World Culture Film Festival 2024: ಸ್ಫೂರ್ತಿದಾಯಕವಾದ - ಜಾಗತಿಕ ಚಲನಚಿತ್ರೋತ್ಸವ    

By Suvarna News  |  First Published Jul 30, 2024, 6:23 PM IST

ಆರ್ಟ್ ಆಫ್ ಲಿವಿಂಗ್ ನಿಂದ ಆಯೋಜಿಸಲ್ಪಟ್ಟಿದ್ದ ವಿಶ್ವ ಸಾಂಸ್ಕೃತಿಕ ಚಲನಚಿತ್ರೋತ್ಸವವು  ಲಾಸ್ ಏಂಜಲಿಸ್ ನಲ್ಲಿ ನಡೆಯಿತು. ನಾಲ್ಕು ದಿನಗಳ ಚಿತ್ರೋತ್ಸವದಲ್ಲಿ  "ಸ್ಫೂರ್ತಿದಾಯಕ, ಶಿಕ್ಷಣಪ್ರದ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಸಂಭ್ರಮಿಸುವಂತಹ" ಚಿತ್ರಗಳ ಪ್ರದರ್ಶನ ನಡೆಯಿತು.


ಬೆಂಗಳೂರು (ಜು.30): ಆರ್ಟ್ ಆಫ್ ಲಿವಿಂಗ್ ನಿಂದ ಆಯೋಜಿಸಲ್ಪಟ್ಟಿದ್ದ ವಿಶ್ವ ಸಾಂಸ್ಕೃತಿಕ ಚಲನಚಿತ್ರೋತ್ಸವವು  ಲಾಸ್ ಏಂಜಲಿಸ್ ನಲ್ಲಿ ನಡೆಯಿತು. ನಾಲ್ಕು ದಿನಗಳ ಚಿತ್ರೋತ್ಸವದಲ್ಲಿ  "ಸ್ಫೂರ್ತಿದಾಯಕ, ಶಿಕ್ಷಣಪ್ರದ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಸಂಭ್ರಮಿಸುವಂತಹ" ಚಿತ್ರಗಳ ಪ್ರದರ್ಶನ ನಡೆಯಿತು. ಜಾಗತಿಕ ಮಾನವತಾವಾದಿಗಳು, ಆಧ್ಯಾತ್ಮಿಕ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಈ ಸಂದರ್ಭದಲ್ಲಿ ಮಾತನಾಡುತ್ತಾ, "ಜನರ ಮೇಲೆ, ಅವರ ಮನಸ್ಸುಗಳ ಮೇಲೆ ಚಲನಚಿತ್ರಗಳು ಆಳವಾದ ಪ್ರಭಾವವನ್ನು ಬೀರುತ್ತವೆ. ಮಾನವನ ಚೇತನವನ್ನು ಉತ್ಥಾಪಿಸುವ ಸಲುವಾಗಿ ಇದನ್ನು ಒಂದು ಮಾಧ್ಯಮವನ್ನಾಗಿ ಬಳಸಬಹುದೆ? ಜನರಲ್ಲಿ ಹೆಚ್ಚು ಸಂತೋಷವನ್ನು ತರಲು, ಆತ್ಮೀಯ ಭಾವವನ್ನು ಉಂಟುಮಾಡಲು ಚಲನಚಿತ್ರಗಳನ್ನು ಒಂದು ಮಾಧ್ಯಮವಾಗಿ ಬಳಸಬಹುದೆ?" ಎಂದು ಕೇಳಿದರು.   

ನಾಯಕನನ್ನು ಹಿಂಸಾತ್ಮಕ ಹಾಗೂ ಉದ್ರಿಕ್ತನನ್ನಾಗಿ ಬಿಂಬಿಸಿರುವ ಚಲನಚಿತ್ರಗಳಿಂದ ಉಂಟಾದ ನಕಾರಾತ್ಮಕ ಮಾದರಿಯ ಬಗ್ಗೆಯೂ ಗುರುದೇವರು ಮಾತನಾಡಿದರು. "ಪ್ರತಿಯೊಂದು ಮಗುವು ತಾನು, ನಾಯಕನಾಗಲು ಬಯಸುತ್ತದೆ. ಆದರೆ ಕಥೆಯಲ್ಲಿರುವ ಪಾತ್ರವು ಮಾದರಿಯಾಗಿದೆಯೇ? ಮಾನವ ಮನಸ್ಸನ್ನು ಉತ್ಥಾಪಿಸುವ ಕೆಲಸ ಮಾಡುತ್ತಿದೆಯೆ? ಇದರ ಬಗ್ಗೆ ಆಲೋಚಿಸಬೇಕಾಗಿದೆ. ಮನರಂಜನಾ ಕ್ಷೇತ್ರದ ಅನೇಕ ನಿರ್ಮಾಪಕರು, ನಟರು, ನಿರ್ದೇಶಕರು ಇಲ್ಲಿರುವಿರಿ. ನಿಮಗೆಲ್ಲರಿಗೂ ಈ ದೃಷ್ಟಿಕೋನ ಕಾಣಿಸುತ್ತಿದೆ ಮತ್ತು ಜಗತ್ತನ್ನು ಪ್ರೇಮ ಮತ್ತು ಕರುಣೆಯಲ್ಲಿ ಒಂದಾಗಿ ತಂದು ವೈಶ್ವಿಕ ಚೇತನದ ಮೇಲೆ ಪ್ರಭಾವವನ್ನು ಬೀರಲು ಏನು ನೀವೇನು ಮಾಡಬಲ್ಲಿರಿ ಎಂದು ಆಲೋಚಿಸುತ್ತಿರುವಿರಿ" ಎಂದರು. 

Tap to resize

Latest Videos

undefined

ಪ್ರೀತಿ, ಲಿವ್ ಇನ್, ಸೆಕ್ಸ್ ಇತ್ಯಾದಿ; ಗುರೂಜಿಯ ಗುರುತರ ಮಾತುಗಳಿವು..

ಡಬ್ಲ್ಯು.ಸಿ.ಎಫ್.ಎಫ್. ಆಸ್ಕರ್ ಗೆ ನೇಮಿತವಾದ ಡ್ರಾಮೇಡಿಯಾದ, ಪಾವೋ ಚೋಯ್ನಿಂಗ್ ದೋರ್ಜಿಂಗ್ ರವರಿಂದ ನಿರ್ದೇಶಿತವಾದ,  ಮಾಂಕ್ ಆಂಡ್ ದಿ ಗನ್ ನಿಂದ ಆರಂಭವಾಯಿತು. ಭೂತಾನಿನ ಚಲನಚಿತ್ರ ನಿರ್ಮಾತರಾದ ಅವರ "ಲೂನಾನಾ: ಏ ಯಾಕ್ ಇನ್ ದಿ ಕ್ಲಾಸ್ ರೂಮ್", 2022ರಲ್ಲಿ ಉತ್ತಮ ಅಂತಾರಾಷ್ಟ್ರೀಯ ಚಿತ್ರ ಅಕಾಡೆಮಿ ಪ್ರಶಸ್ತಿಗೆ ನೇಮಿತವಾಗಿತ್ತು. ಮಾಂಕ್ ಆಂಡ್ ದಿ ಗನ್ ನ ಪ್ರದರ್ಶನದ ನಂತರ, ಪ್ರೇಕ್ಷಕರ ಪ್ರಶ್ನೆಗಳಿಗೆ ಅವರು ಉತ್ತರವನ್ನು ನೀಡಿದರು.

ವಿಶ್ವ ಚಲನಚಿತ್ರೋತ್ಸವದ ಈ ಅನುಪಮವಾದ ಆಲೋಚನೆಯು, ಭವ್ಯವಾದ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಜನಿಸಿತು. ಆ ಸಾಂಸ್ಕೃತಿಕ ಉತ್ಸವಕ್ಕೆ ಜಗತ್ತಿನ ಎಲ್ಲಾ ಭಾಗಗಳಿಂದಲೂ ಒಂದು ಮಿಲಿಯನ್ ಜನರು ಸೇರಿದ್ದರು

click me!