ಚಾನ್ಸ್ ಕೇಳಿ ಬಂದ ಯುವತಿ ಜೊತೆ ನಿರ್ದೇಶಕನ ಮಂಚದಾಟ, ಪಾಠ ಕಲಿಸಲು ವಿಡಿಯೋ ಬಿಡುಗಡೆ!

Published : Jul 30, 2024, 07:39 PM IST
ಚಾನ್ಸ್ ಕೇಳಿ ಬಂದ ಯುವತಿ ಜೊತೆ ನಿರ್ದೇಶಕನ ಮಂಚದಾಟ, ಪಾಠ ಕಲಿಸಲು ವಿಡಿಯೋ ಬಿಡುಗಡೆ!

ಸಾರಾಂಶ

ಚಾನ್ಸ್ ಕೇಳಿಕೊಂಡು ಬಂದ ಯುವತಿಯನ್ನು ಖ್ಯಾತ ನಿರ್ದೇಶಕ ಮಂಚಕ್ಕೆ ಕರೆದಿದ್ದಾನೆ. ಆಕೆಯ ಜೊತೆ ಅಶ್ಲೀಲವಾಗಿ ನಡೆದಿಕೊಂಡಿದ್ದಾನೆ. ನಿರ್ದೇಶಕನಿಗೆ ಪಾಠ ಕಲಿಸಲು ಟ್ರಾಪ್ ಮಾಡಿದ ಯುವತಿ ಮಂಚದಾಟದ ವಿಡಿಯೋ ಬಿಡುಗಡೆ ಮಾಡಿದ್ದಾಳೆ.  

ಲಾಹೋರ್(ಜು.30) ಒಂದು ಚಾನ್ಸ್ ಕೊಡಿ ಎಂದು ಖ್ಯಾತ ನಿರ್ದೇಶಕನ ಬಳಿ ಬಂದ ಯುವತಿಯನ್ನು ಬಳಸಿಕೊಂಡ ಪರಿಣಾಮ ಯುವತಿ ರೊಚ್ಚಿಗೆದ್ದಿದ್ದಾಳೆ. ಇಷ್ಟೇ ಅಲ್ಲ ಬಣ್ಣದ ಮಾತಿನಿಂದ ನಿರ್ದಶಕನ ಟ್ರಾಪ್ ಮಾಡಿದ ಯುವತಿ, ನಿರ್ದೇಶಕನ ಮಂಚದಾಟವನ್ನು ಚಿತ್ರೀಕರಿಸಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಈ ವಿಡಿಯೋ ಸಿನಿಮಾ ಜಗತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಇದೀಗ ನಿರ್ದೇಶಕ ಯುವತಿ ಹಾಗೂ ಆಕೆಯ ಗ್ಯಾಂಗ್ ವಿರುದ್ದ ಹನಿಟ್ರಾಪ್ ಆರೋಪ ಮಾಡಿದ್ದಾರೆ.

ಪಾಕಿಸ್ತಾನದ ಖ್ಯಾತ ನಿರ್ದೇಶಕ ಖಲಿಲ್ ಉರ್ ರೆಹಮಾನ್ ಖಾಮರ್ , ಯುವತಿ ಜೊತೆ ಕಾಣಿಸಿಕೊಂಡಿರುವ ಅಶ್ಲೀಲ ವಿಡಿಯೋಗಳು  ಇದೀಗ ವೈರಲ್ ಆಗಿದೆ. ಎರಡು ವಿಡಿಯೋಗಳು ಹರಿದಾಡುತ್ತಿದೆ. ಮೊದಲ ವಿಡಿಯೋದಲ್ಲಿ ನಿರ್ದೇಶಕ ಖಲೀಲ್ ಹಾಗೂ ಯುವತಿ ಕೋಣೆಯೊಳಗೆ ಕುಳಿತಿರುವ ದೃಶ್ಯವಿದೆ. ಖಲೀಲ್ ಸಿಗರೇಟು ಸೇದುತ್ತಾ ಯುವತಿ ಪಕ್ಕದಲ್ಲಿ ಕುಳಿತು ಸಂಭಾಷಣೆ ನಡೆಸುತ್ತಿರುವ ದೃಶ್ಯಗಳಿವೆ. ಈ ವಿಡಿಯೋದಲ್ಲಿ ಅವರ ಸಂಭಾಷಣೆಗಳ ಸ್ಪಷ್ಟತೆ ಇಲ್ಲ. ಆದರೆ ಇಬ್ಬರು ಒಂದೇ ಕೋಣೆಯೊಳಗೆ ಜೊತೆಯಾಗಿ ಕುಳಿತಿದ್ದಾರೆ. 

ನನ್ನದೇ ತಪ್ಪು, ಖಾಸಗಿ ವಿಡಿಯೋ ವೈರಲ್ ಬೆನ್ನಲ್ಲೇ ಕ್ಷಮೆ ಕೇಳಿದ ಪಂಜಾಬ್ ಇನ್‌ಫ್ಲುಯೆನ್ಸರ್!

ಮತ್ತೊಂದು ವಿಡಿಯೋದಲ್ಲಿ ಅಶ್ಲೀಲವಾಗಿದೆ. ನಿರ್ದೇಶಕ ಖಲೀಲ್ ಹಾಗೂ ಯುವತಿ ಇಬ್ಬರು ಬೆಡ್ ಮೇಲಿರುವ ದೃಶ್ಯಗಳಿವೆ. ಖಲೀಲ್ ಬೆತ್ತಲಾಗಿದ್ದಾರೆ. ಪಕ್ಕದಲ್ಲೇ ಯುವತಿ ಇದ್ದು, ಈ ವಿಡಿಯೋಗಳು ಭಾರಿ ಕೋಲಾಹಲ ಸೃಷ್ಟಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 

ಪೊಲೀಸರ ಪ್ರಕಾರ, ನಿರ್ದೇಶ ಖಲೀಲ್ ನೇರವಾಗಿ ಯುವತಿ ಮನೆಗೆ ತೆರಳಿದ್ದಾರೆ. ಈ ವಿಡಿಯೋ ಯುವತಿ ಹಾಗೂ ಆಕೆಯ ಗ್ಯಾಂಗ್ ನಿವಾಸದ ಬಳಿ ನಡೆದಿದೆ. ಆದರೆ ನಿರ್ದೇಶಕ ಹನಿ ಟ್ರಾಪ್ ಆರೋಪ ಮಾಡಿರುವ ಕಾರಣ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆಗೆ ಮುಂದಾಗಿದ್ದಾರೆ.  ಘಟನೆ ಸಂಬಂಧ 12 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.

 

 

ಚಾನ್ಸ್ ಕೊಡಿಸಲು ಒಪ್ಪಿಕೊಂಡಿದ್ದ ನಿರ್ದೇಶಕ ಮಂಚದಲ್ಲಿ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದ. ಈ ಬೇಡಿಕೆಗೆ ಒಪ್ಪಿಕೊಂಡ ಯುವತಿ, ನಿರ್ದೇಶಕನಿಗೆ ಪಾಠ ಕಲಿಸಲು ಮುಂದಾಗಿದ್ದಾಳೆ. ಗಳೆಯರ ಜೊತೆ ಸೇರಿ ನಿರ್ದೇಶಕನ ಕರೆಸಿದ್ದಾರೆ. ಇದಕ್ಕೂ ಮೊದಲು ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ಯುವತಿ ಭೇಟಿಯಾಗಲು ಬಂದ ನಿರ್ದೇಶಕ ನೇರವಾಗಿ ಕೋಣೆಗೆ ತೆರಳಿ ಕೆಲಸ ಶುರು ಮಾಡಿದ್ದಾನೆ. ಬಳಿಕ ನಿರ್ದೇಶಕ ಬಳಿ ದುಬಾರಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಗಳು ಕೇಳಿಬಂದಿದೆ.

ರಸ್ತೆಯಲ್ಲಿ ಬೆತ್ತಲಾಗಿ ಜೋಡಿಯ ವಾಗ್ವಾದ, ವಾಹನ ಸವಾರರು ಚಿತ್ರಿಕರಿಸಿದ ಮಧ್ಯ ರಾತ್ರಿ ಘಟನೆ! 

ಇತ್ತ ನಿರ್ದೇಶಕ ಖಲೀಲ್, ಇದು ಹನಿ ಟ್ರಾಪ್ ಎಂದಿದ್ದಾರೆ. ಯುವತಿ ಹಾಗೂ ಆಕೆಯ ಗ್ಯಾಂಗ್ ಅಪಹರಣ ಮಾಡಿ ಈ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!