ಬಾಲಿವುಡ್ ನಟ ಅಮೀರ್ ಖಾನ್ ಅವರು ಬೆಂಗಳೂರಿನ ಗೌರಿ ಸ್ಪ್ರ್ಯಾಟ್ ಅವರ ಪ್ರೀತಿಯಲ್ಲಿ ಬಿದ್ದಿರುವ ವಿಷಯ ಬಹಿರಂಗವಾಗಿದೆ. ಗೌರಿ ಅವರ ಹೊಸ ಫೋಟೋ ವೈರಲ್ ಆಗಿದ್ದು, ಅವರ ವಯಸ್ಸು ಮತ್ತು ಉದ್ಯೋಗದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಭಾರತ ಚಿತ್ರರಂಗದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ ಖ್ಯಾತಿಯ ನಟ ಅಮೀರ್ ಖಾನ್ ಅವರು ಬೆಂಗಳೂರಿನ ಬೆಡಗಿ ಗೌರಿ ಸ್ಪ್ರ್ಯಾಟ್ ಅವರ ಪ್ರೀತಿಯಲ್ಲಿ ಬೀಳಲು ಕಾರಣವೇನೆಂಬ ರಹಸ್ಯ ಕೊನೆಗೂ ಬಯಲಾಗಿದೆ. ಜೊತೆಗೆ, ಗೌರಿ ಅವರ ಹೊಸ ಪೋಟೋ ರಿವೀಲ್ ಆಗಿದ್ದು, ವಯಸ್ಸಿನ ಅಂತರ, ಉದ್ಯೋಗದ ಮಾಹಿತಿಯೂ ಬಹಿರಂಗವಾಗಿದೆ.
ಬಾಲಿವುಡ್ ನಟ ಆಮೀರ್ ಖಾನ್ ಮಾ.13ರಂದು ಮುಂಬೈನ ಹೋಟೆಲ್‌ನಲ್ಲಿ ತಮ್ಮ ಹೊಸ ಗೆಳತಿ ಗೌರಿ ಸ್ಪ್ರ್ಯಾಟ್ ಅವರನ್ನು ಅಭಿಮಾನಿಗಳಿಗೆ ಭೇಟಿ ಮಾಡಿಸಿದ್ದರು. ಹುಟ್ಟುಹಬ್ಬದ ಪೂರ್ವಭಾವಿ ಸಭೆ ಮೀಟ್ ಆ್ಯಂಡ್ ಗ್ರೀಟ್‌ನಲ್ಲಿ ಗೌರಿಯನ್ನು ನೋಡಿದ ಪತ್ರಕರ್ತರು ಆಶ್ಚರ್ಯಗೊಂಡಿದ್ದರು. ಈಗ ಗೌರಿ ಅವರ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೌರಿ ಸ್ಪ್ರ್ಯಾಟ್ ಹೊಸ ಫೋಟೋದಲ್ಲಿ ಮಿಂಚಿಂಗ್:
ಗೌರಿ ಅವರ ಹೊಸ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಶನಿವಾರ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಆಕೆಯ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ. ಫೋಟೋದಲ್ಲಿ ಗೌರಿ ಸುಂದರವಾದ ಲ್ಯಾವೆಂಡರ್ ಕುರ್ತಾ ಧರಿಸಿದ್ದು, ಅದನ್ನು ಕಪ್ಪು ಲೆಗ್ಗಿಂಗ್ಸ್‌ನೊಂದಿಗೆ ಜೋಡಿಸಿದ್ದಾರೆ. ಕ್ಯಾಮೆರಾ ಮುಂದೆ ಆರಾಮವಾಗಿ ಪೋಸ್ ನೀಡುತ್ತಾ ಬಂದಿದ್ದು, ಅವರ ನಗು ಯಾರನ್ನಾದರೂ ಮೋಡಿ ಮಾಡಬಹುದು ಎನ್ನುವಂತಿತ್ತು. ಇದೀಗ ಗೌರಿ ಅವರ ಹೊಸ ಫೋಟೋ ನೋಡಿದ ಆಮೀರ್ ಖಾನ್ ಅಭಿಮಾನಿಗಳು ತುಂಬಾ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ: ರೀನಾ V/S ಕಿರಣ್ ರಾವ್ V/S ಗೌರಿ.. ಯಾರೊಂದಿಗೆ ಅಮೀರ್ ಖಾನ್ ಸುದೀರ್ಘ ಆಟ..?!
ಈ ಬಗ್ಗೆ ನೆಟ್ಟಿಗರು ಕಾಮೆಂಟ್ ತರಹೇವಾರಿ ಕಾಮೆಂಟ್ ಮಾಡಿದ್ದು, 'ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಗೌರಿ ಸರಳ ಕುರ್ತಿಯಲ್ಲಿಯೂ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಆಮೀರ್ ಗೌರಿ ಅವರಿಗೆ ಫಿದಾ ಆಗಿರುವುದರಲ್ಲಿ ಆಶ್ಚರ್ಯವೇನಿಲ್ಲ' ಎಂದು ಬರೆದಿದ್ದಾರೆ.
ಗೌರಿ ಜೊತೆಗಿನ ಸಂಬಂಧದ ಬಗ್ಗೆ ಆಮೀರ್ ಖಾನ್ ಹೇಳಿದ್ದೇನು?
ಆಮೀರ್ ಖಾನ್ ಗುರುವಾರ ಗೌರಿ ಜೊತೆಗಿನ ಸಂಬಂಧವನ್ನು ಖಚಿತಪಡಿಸಿದ್ದರು. ನಾವು ಸುಮಾರು 18 ತಿಂಗಳಿಂದ ಒಟ್ಟಿಗೆ ಇದ್ದೇವೆ. 'ಈಗ ನಾವು ಬದ್ಧರಾಗಿದ್ದೇವೆ, ನಾವು ಪರಸ್ಪರ ಸುರಕ್ಷಿತವಾಗಿದ್ದೇವೆ ಎಂದು ನಮಗೆ ಅನಿಸಿದೆ. ನನ್ನ ಹುಟ್ಟುಹಬ್ಬದಂದು ನಿಮ್ಮೆಲ್ಲರಿಗೂ ಗೌರಿಯನ್ನು ಪರಿಚಯಿಸುವುದು ಉತ್ತಮ ಉಡುಗೊರೆ ಎಂದು ನನಗೆ ಅನಿಸಿತು. ಇದರೊಂದಿಗೆ ನಾವು ಯಾರಿಂದಲೂ ಬಚ್ಚಿಟ್ಟುಕೊಳ್ಳದೇ ಗೌರಿಯನ್ನು ಪರಿಚಯಿಸುತ್ತಿದ್ದೇನೆ ಎಂದು ಅಮೀರ್ ಖಾನ್ ಹೇಳಿದರು.
ಇನ್ನು ಈಗಾಗಲೇ ಆಮೀರ್ ಖಾನ್ ಎರಡು ಬಾರಿ ವಿವಾಹವಾಗಿದ್ದಾರೆ. ರೀನಾ ದತ್ತಾ ಮತ್ತು ಕಿರಣ್ ರಾವ್ ಅವರನ್ನು ಮದುವೆಯಾಗಿ ಅವರಿಂದ ದೂರವಾಗಿದ್ದಾರೆ. ಆದರೂ, ಬರ್ತಡೇ ವೇಳೆ ಮದುವೆಯ ಯೋಜನೆಗಳ ಬಗ್ಗೆಯೂ ಮಾತನಾಡಿದರು. ನಾವು ಸಂಪೂರ್ಣವಾಗಿ ಮದುವೆಗೆ ಬದ್ಧರಾಗಿದ್ದೇವೆ. ನಾನು ಎರಡು ಬಾರಿ ಮದುವೆಯಾಗಿದ್ದೇನೆ. ಆದರೆ, ಈಗ 60ನೇ ವಯಸ್ಸಿನಲ್ಲಿ 3ನೇ ಮದುವೆ ನನಗೆ ಸರಿ ಹೊಂದುವುದಿಲ್ಲ. ಆದರೆ ನೋಡೋಣ' ಎಂದು ಅಡ್ಡಗೋಡೆ ಮೇಲೆ ದೀಪವನ್ನಿಟ್ಟಂತೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಚಿರಂಜೀವಿ, ಬಾಲಯ್ಯ ಬಂದ್ರೂ ಕಾಲ್ ಮೇಲೆ ಕಾಲ್ ತೆಗೀಲಿಲ್ಲ, ಆದ್ರೆ ಆ ನಟ ಬಂದರೆ ಸ್ಮಿತಾ ಎದ್ದು ನಿಲ್ಲುತ್ತಿದ್ದರು!
ಗೌರಿ ಸ್ಪ್ರ್ಯಾಟ್ ಯಾರು?
ಅಮೀರ್ ಖಾನ್ ಅವರು ಶುಕ್ರವಾರ 60 ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ, ತನಗಿಂದ 14 ವರ್ಷ ಚಿಕ್ಕವಳಾದ ಗೌರಿಯನ್ನು (46) ತಮ್ಮ ಹೊಸ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ. ಇನ್ನು ಗೌರಿಗೂ ಈಗಾಗಲೇ ಮದುವೆ ಆಗಿದ್ದು, 6 ವರ್ಷದ ಮಗುವಿದೆ. ಇಬ್ಬರೂ ಸುಮಾರು 25 ವರ್ಷಗಳ ಹಿಂದೆ ಭೇಟಿಯಾಗಿದ್ದರು. ಆದಾಗ್ಯೂ, ಒಂದೂವರೆ ವರ್ಷಗಳ ಮೊದಲು ಅವರು ದೀರ್ಘ ವಿರಾಮದ ನಂತರ ಪರಸ್ಪರ ಭೇಟಿಯಾದರು. ಗೌರಿ ಬೆಂಗಳೂರಿನವರು. ರೀತಾ ಸ್ಪ್ರ್ಯಾಟ್ ಅವರ ಪುತ್ರಿ ಗೌರಿ ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದು, ಬಹುತೇಕ ಜೀವನ ಬೆಂಗಳೂರಿನಲ್ಲಿಯೇ ಕಳೆದಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ನಡೆಸುತ್ತಿದ್ದಾರೆ.