ಮೇಕಪ್ ಆರ್ಟಿಸ್ಟ್ ಆಗಿರುವ ಅಷ್ಮಿತಾ ಈಗ ತುಂಬು ಗರ್ಭಿಣಿ. ಸೀಮಂತ ಮಾಡಿಕೊಂಡಿರುವ ಅವರು ಕೆಲಸದಿಂದ ಬ್ರೇಕ್ ಪಡೆದುಕೊಂಡಿಲ್ಲ.
ಕೆಲ ಸಿನಿಮಾಗಳಲ್ಲಿ ನಟಿಸಿದ ನಂತರದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಗೆದ್ದಿರುವ ನಟಿ ಅಶ್ಮಿತಾ ಇಂದು ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಅಶ್ಮಿತಾ ಅವರು ಇತ್ತೀಚೆಗೆ ಸೀಮಂತ ಮಾಡಿಕೊಂಡರೂ ಕೂಡ ವಿಶ್ರಾಂತಿ ಪಡೆಯದೆ ಕೆಲಸದಲ್ಲಿ ಮಗ್ನರಾಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಷ್ಟು ರೆಸ್ಟ್ ಮಾಡೋದಿಲ್ಲ!
ಗರ್ಭಿಣಿ ಆದಕೂಡಲೇ ಕೆಲವರು ಕೆಲಸದಿಂದ ಬ್ರೇಕ್ ಪಡೆಯುತ್ತಾರೆ, ಇನ್ನೂ ಕೆಲವರು ಮಗು ಹುಟ್ಟುವವರೆಗೂ ಕೆಲಸ ಮಾಡುತ್ತಾರೆ. ಬಾಲಿವುಡ್ ನಟಿ ಕರೀನಾ ಕಪೂರ್ ಅವರಂತೂ ಎರಡನೇ ಮಗ ಜೆಹ್ ಹುಟ್ಟಿದ ಒಂದು ತಿಂಗಳಿಗೆ ಕೆಲಸಕ್ಕೆ ಮರಳಿದ್ದರು. ಕನ್ನಡದಲ್ಲಿಯೂ ಕೂಡ ನಟಿ ಮಿಲನಾ ನಾಗರಾಜ್, ಅದಿತಿ ಪ್ರಭುದೇವ ಅವರು ಬಹುಬೇಗ ಕೆಲಸಕ್ಕೆ ಮರಳಿದ್ದರು.
ಸ್ವಂತ ಕಂಪೆನಿ ಕಟ್ಟಾಯ್ತು; ರಿಯಲ್ ಆಗಿ ನಿಶ್ಚಿತಾರ್ಥವೂ ಆಯ್ತು! ʼದೃಷ್ಟಿಬೊಟ್ಟುʼ ನಟಿ ಗೌತಮಿ ಜಯರಾಮ್ ಸಾಧನೆ!
ಅಷ್ಮಿತಾ ಸಿನಿ ಜೀವನ!
ಅಷ್ಮಿತಾ ಅವರು ʼSadhu Mirandaʼ, ʼVillalanʼ, ʼKarungaliʼ, ʼThenkasi Pakkathulaʼ, ʼSami Pullaʼ ಸಿನಿಮಾಗಳಲ್ಲಿ ಅವರು ನಟಿಸಿದರು. ಬಾಲನಟಿಯಾಗಿದ್ದ ಅಷ್ಮಿತಾ ಅವರು ಕಾಮಿಡಿ ಶೋನಲ್ಲಿ ಕೂಡ ಭಾಗವಹಿಸಿದ್ದರು.
ಮೇಘನಾ ಜೊತೆ ಸರಳವಾಗಿ ಎಂಗೇಜ್ ಆದ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಶಮಂತ್ ಬ್ರೊ ಗೌಡ
ಮೇಕಪ್ ಕ್ಲಾಸ್‌ನಲ್ಲಿ ಭಾಗವಹಿಸಿದ್ರು!
ಇಪ್ಪತ್ತೆರಡನೇ ವಯಸ್ಸಿಗೆ ಅವರು ಮುಂಬೈನಲ್ಲಿ ಮೇಕಪ್ ಕ್ಲಾಸ್‌ನಲ್ಲಿ ಭಾಗಿಯಾದರು. ಮೇಕಪ್ ಕುರಿತು ಟೆಕ್ನಿಕಲೀ ಕೂಡ ಒಂದಷ್ಟು ವಿಷಯಗಳನ್ನು ತಿಳಿದುಕೊಂಡು 2018ರಲ್ಲಿ ಅಕಾಡೆಮಿ ಕೂಡ ಮಾಡಿದ್ದರು. ಈ ಅಕಾಡೆಮಿ ಚೆನ್ನೈನಲ್ಲಿ ದೊಡ್ಡ ಹೆಸರು ಮಾಡಿದೆ. 12000ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಮೇಕಪ್ ಶಿಕ್ಷಣ ಪಡೆದಿದ್ದಾರೆ. ಮೇಕಪ್ ಮಾಡಿಕೊಡುವುದು, ಮೇಕಪ್ ಶಿಕ್ಷಣ ಕೊಡುವುದು, ಆನ್‌ಲೈನ್ ಶಿಕ್ಷಣ ಕೂಡ ನೀಡುತ್ತಾರೆ. ನಿರ್ದೇಶಕ, ನಟ ವಿಷ್ಣು ಅವರನ್ನು ಅಷ್ಮಿತಾ ಮದುವೆಯಾಗಿದ್ದಾರೆ. ಅಷ್ಮಿತಾಗೆ ಈಗಾಗಲೇ ಓರ್ವ ಮಗ, ಓರ್ವ ಮಗಳು ಇದ್ದಾರೆ. ಮಕ್ಕಳು, ಗಂಡ ಜೊತೆ ತುಂಬ ಚೆನ್ನಾಗಿ ಜೀವನ ಮಾಡ್ತಿರುವ ಅಷ್ಮಿತಾ ಅವರು ಅಕಾಡೆಮಿ ಹಾಗೂ ಫ್ಯಾಮಿಲಿ ಕುರಿತ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಲ್ಲ ಇದ್ದೂ ಕೂಡ ಡಿಪ್ರೆಶನ್‌ಗೆ ಹೋದ ವಿಷಯವನ್ನು ಅವರು ಶೇರ್ ಮಾಡಿದ್ದರು. ಅಷ್ಟೇ ಅಲ್ಲದೆ ತನ್ನ ಸಹೋದರಿಗೆ ಅವರು ಮನೆ ಕೂಡ ಮಾಡಿಕೊಟ್ಟಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಅಷ್ಮಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ನೆಟ್ಟಿಗರ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರುತ್ತಾರೆ. ಚೆನ್ನೈನಲ್ಲಿ ಸದ್ಯ ಅಷ್ಮಿತಾ ಬಹಳ ಯಶಸ್ವಿ ಮೇಕಪ್ ಆರ್ಟಿಸ್ಟ್ ಎನ್ನಬಹುದು.