Katrina Kaif Wedding: ಮದುವೆ ಫೋಟೋ, ವಿಡಿಯೋ ಪ್ರಸಾರಕ್ಕೆ 100 ಕೋಟಿ ಆಫರ್ ಮಾಡಿದ OTT

By Suvarna News  |  First Published Dec 8, 2021, 9:04 AM IST
  • OTT platform offers 100 crore to Katrina Kaif Vicky Kaushal
  • ಬಾಲಿವುಡ್ ಸೆಲೆಬ್ರಿಟಿ ಜೋಡಿಯ ಮದುವೆ ಫೋಟೋಗಳಿಗೆ ಭಾರೀ ಡಿಮ್ಯಾಂಡ್
  • 100 ಕೋಟಿ ಆಫರ್ ಸ್ವೀಕರಿಸಿದ್ರಾ ಬಾಲಿವುಡ್ ಜೋಡಿ

ಬಾಲಿವುಡ್(Bollywood) ಸ್ಟಾರ್ ಕತ್ರೀನಾ ಕೈಫ್(Katrina Kaif) ಹಾಗೂ ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ಡಿ.09ರಂದು ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ. ಸ್ಟಾರ್ ಜೋಡಿ ಈಗಾಗಲೇ ಮದುವೆ ಸ್ಥಳ ತಲುಪಿದ್ದು ಅತಿಥಿಗಳು ಜೈಪುರದಲ್ಲಿ(Jaipur) ಬಂದಿಳಿದಿದ್ದಾರೆ. ಆದರೆ ಈ ಜೋಡಿಯ ಮದುವೆಯ ಮೊದಲ ಶಾಸ್ತ್ರದ ಒಂದೇ ಒಂದು ಫೋಟೋ ಹೊರಗಡೆ ಕಾಣಿಸಿಲ್ಲ. ಹೌದು. ವರದಿಗಳ ಪ್ರಕಾರ ಡಿ.07ರಿಂದಲೇ ಮದುವೆ ಶಾಸ್ತ್ರಗಳು ಆರಂಭವಾಗುತ್ತವೆ. ಆದರೆ ಜೋಡಿಯ ಒಂದು ಫೋಟೋ ಕೂಡಾ ಮಧ್ಯಮದ ಕೈಗೆ ಸಿಕ್ಕಿಲ್ಲ. ಹಾಗಾಗಿಯೇ ಸದ್ಯ ಈ ಜೋಡಿಯ ವೆಡ್ಡಿಂಗ್ ಫೋಟೇಜ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಎಷ್ಟು ಅಂತೀರಾ ? ಬರೋಬ್ಬರಿ 100 ಕೋಟಿ ಕೊಡೋಕು ಸಿದ್ಧ ಎನ್ನುವಷ್ಟು. ರಜನೀಕಾಂತ್, ವಿಜಯ್ ಅವರ ಇಡೀ ಸಿನಿಮಾ ಸಂಭಾವನೆಯಷ್ಟು ಬೆಲೆ 3 ದಿನದ ಮದುವೆ ಫೊಟೋಗಳಿಗಿವೆ ಎಂದರೆ ನಂಬುತ್ತೀರಾ ?

ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ವಿವಾಹವಾಗಲಿರುವ ಜೋಡಿಯ ಮದುವೆಯ ಫೋಟೋ ವಿಡಿಯೋ ಕವರೇಜ್, ಪ್ರಸಾರಕ್ಕಾಗಿ OTT ಪ್ಲಾಟ್‌ಫಾರ್ಮ್‌ನಿಂದ 100 ಕೋಟಿ ರೂಪಾಯಿಗಳನ್ನು ಆಫರ್ ಪಡೆದಿದ್ದಾರೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.

Tap to resize

Latest Videos

undefined

ಮದುವೆಗೆ ಮುನ್ನಾದಿನ ಬಿಳಿ ಸೀರೆಯಲ್ಲಿ ಕತ್ರೀನಾ, ಮುಖದಲ್ಲಿ ವಧುವಿನ ಕಳೆ

ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗಲಿರುವ ಸೆಲೆಬ್ರಿಟಿ ಜೋಡಿಗಳು ಈ ಪ್ರಸ್ತಾಪವನ್ನು ಸ್ವೀಕರಿಸುತ್ತಾರೆಯೇ ? ತಮ್ಮ ವಿವಾಹದ ಫೋಟೇಜ್ ಸ್ಟ್ರೀಮ್ ಮಾಡಲು OTT ಪ್ಲಾಟ್‌ಫಾರ್ಮ್ ಅನ್ನು ಅನುಮತಿಸುತ್ತಾರೆಯೇ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಇದು ಸೆಲೆಬ್ರಿಟಿ ಜೋಡಿಗಳಲ್ಲಿ ಇದು ಸಾಮಾನ್ಯವಾಗಿದೆ ಎನ್ನಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸೆಲೆಬ್ರಿಟಿಗಳು ತಮ್ಮ ಮದುವೆಯ ತುಣುಕನ್ನು ಪಾಪರಾಜಿಗಳಿಗೆ ಮಾರಾಟವಾಗಿ ಭಾರೀ ಆಕರ್ಷಕ ಮೊತ್ತವನ್ನು ಪಡೆಯುತ್ತಾರೆ.

ಸೆಲೆಬ್ರಿಟಿಗಳು ತಮ್ಮ ಮದುವೆಯ ದೃಶ್ಯಗಳು ಮತ್ತು ಚಿತ್ರಗಳನ್ನು ನಿಯತಕಾಲಿಕೆಗಳಿಗೆ ಕೆಲವೊಮ್ಮೆ ಚಾನಲ್‌ಗಳಿಗೆ ಮಾರಾಟ ಮಾಡುವುದು ಪಶ್ಚಿಮದಲ್ಲಿ ಸಾಮಾನ್ಯ ಪ್ರವೃತ್ತಿಯಾಗಿದೆ. ಏಕೆಂದರೆ ಮದುವೆಯಲ್ಲಿ ಸಂಭವಿಸಿದ ಎಲ್ಲವನ್ನೂ ವೀಕ್ಷಿಸಲು ಬಯಸುವ ಬಹಳಷ್ಟು ಅಭಿಮಾನಿಗಳು ಇರುತ್ತಾರೆ. ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿರೋ ಸ್ಟಾರ್ ಜೋಡಿಯ ಮದುವೆಗೆ ಸಖತ್ ಡಿಮ್ಯಾಂಡ್ ಇರುವುದು ಎಲ್ಲರಿಗೂ ಗೊತ್ತು.

ಒಲಿಂಪಿಕ್ಸ್ ಸ್ಟಾರ್ ಮೈಕೆಲ್ ಫೆಲ್ಪ್ಸ್‌ಕತ್ರಿನಾರ ಸಹೋದರನಾ?

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರೂ 100 ಕೋಟಿ ರೂಪಾಯಿ ಒಪ್ಪಂದಕ್ಕೆ ಒಪ್ಪಿಕೊಂಡರೆ, ಅವರ ವಿವಾಹವನ್ನು OTT ವೇದಿಕೆಯಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಈವೆಂಟ್‌ಗಳ ತುಣುಕನ್ನು ಒಳಗೊಂಡಿರುವುದರ ಹೊರತಾಗಿ, ಇದು ಕುಟುಂಬ, ಸ್ನೇಹಿತರು ಇತ್ಯಾದಿಗಳ ವಿಶೇಷ ಸಂದರ್ಶನಗಳನ್ನು ಸಹ ಒಳಗೊಂಡಿರುತ್ತದೆ.

ಬಾಲಿವುಡ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018 ರಲ್ಲಿ ಮದುವೆಯಾದಾಗಾ ಅವರಿಗೆ ಇದೇ ರೀತಿಯ ಪ್ರಸ್ತಾಪವನ್ನು ನೀಡಲಾಯಿತು. ಆದರೆ ಅವರು ಕ್ಷಣಗಳನ್ನು ಖಾಸಗಿಯಾಗಿಡಲು ಬಯಸುವುದಾಗಿ ಹೇಳಿ ಅದನ್ನು ನಿರಾಕರಿಸಿದ್ದರು.

ಲಸಿಕೆ ಹಾಕಿಸ್ಕೊಂಡಿರೋದು ಮುಖ್ಯ:

ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅಧಿಕಾರಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಕತ್ರಿನಾ-ವಿಕ್ಕಿ ಅವರ ರಾಜಸ್ಥಾನ ವಿವಾಹದ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ. ಅತಿಥಿಗಳು COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಮತ್ತು ಎರಡು ಬಾರಿ ಲಸಿಕೆ ಹಾಕಿದ ಅತಿಥಿಗಳು ಮಾತ್ರ ಸೆಲೆಬ್ರಿಟಿಗಳ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಈ ಮಾಹಿತಿಯನ್ನು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ರಾಜೇಂದ್ರ ಕಿಶನ್ ಅವರು ಹಂಚಿಕೊಂಡಿದ್ದಾರೆ, ಅಲ್ಲಿ ಮದುವೆಯ ಸ್ಥಳ ಫೋರ್ಟ್ ಬರ್ವಾರಾ ಇದೆ. ಆಯೋಜಕರು ನೀಡಿದ ಮಾಹಿತಿಯಂತೆ 120 ಅತಿಥಿಗಳನ್ನು ಮದುವೆಗೆ ಆಹ್ವಾನಿಸಲಾಗಿದ್ದು, ಡಿಸೆಂಬರ್ 7 ರಿಂದ ಡಿಸೆಂಬರ್ 10 ರ ನಡುವೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿಸಿ ತಿಳಿಸಿದ್ದಾರೆ.

click me!