ರಣಬೀರ್ ಕಪೂರ್ 2022ರಲ್ಲಿ ಆಲಿಯಾ ಭಟ್ ಮದುವೆಯಾಗಿದ್ದಾರೆ. ಇವರಿಗೆ ಮುದ್ದಾದ ಮಗಳಿದ್ದಾಳೆ. ಆದರೆ ಇತ್ತೀಚೆಗೆ ರಣಬೀರ್ ಕಪೂರ್ ಸ್ಫೋಟಕ ಮಾಹಿತಿ ಬಹಿಂಗಪಡಿಸಿದ್ದಾರೆ. ರಣಬೀರ್ ಕಪೂರ್ ಮೊದಲ ಪತ್ನಿ ಆಲಿಯಾ ಭಟ್ ಅಲ್ಲ, ಈ ಕುರಿತು ರಣಬೀರ್ ಕಪೂರ್ ರಹಸ್ಯ ಬಹಿರಂಗ ಪಡಿಸಿದ್ದಾರೆ.
ಮುಂಬೈ(ಮಾ.21) ಬಾಲಿವುಡ್‌ನ ಸ್ಟೈಲಿಶ್ ನಟ, ಚಾಕ್ಲೆಟ್ ಹೀರೋ ಎಂದೇ ಗರುತಿಸಿಕೊಂಡಿರುವ ನಟ ರಣಬೀರ್ ಕಪೂರ್ ಅತೀ ಹೆಚ್ಚಿನ ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ. ಈ ಪೈಕಿ ಮಹಿಳಾ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚೆ ಇದೆ. ರಣಬೀರ್ ಕಪೂರ್ ಹೆಸರು ಹಲವು ನಟಿಯರ ಜೊತೆ ಕೇಳಿಬಂದಿತ್ತು. ಹಲವು ನಟಿಯರ ಜೊತೆ ರಣಬೀರ್ ಡೇಟಿಂಗ್, ರಿಲೇಶನ್‌ಶಿಪ್‌ನಲ್ಲಿದ್ದರು ಅನ್ನೋ ಮಾತುಗಳು ಹೊಸದೇನಲ್ಲ. ಆದರೆ 2022ರಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾಲ್ಕು ವರ್ಷಗಳ ಡೇಟಿಂಗ್ ಬಳಿಕ ಮದುವೆಯಾಗಿದ್ದರು. ಇವರಿಗೆ ರಾಹಾ ಅನ್ನೋ ಮಗಳಿದ್ದಾಳೆ. ಆದರೆ ಇತ್ತೀಚೆಗೆ ರಣಬೀರ್ ಕಪೂರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ತನ್ನ ಮೊದಲ ಪತ್ನಿ ಅಲಿಯಾ ಭಟ್ ಅಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ತನ್ನ ಮೊದಲ ಪತ್ನಿ ಯಾರು ಅನ್ನೋದನ್ನು ರಣಬೀರ್ ಕಪೂರ್ ಬಹಿರಂಗಪಡಿಸಿದ್ದಾರೆ.
ಖುದ್ದು ರಣಬೀರ್ ಕಪೂರ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಲಿಯಾ ಭಟ್ ಮದುವೆಯಾಗುವ ಮೊದಲೇ ರಣಬೀರ್ ಕಪೂರ್ ಪತ್ನಿ ಇದ್ದರು ಅನ್ನೋ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ರೋಚಕ ಹಾಗೂ ಇಂಟ್ರೆಸ್ಟಿಂಗ್ ಘಟನೆಯನ್ನುರಣಬೀರ್ ಕಪೂರ್ ಹೇಳಿಕೊಂಡಿದ್ದಾರೆ. ರಣಬೀರ್ ಕಪೂರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭಿ ದಿನಗಳಲ್ಲಿ ನಡೆದ ಈ ಮದುವೆ ಕುರಿತು ಹೇಳಿದ್ದಾರೆ.
ಆಲಿಯಾ ಭಟ್ ಹುಟ್ಟುಹಬ್ಬ: ರಣಬೀರ್ ಕಪೂರ್ ಬಹಿರಂಗವಾಗಿ ಕಿಸ್ ಮಾಡಿದ್ದು ವೈರಲ್!
ರಣಬೀರ್ ಕಪೂರ್ ಒಂದಿಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಾಯಕ ನಟನಾಗಿಯೂ ಸೈ ಎನಿಸಿಕೊಂಡಿದ್ದರು. ಹೀಗಾಗಿ ರಣಬೀರ್ ಕಪೂರ್ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿತ್ತು. ಈ ವೇಳೆ ರಣಬೀರ್ ಕಪೂರ್, ಪೋಷಕರ ಜೊತೆ ವಾಸವಾಗಿದ್ದರು. ಈ ವೇಳೆ ರಣಬೀರ್ ಕಪೂರ್ ಮಹಿಳಾ ಅಭಿಮಾನಿಯೊಬ್ಬರು ಪ್ರತಿ ದಿನ ರಣಬೀರ್ ಭೇಟಿಯಾಗಲು ಮನೆಗೆ ಆಗಮಿಸುತ್ತಿದ್ದರು ಎಂದು ರಣಬೀರ್ ಹೇಳಿದ್ದಾರೆ.
ಇದು ಕ್ರೇಜಿ ಫ್ಯಾನ್ ಎಂದು ಹೇಳಿದರೆ ತಪ್ಪಾಗಬಹುದು. ಆದರೆ ಪ್ರತಿ ದಿನ ಭೇಟಿಗಾಗಿ ಮಹಿಳಾ ಅಭಿಮಾನಿ ಮನೆಗೆ ಬರುತ್ತಿದದ್ದು. ಹಲವು ಬಾರಿ ನಾನು ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಆಗಮಿಸುತ್ತಿದ್ದರು. ಮನೆಯ ಭದ್ರತಾ ಸಿಬ್ಬಂದಿ ಇರುವ ಕಾರಣ ಯಾರನ್ನು ಒಳಗೆ ಬಿಡುತ್ತಿರಲಿಲ್ಲ. ಹೀಗೆ ಒಂದು ದಿನ ಈ ಮಹಿಳಾ ಅಭಿಮಾನಿ ಪುರೋಹಿತರ ಜೊತೆ ರಣಬೀರ್ ಕಪೂರ್ ಮನೆಗೆ ಆಗಮಿಸಿದ್ದಾರೆ. ಭದ್ರತಾ ಸಿಬ್ಬಂದಿಗಳು ಎಂದಿನಂತೆ ಮನೆಯೊಳಗೆ ಪ್ರವೇಶಿಸಲು ನಿರಾಕರಿಸಿದ್ದಾರೆ.
ಈ ವೇಳೆ ಮಹಿಳಾ ಅಭಿಮಾನಿ ಮನೆಯ ಮುಖ್ಯ ದ್ದಾರದ ಗೇಟ್ ಬಳಿ ಠಾಕಾಣಿ ಹೂಡಿದ್ದಾರೆ. ಬಳಿಕ ಪುರೋಹಿತರು ಮದುವೆ ಶಾಸ್ತ್ರಗಳನ್ನು ಆರಂಭಿಸಿದ್ದಾರೆ. ಮಹಿಳಾ ಅಭಿಮಾನಿ ತನ್ನ ಫೋಟೋ ಇಟ್ಟು ದ್ವಾರದ ಬಳಿ ಮದುವೆ ಮಾಡಿಕೊಂಡಿದ್ದಾಳೆ. ಬಳಿಕ ಕುಂಕುಮವನ್ನು ಗೇಟ್‌ಗೆ ಹಾಕಿದ್ದಾಳೆ. ಜೊತೆಗೆ ಒಂದು ಹಾರ, ಒಂದಷ್ಟು ಹೂವುಗಳನ್ನು ಗೇಟ್‌ನಲ್ಲಿ ಇಟ್ಟಿದ್ದಾಳೆ. ಈ ಘಟನೆ ಕುರಿತು ಭದ್ರತಾ ಸಿಬ್ಬಂದಿ ನನಗೆ ತಿಳಿಸಿದ್ದರು. ಆದರೆ ನಾನು ಮೊದಲ ಪತ್ನಿಯನ್ನು ಇದುವರೆಗೂ ನೋಡಿಲ್ಲ, ಯಾರು ಅನ್ನೋದು ಗೊತ್ತಿಲ್ಲ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಅಭಿಮಾನಿ ನನ್ನ ಮನೆ ಮುಂದೆ ದ್ವಾರದ ಬಳಿ ಮದುವೆ ಮಾಡಿದ್ದಾರೆ. ನಾನು ಆಕೆಯನ್ನು ನೋಡಿಲ್ಲ. ಆದರೆ ಮೊದಲ ಪತ್ನಿ ಆಕೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಮುಂದೊಂದು ದಿನ ಮೊದಲ ಪತ್ನಿಯನ್ನು ಭೇಟಿ ಮಾಡುವ ಅವಕಾಶ ಸಿಗುವ ಸಾಧ್ಯತೆ ಎಂದು ಭಾವಿಸುತ್ತೇನೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಮದುವೆ ಕುರಿತು ನಡೆದ ಘಟನೆ ವಿವರಿಸಿರುವ ರಣಬೀರ್ ಕಪೂರ್, ಮೊದಲ ಪತ್ನಿ ಕುರಿತು ರೋಚಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೀಗ ಹಲವರ ರಣಬೀರ್ ಕಪೂರ್ ಮೊದಲ ಪತ್ನಿ ಯಾರಾಗಿರಬಹುದು ಎಂದು ಕುತೂಹಲ ಕಣ್ಣಿನಿಂದ ಹುಡುಕುತ್ತಿದ್ದಾರೆ.
ಪ್ರೀತಿ ಅನ್ನೋದು ದೇಹಕ್ಕೆ ಸೀಮಿತವಾಗಿರಬಾರದು: ರಣ್‌ಬೀರ್ ಜೊತೆಗಿನ ಬ್ರೇಕಪ್ ಬಗ್ಗೆ ದೀಪಿಕಾ ಅಚ್ಚರಿ ಹೇಳಿಕೆ