ಬಾಲಿವುಡ್ ಎಂದ ಕೂಡಲೇ ಮೂವರು ಖಾನ್‌ಗಳು, ಬಚ್ಚನ್, ಕಪೂರ್ ಕುಟುಂಬ ಅತಿ ಶ್ರೀಮಂತವೆಂದು ನೀವಂದುಕೊಳ್ಳಬಹುದು. ಆದರೆ ಬಾಲಿವುಡ್‌ನ ಅತಿ ಶ್ರೀಮಂತ ಕುಟುಂಬ ಇವರದ್ಯಾರದ್ದೂ ಅಲ್ಲ.
ಬಾಲಿವುಡ್‍ನ ಶ್ರೀಮಂತ ಕುಟುಂಬ ಎಂದ ಕೂಡಲೇ ಬಚ್ಚನ್ ಇಕಬಹುದು ಅಥವಾ ಕಪೂರ್‌ಗಳಿರಬಹುದು, ಇಲ್ಲವೇ ಶಾರೂಖ್ ಖಾನ್, ಸಲ್ಮಾನ್ ಖಾನ್ ಯಾರದಾದರೂ ಕುಟುಂಬ ಇರಬಹುದು ಎಂದು ಅಂದುಕೊಳ್ಳುವುದು ಸಹಜ. ಇವರೆಲ್ಲರದೂ ಶ್ರೀಮಂತ ಕುಟುಂಬವೇ ಸರಿ, ಆದರೆ, ಬಾಲಿವುಡ್‌ನಲ್ಲಿ ಎಲ್ಲರಿಗಿಂತ ಅತಿ ಶ್ರೀಮಂತ ಕುಟುಂಬ ಹೊಂದಿರುವುದು ಇವರ್ಯಾರೂ ಅಲ್ಲ. ನೂರು ಕೋಟಿ ಚಾರ್ಜ್ ಮಾಡುವ ಯಾವ ನಟನದೂ ಅಲ್ಲ. ಬದಲಿಗೆ ಭೂಷಣ್ ಕುಮಾರ್ ಕುಟುಂಬವಾಗಿದೆ.
ಭೂಷಣ್ ಕುಮಾರ್ ಎಂದರೆ ತಿಳಿಯಲಿಕ್ಕಿಲ್ಲ. ಅದೇ ಟಿ ಸಿರೀಸ್ ಎಂದರೆ ನೀವು ಆ ಹೆಸರನ್ನು ಕೇಳಿರಲೇಬೇಕು. ಹೌದು,ಟಿ ಸಿರೀಸ್ ಮ್ಯೂಸಿಕ್ ಕಂಪನಿಯ ಒಡೆಯ ಭೂಷಣ್ ಕುಮಾರ್ ಕುಟುಂಬ ಬಾಲಿವುಡ್‌ನ ಅತಿ ಶ್ರೀಮಂತ ಕುಟುಂಬವಾಗಿದೆ. ಈ ಕುಟುಂಬದ ನಿವ್ವಳ ಮೌಲ್ಯವು ಸೂಪರ್‌ಸ್ಟಾರ್‌ಗಳು ಮತ್ತು ಕಪೂರ್‌ಗಳು, ಬಚ್ಚನ್‌ಗಳು ಮತ್ತು ಜೋಹರ್‌ಗಳಂತಹ ಹೆಸರಾಂತ ಕುಟುಂಬಗಳ ಸಂಪತ್ತನ್ನು ಮೀರಿಸಿದೆ.
ಯಪ್ಪಾ, ಹಿಂಗೆಲ್ಲ ಇರುತ್ತಾ ಆಡಿಶನ್?! 10 ಗಂಡಸರನ್ನು ನಿಲ್ಲಿಸಿ ನಟಿಯ ಬಳಿ ಕಿಸ್ ಮಾಡಲು ಹೇಳಿದ ನಿರ್ದೇಶಕ!
ಭೂಷಣ್ ಕುಮಾರ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ಸಂಗೀತ ನಿರ್ಮಾಪಕ. ಅವರು ಟಿ-ಸೀರೀಸ್ ಮ್ಯೂಸಿಕ್ ಲೇಬಲ್‌ನ ಅಧ್ಯಕ್ಷರೂ ಆಗಿದ್ದಾರೆ. 2022ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯ ಪ್ರಕಾರ, ಭೂಷಣ್ ಕುಮಾರ್ ಮತ್ತು ಅವರ ಕುಟುಂಬವು ಸುಮಾರು 10,000 ಕೋಟಿ ರೂ ನಿವ್ವಳ ಆಸ್ತಿ ಹೊಂದಿದೆ. ಟಿ-ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಮಗ ಭೂಷಣ್ ಕುಮಾರ್ ಅವರ ಚಿಕ್ಕಪ್ಪ ಕ್ರಿಶನ್ ಕುಮಾರ್ (ಮಾಜಿ ನಟ ಮತ್ತು ಗುಲ್ಶನ್ ಅವರ ಸಹೋದರ) ವ್ಯವಹಾರದಲ್ಲಿ ಸಹಾಯ ಮಾಡುತ್ತಾರೆ. ಅವರ ಸಹೋದರಿ ಖುಶಾಲಿ ನಟಿಯಾಗಿದ್ದು, ತುಳಸಿ ಕುಮಾರ್ ಬಾಲಿವುಡ್‌ನಲ್ಲಿ ಗಾಯಕಿಯಾಗಿದ್ದಾರೆ. ಅವರು ಕುಟುಂಬ ಶೋಬಿಜ್‌ನ ಭಾಗವಾಗಿದೆ.
ಭೂಷಣ್ ಕುಮಾರ್ ಅವರು ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ದಿವ್ಯಾ ಖೋಸ್ಲಾ ಕುಮಾರ್ ಅವರನ್ನು ವಿವಾಹವಾದರು. ವರದಿಗಳ ಪ್ರಕಾರ, ನಟಿ ದಿವ್ಯಾ ಖೋಸ್ಲಾ ಕುಮಾರ್ ಅವರು ಟಿ-ಸೀರೀಸ್ ಕಂಪನಿಯ ಶೇಕಡಾ 0.45ರಷ್ಟು ಮಾತ್ರ ಹೊಂದಿದ್ದಾರೆ. ಆದರೆ ಅನೇಕ ಮೂಲಗಳು ಭೂಷಣ್ ಕುಮಾರ್ ಅವರ ನಿವ್ವಳ ಮೌಲ್ಯವು ಕೇವಲ 414 ಕೋಟಿ ರೂ. ಎನ್ನುತ್ತವೆ.
ಯಶ್ ರಾಜ್ ಫಿಲಂಸ್ ಮಾಲೀಕ ಆದಿತ್ಯ ಚೋಪ್ರಾ ಕುಟುಂಬ 7,000 ಕೋಟಿ ರೂಪಾಯಿ ಆಸ್ತಿ ಹೊಂದಿದೆ ಎನ್ನಲಾಗಿದೆ. ವರದಿಗಳ ಪ್ರಕಾರ ಧರ್ಮ ಪ್ರೊಡಕ್ಷನ್ಸ್ ಮಾಲೀಕ ಕರಣ್ ಜೋಹರ್ ಮತ್ತು ಅವರ ಕುಟುಂಬ 1,700 ಕೋಟಿ ರೂ. ಹೊಂದಿದೆ. ಬಾಲಿವುಡ್‌ನ ಮೊದಲ ಕುಟುಂಬ ಎಂದು ಕರೆಯಲ್ಪಡುವ ಕಪೂರ್ ಕುಟುಂಬವು ಅನೇಕ ಸೂಪರ್‌ಸ್ಟಾರ್‌ಗಳನ್ನು ನೀಡಿದೆ. ಆದರೆ ಅವರ ಒಟ್ಟು ಆಸ್ತಿ ಸುಮಾರು 1,000 ಕೋಟಿ ರೂ.
ಈಕೆ ಪಾಕಿಸ್ತಾನಿ, ಆದ್ರೆ ದಿಲ್ ಹೈ ಹಿಂದೂಸ್ತಾನಿ; ಪಾಕ್ ಹುಡುಗಿಗೆ ಭಾರತೀಯ ದಾನಿಯ ಹೃದಯ ಕಸಿ
ವರದಿಗಳ ಪ್ರಕಾರ, ಶಾರುಖ್ ಖಾನ್ ಅವರು 6,000 ಕೋಟಿ ರೂ.ಗಿಂತಲೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತೀಯ ಶ್ರೀಮಂತ ನಟರಾಗಿದ್ದಾರೆ. ವರದಿಗಳ ಪ್ರಕಾರ ಸಲ್ಮಾನ್ ಖಾನ್ ಅವರ ನಿವ್ವಳ ಮೌಲ್ಯ ಸುಮಾರು 2,900 ಕೋಟಿ ಆಗಿದ್ದರೆ, ಅಮೀರ್ ಖಾನ್ ಅವರ ನಿವ್ವಳ ಮೌಲ್ಯ 1,862 ಕೋಟಿ ರೂ. ಮೂವರ ಒಟ್ಟು ನಿವ್ವಳ ಮೌಲ್ಯವು 9,700 ಕೋಟಿ ರೂಪಾಯಿಗಳಾಗಿದ್ದು, ಇದು ಭೂಷಣ್ ಕುಮಾರ್ ಅವರ ಕುಟುಂಬದ ನಿವ್ವಳ ಮೌಲ್ಯಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.