Ileana D'Cruz: ಮದುವೆ ಆಗದೆ ತಾಯಿ ಆಗ್ತಿರುವ ನಟಿ ಇಲಿಯಾನಾ; ಮಗುವಿನ ತಂದೆ ಯಾರೆಂದು ಕೇಳ್ತಿದ್ದಾರೆ ನೆಟ್ಟಿಗರು

Published : Apr 18, 2023, 10:39 AM ISTUpdated : Apr 18, 2023, 10:59 AM IST
Ileana D'Cruz: ಮದುವೆ ಆಗದೆ ತಾಯಿ ಆಗ್ತಿರುವ ನಟಿ ಇಲಿಯಾನಾ; ಮಗುವಿನ ತಂದೆ ಯಾರೆಂದು ಕೇಳ್ತಿದ್ದಾರೆ ನೆಟ್ಟಿಗರು

ಸಾರಾಂಶ

ಮದುವೆ ಆಗದೆ ತಾಯಿ ಆಗ್ತಿದ್ದಾರೆ ನಟಿ ಇಲಿಯಾನಾ. ಫೋಟೋ ಹಂಚಿಕೊಂಡ ನಟಿಗೆ ಮಗುವಿನ ತಂದೆ ಯಾರು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.  

ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ಹಾಟ್ ಫೋಟೋ ಶೂಟ್ ಮೂಲಕ ಮಿಂಚುತ್ತಿದ್ದ ಇಲಿಯಾನಾ ಇದೀಗ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ನಟಿ ಇಲಿಯಾನಾ ಬಹಿರಂಗ ಪಡಿಸಿದ್ದಾರೆ. ತಾಯಿ ಆಗುತ್ತಿರುವ ಸಂತಸದ ವಿಚಾರವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲಿಯಾನಾ ಹಂಚಿಕೊಂಡ ಸಂತಸದ ಸುದ್ದಿ ಅಭಿಮಾನಿಗಳ ತಲೆಕೆಡಿಸಿದೆ. ಮದುವೆಯಾದೇ ತಾಯಿ ಆಗುತ್ತಿರುವ ಇಲಿಯಾನಾ ಅವರಿಗೆ ಆ ಮಗುವಿನ ತಂದೆ ಯಾರು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. 

ಇಲಿಯಾನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಶೇರ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಸರದ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ಇಲಿಯಾನಾ, 'ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಇಲಿಯಾನಾ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಅಂದಹಾಗೆ ಇಲಿಯಾನಾ ಯಾರನ್ನು ಮದುವೆಯಾಗಿದ್ದಾರೆನ ಅಥವಾ ಯಾರ ಜೊತೆ ಸಂಬಂಧದಲ್ಲಿದ್ದಾರೆ ಎನ್ನುವ ಬಗ್ಗೆ ಬಹಿರಂಗ ಪಡಿಸಿಲಿಲ್ಲ. 

ಇಲಿಯಾನಾ, ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಬಾರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರವಾಸಕ್ಕೆ ಹೋದ ಸಮಯದಲ್ಲಿ ಕತ್ರಿನಾ ಗ್ಯಾಂಗ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. ಆದರೆ ಅವರನ್ನೇ ಮದುವೆಯಾಗಿದ್ದಾರಾ ಅಥವಾ ಮದುವೆಯಾಗದೇ ತಾಯಿಯಾಗುತ್ತಿದ್ದಾರಾ ಎನ್ನುವ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. 

ತಮಿಳು ಚಿತ್ರರಂಗದಿಂದ ನಟಿ ಇಲಿಯಾನಾ ಡಿಕ್ರೂಜ್ ನಿಷೇಧ? ಕಾರಣವೇನು ಗೊತ್ತಾ?

ಇಲಿಯಾನಾ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವಾಗಲೇ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಲಿವಿಂಗ್ ಟುಗೇದರ್ ನಲ್ಲಿದ್ದರು ಎನ್ನಲಾಗಿತ್ತು.  ಆಂಡ್ರ್ಯೂ ನೀಬೋನ್ ಜೊತೆ ಡೋಟಿಂಗ್ ಪ್ರಾರಂಭಿಸಿದ ಬಳಿಕ ಇಲಿಯಾನಾ ಸಿನಿಮಾರಂಗದಿಂದ ದೂರ ಸರಿದಿದ್ದರು. ಆದರೆ 2019ರಲ್ಲಿ ಬ್ರೇಕಪ್ ಮಾಡಿಕೊಳ್ಳುವ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದರು.&

Ileana D'Cruz ಬ್ಯಾಕ್ ದಪ್ಪ ಸೊಂಟ ಸಣ್ಣ; ನೆಗೆಟಿವ್ ಕಾಮೆಂಟ್ ಮಾಡ್ರಿ ಉತ್ತರ ಕೊಡ್ತೀನಿ ಎಂದೇಳಿದ ನಟಿ

ಆಂಡ್ರ್ಯೂ ನೀಬೋನ್ ಜೊತೆ ಬ್ರೇಕಪ್ ಬಳಿಕ ಇಲಿಯಾನಾ ಕತ್ರಿನಾ ಕೈಫ್ ಸಹೋದರನ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಸೆಬಾಸ್ಟಿಯನ್ ಲಾರೆಂಟ್ ಲಂಡನ್‌ನಲ್ಲಿ ನೆಲೆಸಿದ್ದು ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದಾರೆ. ಆಗಾಗ ಭಾರತಕ್ಕೆ ಬರುವ ಸೆಬಾಸ್ಟಿಯನ್ ಸಹೋದರಿ ಕತ್ರಿನಾ ಮತ್ತು ಕುಬುಂಬದ ಜೊತೆ ಕಾಣಿಸಿಕೊಳ್ಳುತ್ತಾರೆ. ಆಗ ಇಲಿಯಾನಾ ಕೂಡ ಜೊತೆಯಲ್ಲಿರುತ್ತಾರೆ. ಇದೀಗ ಇಲಿಯಾನಾ ಗರ್ಭಿಣಿ ಎನ್ನುವ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಆದರೂ ಅಭಿನಂದನೆ ತಿಳಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!