Latest Videos

ವೇದಿಕೆ ಮೇಲೆಯೇ ಕಿಯಾರಾಗೆ ಚಪ್ಪಲಿ ಹಾಕಿದ ಕಾರ್ತಿಕ್ ಆರ್ಯನ್: ನಟನ ನಡೆಗೆ ಫ್ಯಾನ್ಸ್ ಮೆಚ್ಚುಗೆ

By Shruthi KrishnaFirst Published Jun 21, 2023, 5:28 PM IST
Highlights

 ಸತ್ಯಾ ಪ್ರೇಮ್ ಕಥಾ ಸಿನಿಮಾ ಪ್ರಚಾರ ವೇಳೆ ವೇದಿಕೆ ಮೇಲೆಯೇ ಕಿಯಾರಾಗೆ ನಟ ಕಾರ್ತಿಕ್ ಆರ್ಯನ್ ಚಪ್ಪಲಿ ಹಾಕಿದ್ದಾರೆ. ನಟನ ನಡೆಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಸದ್ಯ ಹೊಸ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರೂ ಸತ್ಯ ಪ್ರೇಮ್ ಕಥಾ ಸಿನಿಮಾ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಮುಂಬೈ ಸೇರಿದಂತೆ ಅನೇಕ ನಗರಗಳಿಗೆ ಭೇಟಿ ನೀಡಿ ಇಬ್ಬರೂ ಪ್ರಚಾರ ಮಾಡುತ್ತಿದ್ದಾರೆ. ಇಂದು ಕಾರ್ತಿಕ್ ಮತ್ತು ಕಿಯಾರಾ ಜೋಡಿ ಮುಂಬೈನಲ್ಲಿ ಸತ್ಯಾ ಪ್ರೇಮ್ ಕಥಾ ಸಿನಿಮಾದ ಪ್ರಚಾರ ಮಾಡಿದ್ದಾರೆ. 

ಪ್ರಚಾರ ವೇಳೆ ನಟ ಕಾರ್ತಿಕ್ ಆರ್ಯನ್ ನಡೆದುಕೊಂಡ ರೀತಿ ವೈರಲ್ ಆಗಿದೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೇದಿಕೆ ಮೇಲೆ ಕಾರ್ತಿಕ್ ಮತ್ತು ಕಿರಾಯಾ ಇಬ್ಬರೂ ಇದ್ದರು. ಸಿನಿಮಾ ಹಾಡಿಗೆ ಹೆಜ್ಜೆ ಹಾಕುವಾಗ ಕಿಯಾರಾ ಹೈ ಹೀಲ್ ಚಪ್ಪಲಿಯನ್ನು ಬಿಚ್ಚಿಟ್ಟಿದ್ದರು. ಬಳಿಕ ಚಪ್ಪಲಿ ಹಾಕಿಕೊಳ್ಳಲು ತೆರಳಿದರು. ಕಿಯಾರಾ  ಮೊದಲ ಇಟ್ಟ ಜಾಗದಿಂದ ಚಪ್ಪಲಿಗಳು ಬೇರೆ ಕಡೆಯಗೆ ಹೋಗಿದ್ದವು. ಆಗ ಕಾರ್ತಿಕ್ ಆರ್ಯನ್ ಸ್ವತಃ ಚಪ್ಪಲಿ ಎತ್ತಿಕೊಂಡು ಬಂದು ಕಿಯಾರಾ ಕಾಲಿಗೆ ಹಾಕಿದರು. ಬಳಿಕ ಕಿಯಾರಾ ಚಪ್ಪಲಿ ಸರಿ ಮಾಡಿಕೊಂಡುುಮತ್ತೆ ವೇದಿಕೆ ಮಧ್ಯಕ್ಕೆ ತೆರಳಿದರು. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. 


ಪ್ರೀತಿಯಲ್ಲಿ ನಾನು ಅನ್‌ಲಕ್ಕಿ: ಲವ್ ಲೈಫ್ ಬಗ್ಗೆ ಕಾರ್ತಿಕ್ ಆರ್ಯನ್ ಹೀಗಂದಿದ್ದೇಕೆ?

ಕಾರ್ತಿಕ್ ಆರ್ಯನ್ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾರ್ತಿಕ್ ಮದ್ವೆ ಆಗುವ ಹುಡುಗಿ ತುಂಬಾ ಲಕ್ಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲ ಗಿಮಿಕ್ ಎಂದು ಕಿಡಿ ಕಾರುತ್ತಿದ್ದಾರೆ. ಇದೂ ಕೂಡ ಒಂದು ರೀತಿಯ ಪ್ರಮೋಷನ್  ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕಾರ್ತಿಕ್ ಆರ್ಯನ್ ನಡೆ ಮಾತ್ರ ಅಭಿಮಾನಿಗಳ ಹೃದಯ ಗೆದ್ದಿದೆ. 

 

 

Kartik Aaryan: 10 ದಿನಗಳ ಶೂಟಿಂಗ್​ಗೆ 20 ಕೋಟಿ ಪಡೆದ ಬಾಲಿವುಡ್​ ಚಾಕೊಲೇಟ್​ ಬಾಯ್​!

ಇತ್ತೀಚೆಗಷ್ಟೆ ಹೃತಿಕ್ ರೋಷನ್ ಕೂಡ ಗರ್ಲ್ ಫ್ರೆಂಡ್ ಚಪ್ಪಲಿ ಹಿಡಿದು ಓಡಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಹೃತಿಕ್ ಚಪ್ಪಲಿ ಹಿಡಿದು ಓಡಾಡಿದ ವಿಡಿಯೋ ವೈರಲ್ ಆಗಿತ್ತು. ಈ ಮೊದಲು ದೀಪಿಕಾ ಚಪ್ಪಲಿಯನ್ನು ಪತಿ ರಣ್ವೀರ್ ಸಿಂಗ್ ಹಿಡಿದು ಓಡಾಡಿದ್ದರು. ಇದೀಗ ವೇದಿಕೆ ಮೇಲೆ ಕಿಯಾರಾ ಅಡ್ವಾಣಿಗೆ ಚಪ್ಪಲಿ ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ.  

click me!