Latest Videos

ಬಾಲಿವುಡ್ ನಟ ಸಲ್ಮಾನ್ ಖಾನ್ ಕಾಮುಕ ಮೃಗ, ಹಂದಿ: ಮೊದಲ ಗರ್ಲ್ ಫ್ರೆಂಡ್!

By Chethan KumarFirst Published Jun 14, 2024, 5:19 PM IST
Highlights

ಸಲ್ಮಾನ್ ಖಾನ್ ಇನ್ನೂ ಮದುವೆಯಾಗದೇ ಉಳಿದಿದ್ದಾರೆ. ಆದರೆ ಅವರಿಗಿರೋ ಗರ್ಲ್ ಫ್ರೆಂಡ್ಸ್ ಮಾತ್ರ ಒಬ್ಬಿಬ್ಬರಲ್ಲ. ಆಗಾಗ ಹಲವರೊಂದಿಗೆ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಆದರೆ ಮೊದಲ ಗರ್ಲ್ ಫ್ರೆಂಡೆಂದು ಗುರುತಿಸಿಕೊಳ್ಳುವ ಸೋಮಿ ಅಲಿ ಮಾತ್ರ ಈ ನಟನ ಬಗ್ಗೆ ಏನು ಹೇಳಿದ್ದಳು? ಕೈಗೆ ದುಡ್ಡು ಸೇರಿದೆ ಆ ನಟರು ಮೃಗೀಯ ವರ್ತನೆ ತೋರ್ತಾರಾ? 
 

90ರ ದಶಕದಲ್ಲಿ ಸಲ್ಮಾನ್ ಖಾನ್ ಜೊತೆ ಸೋಮಿ ಅಲಿ ಖಾನ್ (Bollywood Affair of Salman Khan and Somy Ali Khan) ಎಂಬ ಯುವತಿಯೊಡನೆ ಕೇಳಿ ಬಂದಿತ್ತು.  ಪಾಕಿಸ್ತಾನ ಹಾಗೂ ಅಮೆರಿಕ ಮೂಲದ ಬಾಲಿವುಡ್ ನಟಿಯಾದ ಈಕೆ ಬರಹಗಾರ್ತಿಯಾಗಿ, ಫಿಲಂ ಮೇಕರ್‌ (Movie Maker) ಹಾಗೂ ಹೋರಾಟಗಾರ್ತಿಯಾಗಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. 'ನೋ ಮೋರ್ ಟಿಯರ್ಸ್' ಎನ್ನುವ ಸರ್ಕಾರೇತರ ಕಂಪನಿ ನಡೆಸುತ್ತಿರುವ ಸೋಮಿಗೂ ಹತ್ತಿರ ಹತ್ತಿರ 50 ವರ್ಷ. ಈಕೆ ಮತ್ಯಾರೂ ಅಲ್ಲ ಬಾಲಿವುಡ್ ನಟಿ ಹ್ಯೂಮಾ ಖುರೇಷಿಯ ಅಕ್ಕ.  1993ರಿಂದ ರಿಂದ 1999ರವರೆಗೆ ಸಲ್ಮಾನ್‌ಖಾನ್ ಜೊತೆಗೆ ರಿಲೇಶಿಪ್‌ನಲ್ಲಿದ್ದ ಇವಳು ಹುಟ್ಟಿದ್ದು ಕರಾಚಿಯ ಸಿಂಧ್ ಪ್ರಾಂತ್ಯದಲ್ಲಿ. ತಾಯಿ ಇರಾಕ್‌ನವಳು. ತಂದೆ ಪಾಕಿಸ್ತಾನಿ. ಬೆಳೆದಿದ್ದು ಅಮೆರಿಕದಲ್ಲಿ. ಫ್ಲೋರಿಡಾದಲ್ಲಿ ಓದುವಾಗಲೇ ಇವಳ ಪಕ್ಕದ ಮನೆಯ ಹುಡುಗನೊಬ್ಬ ಅಟ್ಯಾಕ್ ಮಾಡಿದ್ದ. ಹದಿನಾಲ್ಕು ತುಂಬಿರಲಿಲ್ಲ. ಆಗಲೇ ಅತ್ಯಾಚಾರಕ್ಕೂ ಒಳಗಾಗಿದ್ದಳು. ತಾಯಿಯೂ ಪಾಕಿಸ್ತಾನದಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ (Domestic Violence) ಬಲಿಯಾದವಳು.

ಶಾಲೆಯ ಡ್ರಾಪ್ ಔಟ್ ಆದ ಈಕೆಯ ಬದುಕೇ ಒಟ್ಟಾರೆ ಒಂದು ದುರಂತ ಕಥೆ. ಇಷ್ಟೆಲ್ಲಾ ವಿಧಿ ಇವಳೊಂದಿಗ ಆಡಿದ್ದು ಸಾಲದೆಂಬಂತೆ ಆ್ಯಸಿಡ್ ದಾಳಿಗೆ (Acid Attack) ಒಳಗಾಗಿ ಸಾವು ಬದುಕಿನ ಮಧ್ಯೆಯೂ ಹೋರಾಡಿದವಳು. ಇಷ್ಟೆಲ್ಲಾ ಮಾನಸಿಕ ಹೌಗೂ ದೈಹಿಕ ನೋವುಂಡವಳು ದಾಸಳಾಗಿದ್ದು ಡ್ರಗ್ಸ್‌ಗೆ (Drug Addiction). ಆಗಲೇ ಹಿಂದಿ ಚಿತ್ರರಂಗ ಇವಳನ್ನು ಸೆಳೆದಿದ್ದು. ಬೇಡವೆಂದರೂ ಕೇಳದೇ, ಅಪ್ಪನ ಕಾಲಿಗೆ ಬಿದ್ದು ಒಪ್ಪಿಸಿ ಬಾಲಿವುಡ್ ಪ್ರವೇಶಿಸುತ್ತಾಳೆ. ಆಗಿನ್ನೂ ಈಕೆಗೆ ವರ್ಷ 16. ಬಾಲಿವುಡ್ ಸಕ್ಸಸ್‌ಫುಲ್ ನಟ ಸಲ್ಮಾನ್ ಕಂಡರೆ ಈ ಟೀನೇಜ್ ಹುಡುಗಿಗೆ ಕ್ರಶ್ (Teenage Crush). ಸಲ್ಮಾನ್ ಬಗೆಗೆ ಆಕರ್ಷಣೆಯಲ್ಲೇ ಮಾಡೆಲಿಂಗ್ ಮಾಡ್ತಾಳೆ. ಹಿಂದಿ ಚಿತ್ರರಂಗದಲ್ಲಿ ನೆಲೆ ಕಾಣಲು ಶತಾಯ ಗತಾಯ ಯತ್ನಿಸುತ್ತಾಳೆ.

ಸಲ್ಮಾನ್ ಖಾನ್‌ನ ಮೊದಲ ಪೇಂಟಿಂಗ್ ಮಾರಾಟಕ್ಕೆ ಸಜ್ಜು; ಹೇಗಿದೆ ಚಿತ್ರ?

ಶ್ರಮಕ್ಕೆ ಸಿಕ್ಕ ಫಲವೆಂಬಂತೆ 1991 ರಿಂದ 1998ರಲ್ಲಿ ಈಗೆ ಬಾಲಿವುಡ್ ಸೆನ್ಸೇಷನ್ ಆಗೆ ಮೆರೆದಿದ್ದಳು. ಯಶಸ್ವಿ ಸಕ್ಸಸ್‌ಫುಲ್ ಹೀರೋಯಿನ್ (Bollywood Succcessful Heroine) ಅನಿಸಿಕೊಳ್ಳುತ್ತಾಳೆ. ಈ ನಡುವೆ ತನ್ನ ಕ್ರಶ್ ಸಲ್ಮಾನ್ ಖಾನ್ ಜೊತೆಗೆ ಲವ್ವಲ್ಲೂ ಬೀಳ್ತಾಳೆ. ಆತನ ಜೊತೆಗೆ ರಿಲೇಶನ್‌ಶಿಪ್‌ನಲ್ಲಿರುತ್ತಾಳೆ. ಈ ಜೋಡಿ ಬರೋಬ್ಬರಿ ಎಂಟು ವರ್ಷಗಳ ಕಾಲ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿತ್ತು. ಆದರೂ ಅಂಥದ್ದೊಂದು ಸಂಬಂಧದ ಸುಳಿಯಿಂದ ಹೊರ ಬರುತ್ತಾಳೆ ಒಂದು ದಿನ.

ಸಲ್ಮಾನ್ ವಿರುದ್ಧ ಕಿಡಿ ಕಾರೋ ಸಲ್ಮಾನ್!
ಹದಿ ವಯಸ್ಸಲ್ಲಿ ಸಲ್ಮಾನ್ ಪ್ರೀತಿಗೆ ಬಿದ್ದ ಸೋಮಿ ಈಗ ಅವನ ವಿರುದ್ಧ ಆಗಾಗ ಕಿಡಿ ಕಾರುತ್ತಾಳೆ. ಅಫ್‌ಕೋರ್ಸ್ ಸಲ್ಮಾನ್ ಎಂಬ ನಟನ ಬಾಹ್ಯ ಸೌಂದರ್ಯಕ್ಕೋ, ಬಾಲಿವುಡ್‌ನಲ್ಲಿ ಚಾನ್ಸ್ ಬೇಕೆಂಬ ಅನಿವಾರ್ಯತೆಗೋ ಅವನ ಪ್ರೀತಿಯಲ್ಲಿ ಬಿದ್ದು ಅನುಭವಿಸಿದವರು ಒಂದಿಬ್ಬರಲ್ಲ. ದೊಡ್ಡ ಲಿಸ್ಟೇ ಕೊಡಬಹುದು. ಸಂಗೀತ ಬಿಜಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್, ಇತ್ತೀಚೆಗೆ ಇಲುಲ್ಯಾ ಸೇರಿ ಹಲವರು ಈತನ ಆಕರ್ಷಣೆಯಿಂದ ಹತ್ತಿರವಾದವರು. ಜೊತೆಗೆ ಮೃಗೀಯ ಲೈಂಗಿಕ ಹಿಂಸೆ ತಡೆಯಲಾರದೇ ದೂರಾಗಿದ್ದಾರೆ. ಈತನ ಹಿಂಸೆಯಿಂದ ದೂರ ಬಂದರೂ ಈತನ ಬಗ್ಗೆ ಮಾತನಾಡಿದವರು ಯಾರೂ ಇಲ್ಲ ಬಿಡಿ. ಆದರೆ ಸೋಮಿ ಮಾತ್ರ ಈ ಸಾಲಿಗೆ ಸೇರಿದವಳಲ್ಲ. ಮೊದಲಿಂದಲೂ ಸಲ್ಮಾನ್‌ನಿಂದ ತನಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದಾಳೆ. 

ಸಲ್ಮಾನ್ ಜೊತೆಗಿನ ಸಂಬಂಧದ ವೇಳೆ (Relationship) ಆತ ನಡೆಸಿದ ಕ್ರೌರ್ಯದ ಬಗ್ಗೆ ಆಕ್ರೋಶ ಹೊರ ಹಾಕುತ್ತಲೇ ಇರುತ್ತಾಳೆ. ಅವನೊಬ್ಬ ಕಾಮುಕ ಮೃಗ, ದುರಹಂಕಾರಿ, ಹಂದಿ ಎಂದೆಲ್ಲ ಕಮೆಂಟ್ ಮಾಡಿದ್ದಾಳೆ. ಆತ ತನ್ನನ್ನು ಸಿಗರೇಟಿನಿಂದ ಸುಟ್ಟಿದ್ದಾನೆ. ಸಾಕಷ್ಟು ಲೈಂಗಿಕ (Sexual)ಹಿಂಸೆ ಮಾಡಿದ್ದಾನೆ. ಈತ ಇಷ್ಟೆಲ್ಲ ನಟಿಯರನ್ನು ಹಿಂಸಿಸಿದ್ದರೂ ಬಾಲಿವುಡ್ (Bollywood) ಮಂದಿ ಬಾಯಿ ಬಿಡೋಲ್ಲ. ನಾಚಿಕೆಗೇಡು,' ಎಂದು ಸೋಮಿ ಹೇಳಿದ್ದಿದೆ. 

ಕೇವಲ ಕಂಗನಾ ಅಲ್ಲ, ಸಲ್ಮಾನ್ ಸೇರಿದಂತೆ ಈ 5 ಬಿಟೌನ್ ತಾರೆಯರಿಗೂ ಬಿದ್ದಿತ್ತು ಕಪಾಳಮೋಕ್ಷ!

ಒಟ್ಟಿನಲ್ಲಿ ಈ ಸಿನಿಮಾ ನಟರ ಕೈಗೆ ನಿರೀಕ್ಷೆಗೂ ಮೀರಿ ದುಡ್ಡು ಕೈ ಸೇರಿದಾಗ, ಮನುಷ್ಯತ್ವವೇ ಇಲ್ಲವಾಗುತ್ತದೆ. ಮೃಗೀಯ ವರ್ತನೆ ತೋರುತ್ತಾರೆ. ತಾವು ಮನುಷ್ಯರೆಂಬುವುದನ್ನೇ ಮರೆತು, ರಾಕ್ಷಸೀ ಪ್ರವೃತ್ತಿ ತೋರುವುದು ಕನ್ನಡಿಗರಿಗೆ ಗೊತ್ತಿರುವ ವಿಷಯವೇ ಅಲ್ಲವೇ

click me!