ಮ್ಯಾಚ್ ಫಿಕ್ಸ್ ಆಯ್ತಾ ವರ್ಮಾ ಅಂಕಲ್, ಏನ್ಸಮಾಚಾರ: ಗುಮಾನಿ ಶುರುವಾಗಿದೆ ಅಂತಿದಾರೆ!

By Shriram Bhat  |  First Published Jul 30, 2024, 5:21 PM IST

ಹೌದು, ರಾಮ್‌ ಗೋಪಾಲ್ ವರ್ಮಾ ಹಾಗೂ ಮಿಯಾ ಮಾಲ್ಕೋವಾ ಭೇಟಿಯಾಗಿದ್ದಾರೆ. ಅಮೆರಿಕದಲ್ಲಿರುವ ತೆಲುಗು ಜನರಿಗೆ ಸಂಬಂಧಿಸಿದ ಪ್ರೋಗ್ರಾಂ ಒಂದರಲ್ಲಿ ಭಾಗವಹಿಸಲು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಮೆರಿಕಕ್ಕೆ ತೆರಳಿದ್ದರು.  ಅಲ್ಲಿ ಪೋರ್ನ್ ತಾರೆ ಮಿಯಾ ಮಲ್ಕೋವಾ ಜೊತೆ ಸೆಲ್ಫಿ..


ಹಾಲಿವುಡ್ ಪಾರ್ನ್ ತಾರೆ ಎನ್ನಬೇಕೋ ಬೋಲ್ಡ್ ಬ್ಯೂಟಿ ಎನ್ನಬೇಕೋ ಗೊತ್ತಿಲ್ಲ! ಅಡಲ್ಟ್ ನಟಿ ಖ್ಯಾತಿಯ ಮಿಯಾ ಮಲ್ಕೋವಾ (Mia Malkova) ಅವರು ಹಿಂದೊಮ್ಮೆ ಖ್ಯಾತ ನಿರ್ದೇಶಕ ಎನಿಸಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ (Ram Gopal Varma) ಜೊತೆ ಕಾಣಿಸಿಕೊಂಡಿದ್ದಾರೆ. ಅರೇ, ಮಿಯಾ ಮಲ್ಕೋವಾ ನಮ್ಮ ವರ್ಮಾ ಜೊತೆ ಕಾಣಿಸಿಕೊಂಡರೆ ನಿಮಗೆ ಹೇಗೆ ಗೊತ್ತಾಗುತ್ತೆ ಅಂತ ಅಚ್ಚರಿ ಪಡಬೇಡಿ. ಅವರಿಬ್ಬರೂ ಒಟ್ಟಿಗೇ ಇದ್ದರೆ ಸುಮ್ಮನೇ ಇರಲು ಹೇಗೆ ಸಾಧ್ಯ ಹೇಳಿ? ಗುಂಡು-ತುಂಡು ಎಲ್ಲಾ ಆದ್ಮೇಲೆ ಸೆಲ್ಫೀ ಅಪ್ಲೋಡ್ ಮಾಡದೇ ಇರ್ತಾರಾ ಅವ್ರು? 

ಹೌದು, ರಾಮ್‌ ಗೋಪಾಲ್ ವರ್ಮಾ ಹಾಗೂ ಮಿಯಾ ಮಲ್ಕೋವಾ ಭೇಟಿಯಾಗಿದ್ದಾರೆ. ಅಮೆರಿಕದಲ್ಲಿರುವ ತೆಲುಗು ಜನರಿಗೆ ಸಂಬಂಧಿಸಿದ ಪ್ರೋಗ್ರಾಂ ಒಂದರಲ್ಲಿ ಭಾಗವಹಿಸಲು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಮೆರಿಕಕ್ಕೆ ತೆರಳಿದ್ದರು.  ಅಲ್ಲಿ ಪೋರ್ನ್ ತಾರೆ ಮಿಯಾ ಮಲ್ಕೋವಾ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಹಿಂದೆ ವರ್ಮಾ ಅವರು ಮಿಯಾ ಮಲ್ಕೋವಾ ಜೊತೆ ಜಿಎಸ್‌ಟಿ ಎಂಬ ಬೋಲ್ಡ್ ಶಾರ್ಟ್ ಫಿಲ್ಮ್ ಮಾಡಿದ್ದರು.

Tap to resize

Latest Videos

undefined

ಆ್ಯಂಕರ್​ ಅನುಶ್ರೀ ಬಗ್ಗೆ ಹೇಳೋದೇನೂ ಇಲ್ಲ, ರಾಜ್ ಬಿ ಶೆಟ್ಟಿ ಮಾತಿಗೆ ಏನಂತೀರಾ ನೋಡಿ; ಇದೆಂಥಾ ಮಾತುಕತೆ..!

ಇದೀಗ ಎರಡನೇ ಬಾರಿ ಮಿಯಾ ಮಲ್ಕೋವಾ ಅವರನ್ನು ವರ್ಮಾ ಭೇಟಿ ಮಾಡಿದ್ದು ಹಲವರಿಗೆ ತೀವ್ರ ಕುತೂಹಲ ಕೆರಳಿಸಿದೆ. ಕಾರಣ, ಆಗ ಶಾರ್ಟ್ ಮೂವಿ ಮಾಡಿದ್ದ ವರ್ಮಾ ಈಗ ಲಾಂಗ್ ಮೂವಿ, ಅಲ್ಲಅಲ್ಲ, ರೆಗ್ಯೂಲರ್ ಅಂದ್ರೆ ಫೀಚರ್ ಫಿಲಂ ಮಾಡಬಹುದೇ ಎನ್ನುವ ಸಂದೇಹ ಮೂಡಿದೆ. ಅಥವಾ, ಬೇರೆ ಇನ್ನೇನಾದರೂ ಐಡಿಯಾ ಹೊಳೆದಿರಬಹುದೇ ನಿರ್ದೇಶಕ ಮಹಾಶಯರಿಗೆ ಎನ್ನುವ ಗುಮಾನಿ ಮೂಡಿದೆ. ಆದರೆ, ಯಾವುದೂ ಇನ್ನೂ ಅಧಿಕೃತವಾಗಿಲ್ಲ. 

ಸಿನಿಮಾಗೆ ಅಂತಲೇ ಅಇಲ್ಲದೆಯೂ ಇರಬಹುದು. ಅದೆಲ್ಲೋ ಒಟ್ಟಾಗಿದ್ದು ಪಾರ್ಟಿ ಮಾಡಿರಬಹುದು. ಪಿಕ್‌ನಲ್ಲಿ ಅವರಿಬ್ಬರ ಮುಖ ನೋಡಿದರೆ ಪಾರ್ಟಿ ಮೂಡ್ ಅಂತೂ ಎದ್ದು ಕಾಣುತ್ತದೆ. ಜೊತೆಗೆ, ಅವರಿಬ್ಬರೂ ಒಂದು ಕಡೆ ಇದ್ದಾರೆ ಎಂದರೆ ಅಲ್ಲಿ ಗುಂಡು, ತುಂಡು ಗಲಾಟೆಯ ಗಮ್ಮತ್ತು ಸ್ವಲ್ಪ ಹೆಚ್ಚಾಗಿಯೇ ಇರುತ್ತೆ ಎನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊಸ ವಿಷಯ ಎಂದರೆ, ಅವರಿಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಈಗ ರಾರಾಜಿಸುತ್ತಿವೆ. 

ಮಿಯಾ ಮಲ್ಕೋವಾ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲಮ ಅವರು ಅಮೆರಿಕಾದ ಪಾರ್ನ ತಾರೆ. ಇನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಹೇಳೋದೇನಿದೆ ಈಗ? ಈಗ ಅವರಿಗೂ ಮಾಡೋದಕ್ಕೆ ಏನೂ ಕೆಲಸವಿಲ್ಲ. ಒಳ್ಳೆಯ ಸಿನಿಮಾ ನಿರ್ದೇಶನಕ್ಕೆ ಯಾವತ್ತೋ ಎಳ್ಳುನೀರು ಬಿಟ್ಟಾಗಿದೆ. ಸುಮ್ಮನೇ ಕೂರಲಾಗದೇ ಯಾವುದೋ ಪ್ರಾಜೆಕ್ಟ್ ಮುಹೂರ್ತ ಮಾಡುವುದು, ಒಂದಿಷ್ಟು ಬಿಲ್ಡಪ್ ತೆಗೆದುಕೊಳ್ಳುವುದು ಸದ್ಯ ಅವರ ಖಾಯಂ ಖಯಾಲಿ ಆಗಿಬಿಟ್ಟದೆ. 

ಸ್ಟಾರ್ ನಟಿ ಜೊತೆ ಏನನ್ನೋ ಹಂಚಿಕೊಳ್ಳಲು ನಾಚಿದ ಸಿದ್ಧಾಂತ್; ನೀನೊಬ್ಬ ಪುರುಷ ಅಂದ್ರಂತೆ ಅಪ್ಪ!

ಒಮ್ಮೆ ಸಿನಿಮಾ ಕಂಪ್ಲೀಟ್ ಆಗಿ ತೆರೆಗೆ ಬಂದರೂ ಕೂಡ ಅದನ್ನು ನೋಡಲು ಅವರೇ ಹೋಗಬೇಕಷ್ಟೇ ಎನ್ನುವ ಕಾಲ ಯಾವತ್ತೋ ಬಂದಿದೆ ಎನ್ನಬಹುದು. ಆದರೆ, ಈಗ ವರ್ಮಾ ಅವರು ಹಾಲಿವುಡ್ ಅಡಲ್ಟ್ ತಾರೆ ಹಿಂದೆ ಬಿದ್ದಿರುವುದರ ಮುಂದಿನ ಕಹಾನಿ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಇರಲಿ, ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ, ಕಾಯಲು ನೀವು ಸಿದ್ಧರಾಗಿರಬೇಕುಷ್ಟೇ!

click me!