ರಸ್ತೆ ಬದಿಯಲ್ಲಿ ಒಟ್ಟಿಗೇ ನಿಂತು ಟೀ ಕುಡಿಯುತ್ತಿರುವ ಯಶ್-ಪ್ರಭಾಸ್ ನೋಡಿ ಫ್ಯಾನ್ಸ್‌ಗಳು ಕಕ್ಕಾಬಿಕ್ಕಿ!

Published : Nov 24, 2025, 04:44 PM ISTUpdated : Nov 24, 2025, 04:57 PM IST
Yash Prabhas

ಸಾರಾಂಶ

ಕನ್ನಡದ ನಟ ಯಶ್ ಅವರು ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳದವರು.ಇನ್ನು ತೆಲುಗು ನಟ ಪ್ರಭಾಸ್ ಅವರು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಇವರಿಬ್ಬರ ಬಗ್ಗೆ ಇಡೀ ಇಂಡಿಯಾ ಹಾಗೂ ವಿದೇಶಗಳಲ್ಲಿ ಕೂಡ ಸಖತ್ ಕ್ರೇಜ್ ಇದೆ.

ಒಟ್ಟಿಗೇ ಟೀ ಕುಡಿಯುತ್ತಿರೋ ಯಶ್-ಪ್ರಭಾಸ್!

ಭಾರತೀಯ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ಸ್, ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿರುವ ಯಶ್ (Rocking Star Yash) ಹಾಗೂ ಪ್ರಭಾಸ್ (Daring Prabhas) ಅವರಿಬ್ಬರ ಬಗ್ಗೆ ಸುದ್ದಿಯೊಂದು ಸಖತ್ ವೈರಲ್ ಅಗೋಗಿದೆ. ಅದೇನು ಗೊತ್ತಾ? ಈ ಇಬ್ಬರು ತಾರೆಗಳು ಸಿನಿಮಾ ಶೂಟಿಂಗ್‌ ಸಲುವಾಗಿ ಒಟ್ಟಿಗಿದ್ದು. ಎಲ್ಲೋ ಒಂದು ಕಡೆ ರೋಡ್ ಪಕ್ಕ ಟೀ ಕುಡಿಯುತ್ತಿರೀ ಫೋಟೋ ವೈರಲ್ ಆಗಿದೆ. ಅದನ್ನು ನೋಡಿ ಅವರಿಬ್ಬರ ಅಭಿಮಾನಿಗಳು ಥ್ರಿಲ್ ಅನುಭವಿಸುತ್ತಿದ್ದಾರೆ.

'ಯಶ್ ಹಾಗೂ ಪ್ರಭಾಸ್ ಅವರು ದಾರಿ ಮಧ್ಯೆ ಟೀ ಕುಡಿಯುವ ಈ ದೃಶ್ಯ ಎಲ್ಲರ ಗಮನ ಸೆಳೆದಿದೆ, ಇವರಿಬ್ಬರ ಈ‌ ದೃಶ್ಯ ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ಗೊತ್ತಿಲ್ಲ, ಆದರೆ ಭಾರತೀಯ ಚಿತ್ರರಂಗದ ಈ ನಟರು ಜೊತೆಯಾಗಿ ಸಿನಿಮಾ ಮಾಡುವುದು ಎಲ್ಲರಿಗೂ ತುಂಬಾ ಇಷ್ಟ, ಹಾಗಾಗಿ ಇಂತಹ ದೃಶ್ಯ ಕಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಒಳ್ಳೆಯ ಪ್ರೀತಿ ತೋರಿಸುತ್ತಾರೆ ಅಭಿಮಾನಿಗಳು' ಎಂಬ ಸಾಲುಗಳು ಇದೀಗ ಸಾಮಾಜಿಕ ಮಾಧ್ಯಮಗಳ ಮೂಲಕ ಭಾರೀ ವೈರಲ್ ಆಗುತ್ತಿದೆ.

ಫ್ಯಾನ್ಸ್ ಖುಷ್!

ಕನ್ನಡದ ನಟ ಯಶ್ ಅವರು ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳದವರು.ಇನ್ನು ತೆಲುಗು ನಟ ಪ್ರಭಾಸ್ ಅವರು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಇವರಿಬ್ಬರ ಬಗ್ಗೆ ಇಡೀ ಇಂಡಿಯಾ ಹಾಗೂ ವಿದೇಶಗಳಲ್ಲಿ ಕೂಡ ಸಖತ್ ಕ್ರೇಜ್ ಇದೆ, ಬಹಳಷ್ಟು ಅಭಿಮಾನಿಗಳು ಇದ್ದಾರೆ. ಈ ಇಬ್ಬರನ್ನೂ ಒಂದೇ ಕಡೆ ನೋಡಿದರೆ ಅವರಿಬ್ಬರ ಫ್ಯಾನ್ ಪಾಲಿಗೆ ಖುಷಿಯಾಗುವುದು ಸಹಜ ತಾನೇ? ಈಗ ಅದೇ ಆಗಿದೆ.

ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್ ರಾಮಾಯಣ ಪಾರ್ಟ್-1 ಹಾಗೂ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಮಾಯಣ ಚಿತ್ರಕ್ಕೆ ನಟ ಯಶ್ ಅವರು ನಿರ್ಮಾಪಕರಲ್ಲಿ ಒಬ್ಬರು ಕೂಡ ಆಗಿದ್ದಾರೆ. ಟಾಕ್ಸಿಕ್ ಸಿನಿಮಾ ಪ್ಯಾನ್ ವರ್ಲ್ಡ್ ಸಿನಿಮಾ ಅಗಿದ್ದು, ಈ ಸಿನಿಮಾ ತೆರೆಗೆ ಬರುವುದನ್ನು ಇಡೀ ವಿಶ್ವವೇ ಕಾಯುತ್ತಿದೆ. ಇನ್ನು ಬಾಲಿವುಡ್ ಸಿನಿಮಾ ರಾಮಾಯಣವು ಭಾರತದ ಇತಿಹಾಸವಾಗಿದ್ದು, ಈ ಸಿನಮಾ ಬಗ್ಗೆ ಇಡೀ ಭಾರತವೇ ಕಾದು ಕುಳಿತಿದೆ. 

 

ಇನ್ನು, ಪ್ರಭಾಸ್ ಬಗ್ಗೆ ಹೇಳಬೇಕು ಎಂದರೆ.. ನಟ ಪ್ರಭಾಸ್ ಪ್ರಭಾಸ್ ಅವರ ಮುಂಬರುವ ಸಿನಿಮಾಗಳಲ್ಲಿ 'ದಿ ರಾಜಾ ಸಾಬ್' (The Raja Saab), 'ಸ್ಪಿರಿಟ್' (Spirit), ಮತ್ತು 'ಸಲಾರ್ ಭಾಗ 2: ಶೌರ್ಯಂಗ ಪರ್ವಂ' (Salaar Part 2: Shauryaanga Parvam) ಸೇರಿವೆ. ಈ ಎಲ್ಲಾ ಸಿನಿಮಾಗಳೂ ಕೂಡ ತೀವ್ರ ಕುತೂಹಲ ಕೆರಳಿಸಿದ್ದು, ಸಿನಿಮಾಗೆ ಮಿನಿಮಂ ಗ್ಯಾರಂಟಿ ಇದ್ದೆ ಇದೆ ಅಂತಿದಾರೆ ಸಿನಿಮಾ ಬಾಕ್ಸ್ ಆಫೀಸ್ ಪಂಡಿತರು. ಇದೀಗ, ಈ ಇಬ್ಬರು ಟಾಪ ಸ್ಟಾರ್ಸ್‌ ಒಟ್ಟಿಗೇ ಟೀ ಹೀರುತ್ತಿರುವ ಫೋಟೋ ಬಹಳಷ್ಟು ಗಮನ ಸೆಳೆದಿದೆ.

https://www.threads.com/@vidyasrig_official/post/DRbniB7k8Yr?xmt=AQF0G5KCih3ETVq1QTSXmn84F6pE18cSiYCMLOVby2JPTw

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?