ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಹಳೆಯ ಫೋಟೋ ಒಂದು ವೈರಲ್ ಆಗಿದ್ದು, ಅದರಲ್ಲಿ ಗೌರಿ ಖಾನ್ ಕುಳಿತುಕೊಂಡ ರೀತಿಗೆ ಸಕತ್ ಟ್ರೋಲ್ ಆಗುತ್ತಿದೆ. ಏನಿದು ಈ ಫೋಟೋದಲ್ಲಿ?
ನಟ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪತ್ನಿ ಗೌರಿ ಖಾನ್ ಅವರ ದಾಂಪತ್ಯ ಜೀವನಕ್ಕೆ 32 ವರ್ಷಗಳಾಗಿವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತರಕಾರುಗಳು ಇದ್ದ ನಡುವೆಯೂ ಈ ದಂಪತಿ ಮೂರು ದಶಕಗಳಿಂದ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಸುಹಾನಾ ಖಾನ್ ಮತ್ತು ಆರ್ಯನ್ ಶಾರುಖ್ ಖಾನ್ ಎಂಬ ವಯಸ್ಸಿಗೆ ಬಂದ ಮಕ್ಕಳಿದ್ದರೂ ಶಾರುಖ್ ಅವರ ವರ್ಚಸ್ಸು ಇನ್ನೂ ಕಡಿಮೆಯಾಗಿಲ್ಲ. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್‌ರಾಮ್ ಎಂದು ಹೆಸರಿಟ್ಟಿದ್ದಾರೆ. ವಯಸ್ಸು 57 ಆದರೂ ತರುಣರನ್ನೂ ನಾಚಿಸುವಂತೆ ಚಿತ್ರರಂಗದಲ್ಲಿ ನಾಯಕನಾಗಿಯೇ ಮಿಂಚುತ್ತಿದ್ದರೆ, ಅವರ ಪತ್ನಿ 52 ವರ್ಷದ ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನರ್ ಆಗಿದ್ದು ಸದ್ಯ ಅದರಲ್ಲಿಯೇ ಬಿಜಿ ಇದ್ದಾರೆ. ಇತ್ತೀಚೆಗಷ್ಟೇ ಇಂಟೀರಿಯರ್ ಡಿಸೈನ್ ಕುರಿತು ಗೌರಿ ಖಾನ್ ಅವರು ಬರೆದಿರುವ ಪುಸ್ತಕದ ಬಿಡುಗಡೆಯಾಗಿದ್ದು ಅವರೂ ಸದಾ ಚಟುವಟಿಕೆಯಿಂದ ಕೂಡಿದ್ದಾರೆ.
ಈ ಅಂತರ್‌ಧರ್ಮೀಯ ಲವ್ ಸ್ಟೋರಿಯೇ ತುಂಬಾ ಇಂಟರೆಸ್ಟಿಂಗ್ ಆಗಿದೆ. ಅಷ್ಟಕ್ಕೂ ಇವರ ಲವ್ ಸ್ಟೋರಿ (Love story) ಶುರುವಾದಾಗ ಶಾರುಖ್ ಅವರಿಗೆ 18 ವರ್ಷ ಹಾಗೂ ಗೌರಿ ಅವರಿಗೆ 14 ವರ್ಷ! 1984ರಲ್ಲಿ ಶಾರುಖ್ ಖಾನ್ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌರಿ ಅವರನ್ನು ನೋಡಿದ್ದ ಶಾರುಖ್ ಅವರಿಗೆ ಲವ್ ಆ್ಯಟ್ ಫಸ್ಟ್ ಸೈಟ್ ಆಗಿತ್ತು. ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅಂತರ್‌ಧರ್ಮೀಯ ವಿವಾಹಕ್ಕೆ ಸಾಕಷ್ಟು ವಿರೋಧ ಬಂದಿದ್ದವು. ಕೊನೆಗೆ ಎಲ್ಲ ಅಡೆತಡೆಗಳನ್ನು ದಾಟಿ ಈ ಜೋಡಿ ಮದುವೆಯಾಗಿದೆ. ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್-ಗೌರಿ (Shah rukh- Gouri) ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು.
ದಿನಕ್ಕೆ 100 ಸಿಗರೇಟ್- ಕ್ಯಾನ್ಸರ್ ಹೊಗೆಯಿಂದ ಸುತ್ತುವರಿದಿದ್ದೇನೆ: ಶಾರುಖ್ ಖಾನ್!
ಇಂಥ ದಂಪತಿಯ ಹಳೆಯ ಫೋಟೋ ಒಂದು ಸಕತ್ ಸುದ್ದಿ ಮಾಡುತ್ತಿದೆ. ಅದರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರನ್ನು ನೋಡಬಹುದು. ಚಿತ್ರದಲ್ಲಿ ಗೌರಿ ಖಾನ್ ಅವರ ತಾಯಿ ಸವಿತಾ ಮತ್ತು ತಂದೆ ಕರ್ನಲ್ ರಮೇಶ್ ಚಂದ್ರ ಚಿಬ್ಬರ್ ಅವರನ್ನು ನೋಡಬಹುದು. ವಿಶೇಷವೆಂದರೆ ಶಾರುಖ್ ಖಾನ್ (Shah rukh Khan) ಅವರು ಅತ್ತೆ ಸವಿತಾ ಅವರ ತೊಡೆಯ ಮೇಲೆ ಕುಳಿತಿದ್ದರೆ, ಗೌರಿ ಅವರು ಪಕ್ಕದಲ್ಲಿ ಖುರ್ಚಿಯೊಂದರಲ್ಲಿ ಉದ್ದಕ್ಕೆ ಕಾಲು ಚಾಚಿ ಕುಳಿತುಕೊಂಡಿದ್ದಾರೆ. ಈ ಫೋಟೋ ನೋಡಿದರೆ ಗೌರಿ ಮತ್ತು ಶಾರುಖ್ ಅವರು ಹೊಸದಾಗಿ ಮದುವೆಯಾಗಿರುವ ಸಂದರ್ಭದಲ್ಲಿ ತೆಗೆದಿರಬಹುದು ಎನ್ನುವಂತಿದೆ. ಆದರೆ ಈ ಫೋಟೋ ಸಕತ್ ಟ್ರೋಲ್ ಆಗುತ್ತಿದೆ. ಶಾರುಖ್ ಮತ್ತು ಗೌರಿ ಖಾನ್ ಅವರ ಕುಟುಂಬದ ಪ್ರೀತಿಯನ್ನು ಹಲವರು ಶ್ಲಾಘಿಸಿದ್ದರೂ, ಗೌರಿ ಖಾನ್ ಅಪ್ಪ-ಅಮ್ಮನ ಎದುರು ಈ ರೀತಿ ಕಾಲು ಚಾಚಿ ಕುಳಿತಿರುವುದನ್ನು ಹಲವರು ಕಮೆಂಟಿಗರು ಟ್ರೋಲ್ ಮಾಡಿದ್ದಾರೆ. ಶಾರುಖ್ ಅವರನ್ನು ತೊಡೆಯ ಮೇಲೆ ಮಗನಂತೆ ಕುಳ್ಳರಿಸಿಕೊಂಡಿರುವ ಗೌರಿ (Gauri Khan) ಅಮ್ಮನ ಪ್ರೀತಿಗೆ ನೆಟ್ಟಿಗರು ಮನಸೋತಿದ್ದಾರೆ. ಆದರೆ ಗೌರಿ ಖಾನ್ ಮಾತ್ರ ಈ ರೀತಿಯಾಗಿ ಕುಳಿತುಕೊಂಡಿರುವುದು ಸ್ವಲ್ಪವೂ ಸರಿಯಲ್ಲ, ಇದೆಂಥ ಸಂಸ್ಕಾರ ಎನ್ನುತ್ತಿದ್ದಾರೆ ಹಲವು ನೆಟ್ಟಿಗರು.
ಕೆಲವರು ಈ ಫೋಟೋ ಎಡಿಟೆಡ್ (Edited) ಎನ್ನುತ್ತಿದ್ದಾರೆ. ವೈರಲ್ ಫೋಟೋದಲ್ಲಿ ಕಾಣಿಸುವವರು ಶಾರುಖ್ ಅವರ ಅಪ್ಪ-ಅಮ್ಮ ಎಂದು ಕ್ಯಾಪ್ಷನ್ ನೀಡಲಾಗಿದೆ. ಆದರೆ ಅಸಲಿಗೆ ಅವರು ಹಿಂದೂವಾಗಿದ್ದು, ಗೌರಿ ಖಾನ್ ಅವರ ಪಾಲಕರು ಎಂದು ಕಮೆಂಟ್ ಮೂಲಕ ಕೆಲವರು ಹೇಳಿದ್ದಾರೆ. ಅಪ್ಪ-ಅಮ್ಮ ಯಾರದ್ದೇ ಆಗಿದ್ದರೂ ಗೌರಿ ಅವರ ಈ ವರ್ತನೆ ಸಹಿಸುವುದು ಅಸಾಧ್ಯ ಎಂದು ಕೆಂಗಣ್ಣು ಬೀರುತ್ತಿದ್ದಾರೆ.
ಶಾರುಖ್ ಬಂಗ್ಲೆ ಎದುರು 300 ಫ್ಯಾನ್ಸ್ ಗಿನ್ನೆಸ್ ವಿಶ್ವ ದಾಖಲೆ! ಏನಿದು?