ಪ್ರಭಾಸ್ , ದಳಪತಿ ವಿಜಯ್ ಯಾರೂ ಅಲ್ಲ, ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಈಗ ಇವರೇ ನೋಡಿ

Published : Apr 18, 2023, 01:20 PM IST
ಪ್ರಭಾಸ್ , ದಳಪತಿ ವಿಜಯ್ ಯಾರೂ ಅಲ್ಲ, ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಈಗ ಇವರೇ ನೋಡಿ

ಸಾರಾಂಶ

ಪ್ರಭಾಸ್ , ದಳಪತಿ ವಿಜಯ್ ಯಾರೂ ಅಲ್ಲ, ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಈಗ ಶಾರುಖ್ ಖಾನ್.

ಸೌತ್ ಸಿನಿಮಾರಂಗ ವರ್ಸಸ್ ಬಾಲಿವುಡ್ ಎನ್ನುವ ಚರ್ಚೆಯ ನಡುವೆಯೂ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಎನ್ನುವ ವಿಚಾರ ಕೂಡ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಒಂದು ಕಾಲದಲ್ಲಿ ಕೇವಲ ಬಾಲಿವುಡ್ ಸ್ಟಾರ್‌ಗಳ ಹೆಸರುಗಳೇ ಮಾತ್ರ ಇರುತ್ತಿತ್ತು. ಆದರೀಗ ಹಾಗಿಲ್ಲ, ಸೌತ್ ಸ್ಟಾರ್ಸ್ ಕೂಡ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವ ಹಾಗೆ ಭಾರತೀಯ ಸಿನಿಮಾರಂಗ ಆಳುತ್ತಿದ್ದಾರೆ. ದಕ್ಷಿಣದ ಸಿನಿಮಾಗಳು ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡುತ್ತಿವೆ. ಈ ಮೂಲಕ ಭಾರತೀಯ ಸಿನಿಮಾರಂಗವೆಂದರೆ ಕೇವಲ ಬಾಲಿವುಡ್ ಮಾತ್ರವಲ್ಲ ಎನ್ನುವುದನ್ನು ಸಹ ಸಾಬೀತು ಪಡಿಸಿದ್ದಾಗಿದೆ. ಇದೀಗ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಎನ್ನುವ ಚರ್ಚೆ ಶುರುವಾಗಿದೆ. 

ಈ ಲಿಸ್ಟ್‌ನಲ್ಲಿ ಸೌತ್ ಸ್ಟಾರ್ ಪ್ರಭಾಸ್, ರಜನಿಕಾಂತ್, ದಳಪತಿ ವಿಜಯ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ಸೇರಿದಂತೆ ಇನ್ನು ಕೆಲವರ ಹೆಸರಿದೆ. ಬಾಹುಬಲಿ-2 ಸೂಪರ್ ಸಕ್ಸಸ್ ಬಳಿಕ ಪ್ರಭಾಸ್ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ಅಕ್ಷಯ್ ಕುಮಾರ್ ಹಾಗೂ ರಜನಿಕಾಂತ್ ಹೆಸರು ಕೇಳಿಬರುತ್ತಿತ್ತು. ಇದೀಗ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನ ಲಿಸ್ಟ್‌ಗೆ ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿಬರುತ್ತಿದೆ. ಅದು ಮತ್ಯಾರು ಅಲ್ಲ ಬಾಲಿವುಡ್ ಕಿಂಗ್ ಖಾನ್ ಎಂದೆ ಖ್ಯಾತಿಗಳಿಸಿರುವ ಶಾರುಖ್ ಖಾನ್.

   

ಬಾಹುಬಲಿ 2 ನಂತರ ಪ್ರಭಾಸ್ ಸಿನಿಮಾವೊಂದಕ್ಕೆ 120-150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ಟಿ-ಸೀರೀಸ್ ಐದು ಚಿತ್ರಗಳಿಗೆ 100 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಮಹೇಶ್ ಬಾಬು ಮತ್ತು ದಳಪತಿ ವಿಜಯ್ ಅವರಂತಹ ದೊಡ್ಡ ಸ್ಟಾರ್ಸ್ ಕೂಡ 70-100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. 

ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್'ನಲ್ಲಿ ಕನ್ನಡದ ಖ್ಯಾತ ನಟ; ಚಿತ್ರದ ಬಗ್ಗೆ ಹೇಳಿದ್ದೇನು?

ಇದೀಗ ಶಾರುಖ್ ಖಾನ್ ಸಂಭಾವನೆ ವಿಚಾರವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಕಿಂಗ್ ಖಾನ್ ತಮ್ಮ ಸಂಭಾವನೆಯನ್ನು ಎಲ್ಲಾ ಕಲಾವಿದರನ್ನೂ ಮೀರಿಸಿ ಬರೋಬ್ಬರಿ 200 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚಿಗಷ್ಟೆ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿರುವ ಪಠಾಣ್ ಸಿನಿಮಾದದಿಂದ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ಮೂಲಗಳ ಪ್ರಕಾರ ಶೇ.60ರಷ್ಟು ಪಾಲನ್ನು ಶಾರುಖ್ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇದು ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನ ಸ್ಥಾನಕ್ಕೆ ಏರಿಸಿದೆ. ಸದ್ಯದ ಮಟ್ಟಿಗೆ ಶಾರುಖ್ ಟಾಪರ್ ಎಂದು ಹೇಳಲಾಗುತ್ತಿದೆ. ಆದರೆ ಈ ದಾಖಲೆಯನ್ನು ಮುರಿದು ಬೇರೆ ಕಲಾವಿದರು ಸಹ ಮುನ್ನುಗ್ಗಬಹುದು. ಆದರೆ ಸದ್ಯದ ಮಟ್ಟಕ್ಕೆ ಶಾರುಖ್ ಸಂಭಾವನೆಯಲ್ಲಿ ಕಿಂಗ್ ಆಗಿದ್ದಾರೆ. 

2023ರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮತ್ತು ಎಸ್‌ ಎಸ್ ರಾಜಮೌಳಿ!

ಅಂದಹಾಗೆ ಯಾವುದೇ ಕಲಾವಿದರು ಸಹ ತಮ್ಮ ನಿಜವಾದ ಸಂಭಾವನೆಯ ಅಂಕಿಅಂಶಗಳನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಆದರೆ ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಶಾರುಖ್ ಎನ್ನಲಾಗುತ್ತಿದೆ. ಪಠಾಣ್ ಸಕ್ಸಸ್ ಬಳಿಕ ಶಾರುಖ್ ಖಾನ್ ಸಂಭಾವನೆ ಮತ್ತಷ್ಟು ಹೆಚ್ಚಾಗಲಿದೆ. ಸದ್ಯ ಕಿಂಗ್ ಖಾನ್ ಜವಾನ್ ಮತ್ತು ಡಂಕಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯದಲ್ಲೇ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಶಾರುಖ್ ಖಾನ್. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aamir Khan and Gauri Spratt Wedding: ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ; ಆಪ್ತರಿಗಷ್ಟೇ ಆಹ್ವಾನ!
ಗರ್ಭಿಣಿಯಾಗಿದ್ದರೂ ನಟನೆಯಿಂದ ಹಿಂದೆ ಸರಿಯದ ಸಮಂತಾ: ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್!