್ ಚರಣ್ ಸರದಿಯಾಗಿದೆ. 

Salman Khan: ಪತ್ರಕರ್ತ ದಾಖಲಿಸಿದ್ದ ಕ್ರಿಮಿನಲ್ ಕೇಸ್​ನಿಂದ ಸಲ್ಲುಗೆ ಮುಕ್ತಿ

ಬಹುನಿರೀಕ್ಷೆಯ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದೆ. ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಗದೆ ವರ್ಷದ ಮೇಲಾಗಿದೆ. ಕೊನೆಯದಾಗಿ ಪಠಾಣ್ ಸಿನಿಮಾದ ಅತಿಥಿ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಅನೇಕ ಸಮಯದ ಬಳಿಕ ತೆರೆಮೇಲೆ ಬರುತ್ತಿದ್ದಾರೆ.  

click me!