ಅನಂತ್ ಅಂಬಾನಿ ಕೊಟ್ಟ ಲವ್‌ ಲೆಟರ್‌ ಪ್ರಿಂಟ್ ಆಗಿದ್ದ ಗೌನ್‌ನಲ್ಲಿ ಮಿಂಚಿದ ರಾಧಿಕಾ ಮರ್ಚೆಂಟ್

By Suvarna News  |  First Published Jun 14, 2024, 2:55 PM IST

ಇತ್ತೀಚೆಗೆ ವಿವಾಹ ಪೂರ್ವ ಇಟಲಿಯ  ಪೋರ್ಟೋಫಿನೋ ಪಟ್ಟಣದಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಪಾರ್ಟಿಯಲ್ಲಿ ರಾಧಿಕಾ ಅವರು ಧರಿಸಿದ ಗವನ್‌ ಈಗ ಚರ್ಚೆಯಲ್ಲಿದೆ.


ಮುಂಬೈ: ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ತಮ್ಮ ಮದುವೆ ಹಾಗೂ ಮದುವೆ ಪೂರ್ವ ಪಾರ್ಟಿಗಳಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಉದ್ಯಮ ಲೋಕದ ಜೋಡಿ. ಇವರು ಮದುವೆಯ, ಹಾಗೂ ವಿವಾಹಪೂರ್ವ ಪಾರ್ಟಿಯ ಪ್ರತಿಯೊಂದು ವಿಚಾರವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಎಲ್ಲರಿಗೂ ತಿಳಿದಿದೆ.  ಬಟ್ಟೆ ಆಭರಣ, ಅಲಂಕಾರ, ಆಹಾರ ಸ್ಟೈಲ್ ಸೇರಿದಂತೆ ಇವರ ಬಗ್ಗೆ ಚರ್ಚೆಯಾಗದ ವಿಚಾರಗಳಿಲ್ಲ, ಅದೇ ರೀತಿ ಈಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ಗೆ ಸಂಬಂಧಿಸಿದ ಹೊಸ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಇತ್ತೀಚೆಗೆ ವಿವಾಹ ಪೂರ್ವ ಇಟಲಿಯ  ಪೋರ್ಟೋಫಿನೋ ಪಟ್ಟಣದಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಪಾರ್ಟಿಯಲ್ಲಿ ರಾಧಿಕಾ ಅವರು ಧರಿಸಿದ ಗವನ್‌ ಈಗ ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಈ ಗವನ್ ಮೇಲಿದೆ ಪ್ರೇಮ ಬರಹ. ಹೌದು ರಾಧಿಕಾ ಮರ್ಚೆಂಟ್ ಅವರು ತಮ್ಮ 22ನೇ ವಯಸ್ಸಿನಲ್ಲಿದ್ದಾಗ ಗೆಳೆಯ ಅನಂತ್ ಅಂಬಾನಿ ಅವರು ಆಕೆಗಾಗಿ ಬರೆದ ಪ್ರೇಮಪತ್ರವನ್ನು ಈ ಗವನ್‌ನಲ್ಲಿ ಪ್ರಿಂಟ್ ಮಾಡಲಾಗಿದೆ. 

Tap to resize

Latest Videos

ಪ್ರಿವೆಡ್ಡಿಂಗ್‌ಗಾಗಿ ಇಟಲಿಯ ಒಂದಿಡೀ ಖ್ಯಾತ ಪಟ್ಟಣವನ್ನೇ ಬುಕ್ ಮಾಡಿದ ಅಂಬಾನಿ ಕುಟುಂಬ!

ತಮ್ಮ 2ನೇ ಪ್ರಿವೆಡ್ಡಿಂಗ್ ಪಾರ್ಟಿಯ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ರಾಧಿಕಾ, ನಾನೆಂದರೆ ಅವನಿಗೆ ಏನು ಎಂಬುದನ್ನು ಈ ದೊಡ್ಡದಾದ ಪತ್ರ ಬರೆದು ನನ್ನ ಹುಟ್ಟುಹಬ್ಬದಂದು ನನಗೆ ನೀಡಿದ್ದರು ಎಂದು ರಾಧಿಕಾ ಮರ್ಚೆಂಟ್ ಹೇಳಿಕೊಂಡಿದ್ದಾರೆ. ಈ ಪ್ರೇಮ ಪತ್ರವನ್ನು ನಾನು ನನ್ನ ಮುಂದಿನ ಪೀಳಿಗೆಗೆ ತೋರಿಸಲು ಬಯಸುವೆ, ನಮ್ಮ ಪ್ರೀತಿ ಹೀಗಿತ್ತು ಎಂಬುದನ್ನು ನಾನು ನನ್ನ ಮಕ್ಕಳಿಗೆ ಮೊಮ್ಮಕ್ಕಳಿಗೆ ತೋರಿಸಲು ಬಯಸುವೆ ಎಂದು ರಾಧಿಕಾ ಮರ್ಚೆಂಟ್ ಹೇಳಿದ್ದಾರೆ.

ಇಟಲಿಯಲ್ಲಿ ನಡೆದ ಈ 2ನೇ ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಹಾಲಿವುಡ್ ನಟರಾದ ಕೇಟಿ ಪೆರ್ರಿ, ಡೇವಿಡ್ ಗುಟ್ಟಾ, ದ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮತ್ತು ಆಂಡ್ರಿಯಾ ಬೊಸೆಲ್ಲಿ ಅತಿಥಿಗಳಿಗಾಗಿ ವಿಶೇಷ ಪ್ರದರ್ಶನ ನೀಡಿದ್ದರು. ಐಷಾರಾಮಿ ಕ್ರೂಸಿಯಲ್ಲಿ ನಡೆದ ಈ  2ನೇ ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ರಾಧಿಕಾ ಮರ್ಚೆಂಟ್ ಅವರು 1ನೇ ದಿನದಂದು  ಬಿಳಿ ಹಾಗೂ ಕಪ್ಪು ಬಣ್ಣದ ಸಂಯೋಜನೆಯ ಚಿಫೋನ್ ಗೌನ್ ಧರಿಸಿದ್ದರು. ಈ ಗೌನ್‌ ಅನ್ನು ಲಂಡನ್ ಮೂಲದ ವಿನ್ಯಾಸಕ ರಾಬರ್ಟ್ ವುನ್ ವಿನ್ಯಾಸಗೊಳಿಸಿದ್ದಾರೆ.

ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ರಾಧಿಕಾ ಮರ್ಚೆಂಟ್ ಧರಿಸಿದ್ದ ಪಿಂಕ್‌ ಮಿಡಿ ಡ್ರೆಸ್ ಬೆಲೆ ಇಷ್ಟೊಂದಾ?

ಹಾಗೆಯೇ 2ನೇ ದಿನ ಧರಿಸಿದ ಟೋಗಾ ಧಿರಿಸನ್ನು ಡಿಸೈನರ್ ಗ್ರೇಸ್ ಲಿಂಗ್ ತಯಾರಿಸಿದ್ದರು. ಇನ್ನು ಈ ಪಾರ್ಟಿ ನಡೆದ ಕ್ರೂಸಿಯಲ್ಲಿ ಅಮೆರಿಕಾ ಯುನಿವರ್ಸಿಟಿಯ ಬ್ಯಾನರ್ ಅಳವಡಿಸಲಾಗಿತ್ತು. ಈ ಯುನಿವರ್ಸಿಟಿಯಲ್ಲಿಯೇ ಈ ಜೋಡಿ ಶಿಕ್ಷಣ ಪಡೆದಿದ್ದರು. ಹೀಗಾಗಿ ಕಾಲೇಜು ದಿನಗಳನ್ನು ಮರು ಸೃಷ್ಟಿಸುವುದಕ್ಕಾಗಿ ಈ ರೀತಿ ಕಾಲೇಜಿನ ಬ್ಯಾನರ್ ಅಳವಡಿಸಲಾಗಿತ್ತು. ಅದೊಂದು ಮ್ಯಾಜಿಕಲ್ ಸಂಜೆಯಾಗಿತ್ತು. ನಾನು ಲೆಜೆಂಡರಿ ಆಂಡ್ರಿಯಾ ಬೊಸೆಲ್ಲಿ ನೋಡಿ ರೋಮಾಂಚನಗೊಂಡಿದ್ದೆ ಎಂದು ರಾಧಿಕಾ ಮರ್ಚೆಂಟ್ ಹೇಳಿಕೊಂಡಿದ್ದಾರೆ.

ರಾಧಿಕಾ ಮರ್ಚೆಂಟ್ ಹಾಗೂ ಉದ್ಯಮಿ ಅನಂತ್ ಅಂಬಾನಿ ಮದ್ವೆ ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್‌ ಕನ್‌ವೆನ್ಶನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಜುಲೈ 12ರಿಂದ ಶುರುವಾಗಿ ಜುಲೈ 14ರವರೆಗೆ ಬಹಳ ಅದ್ದೂರಿಯಾಗಿ ಈ ಜೋಡಿಯ ವಿವಾಹ ನಡೆಯಲಿದೆ. 

 

click me!