ಆಕೆ ಧೈರ್ಯ ಮೆಚ್ಚಬೇಕು...ನಾನು ಸ್ಟೈಲ್ ಮಾಡುವೆ ಆದರೆ ಆಕೆ ಮಾಡುವ ರೀತಿ ಮಾಡಲು ನನಗೆ ಧೈರ್ಯವಿಲ್ಲ ಎಂದು ಕರೀನಾ...
ಬಾಲಿವುಡ್‌ನಲ್ಲಿ ಸೈಜ್ ಝಿರೋ ಕ್ರೇಜ್ ಕ್ರಿಯೇಟ್ ಮಾಡಿದ ಕರೀನಾ ಕಪೂರ್ ಧರಿಸದ ಬ್ರ್ಯಾಂಡ್ ಇಲ್ಲ ಡಿಸೈನರ್ ಬಟ್ಟೆ ಇಲ್ಲ. ಮಾರ್ಕೆಟ್‌ಗೆ ಯಾವ ಬ್ರ್ಯಾಂಡ್ ಕಾಲಿಟ್ಟರೂ ಮೊದಲು ಸಂಪರ್ಕ ಮಾಡುವುದು ಕರೀನಾ ಕಪೂರ್‌ನ, ಏಕೆಂದರೆ ಆಕೆಯಷ್ಟು ಸಿಂಪಲ್ ಆಂಡ್ ಕೂಲ್ ಆಗಿ ಯಾರೂ ಡ್ರೆಸ್ ಕ್ಯಾರಿ ಮಾಡುವುದಿಲ್ಲ ಎಂದು. ಈಗ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್ ಎಂಟ್ರಿ ಕೊಟ್ಟ ಮೇಲೆ ಫ್ಯಾಷನ್ ಲೋಕವನ್ನು ಪ್ರಶ್ನೆ ಮಾಡುವ ರೀತಿ ಆಗಿದೆ. ನೆಟ್ಟಿಗರು ಮಾತ್ರವಲ್ಲ ಸಿನಿಮಾ ಸ್ಟಾರ್‌ಗಳು ಕೂಡ ಉರ್ಫಿ ಲುಕ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಆರೇಂಜ್ ಬಣ್ಣದ ಸ್ಯಾಟಿನ್ ಗೌನ್ ಧರಿಸಿ ಕರೀನಾ ಕಪೂರ್ ಮುಂಬೈನಲ್ಲಿರುವ ಫಿಜ್ಜಿ ಗೋಬ್ಲೆಟ್ ಹೊಸ ಅಂಗಡಿ ಓಪನಿಂಗ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಫಿಜ್ಜಿ ಗೋಬ್ಲೆಟ್ ರಾಯಭಾರಿ ಆಗಿರುವ ಬೇಬೋಗೆ ಮಾಧ್ಯಮ ಮಿತ್ರರು ಉರ್ಫಿ ಜಾವೇಸ್ ಸ್ಟೈಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೆಲವು ನಿಮಿಷಗಳ ಕಾಲ ಯೋಚನೆ ಮಾಡಿ ಉತ್ತರ ಕೊಟ್ಟಿದ್ದಾರೆ......
ಚಿಕ್ಕ ಹುಡ್ಗೀರ್‌ನ ಮದ್ವೆ ಮಾಡ್ಕೊಳ್ಳಿ; ಸಲಹೆ ಕೊಟ್ಟ ಸೈಫ್‌ಗೆ 'ಅಂಕಲ್‌ನ ಹೊಡಿತೀನಿ ಸುಬ್ಬಿ' ಎಂದ ನೆಟ್ಟಿಗರು
'ಫ್ಯಾಷನ್ ಅಂದ್ರೆ ಅಭಿವ್ಯಕ್ತಿ ಮತ್ತು ನಮ್ಮ ಸ್ವಾತಂತ್ರ್ಯ. ವಿಚಿತ್ರ ರೀತಿಯಲ್ಲಿ ಬಟ್ಟೆ ಡಿಸೈನ್ ಮಾಡಿದ್ದರೂ ಕೇರ್ ಮಾಡದೆ ತುಂಬಾ ಧೈರ್ಯದಿಂದ ಆಕೆ ಅದನ್ನು ಧರಿಸುವುದಕ್ಕೆ ಮಚ್ಚಬೇಕು. ಆಕೆಗೆ ಯಾವ ರೀತಿ ಬೇಕೋ ಅದೇ ರೀತಿ ಮಾಡುತ್ತಾಳೆ...ನನ್ನ ಪ್ರಕಾರ ಇದೇ ಫ್ಯಾಷನ್. ನಮ್ಮ ಸ್ಕಿನ್‌ನಲ್ಲಿ ನಾವು ಕಂಫರ್ಟ್ ಆಗಿದ್ದು ನಮಗೆ ಇಷ್ಟ ಪಟ್ಟ ರೀತಿಯಲ್ಲಿ ಬಟ್ಟೆ ಧರಿಸಬೇಕು. ಆತ್ಮವಿಶ್ವಾಸ ನನಗೆ ಇಷ್ಟವಾಗುತ್ತದೆ..ನಾನು ಕೂಡ ಆತ್ಮವಿಶ್ವಾಸವನ್ನು ನಂಬುವ ವ್ಯಕ್ತಿ ಹೀಗಾಗಿ ಅವಳಲ್ಲಿ ಆತ್ಮವಿಶ್ವಾಸ ಇರುವುದಕ್ಕೆ ನನಗೆ ಇಷ್ಟವಾಗುತ್ತಾಳೆ. ಆಕೆ ನಡಿಗೆಯಲ್ಲಿ ಉತ್ತರವಿದೆ. ಹ್ಯಾಟ್ಸ್ ಆಫ್' ಎಂದು ಉರ್ಫಿ ಜಾವೇದ್ ಬಗ್ಗೆ ಕರೀನಾ ಕಪೂರ್ ಮಾತನಾಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಾಯಕಿಯರು ಮತ್ತೊಬ್ಬರ ಮೇಲೆ ಕಾಮೆಂಟ್ ಮಾಡುವುದಕ್ಕೂ ಮುನ್ನ ಸಾವಿರ ಸಲ ಯೋಚನೆ ಮಾಡುತ್ತಾರೆ. ಆದರೆ ಕರೀನಾ ಕಪೂರ್ ಯಾವುದಕ್ಕೂ ಕೇರ್ ಮಾಡಿದ ತುಂಬಾ ಕೂಲ್ ಅಗಿ 'ಉರ್ಫಿ ರೀತಿ ನನಗೆ ಧೈರ್ಯವಿಲ್ಲ...ಆಕೆ ತುಂಬಾ ಧೈರ್ಯ ಮಾಡಿದ್ದಾರೆ ಆ ರೀತಿ ಉಡುಪುಗಳನ್ನು ಮುಂಬೈ ರಸ್ತೆಗಳಲ್ಲಿ ಧರಿಸುವುದು ಸಾಮಾನ್ಯದ ವಿಚಾರವಲ್ಲ' ಎಂದು ಕರೀನಾ ಹೇಳಿದ್ದಾರೆ.
ಯಾವ್ದೋ ದೊಡ್ಡ ಕಾಯಿಲೆ ಬಂದು ಕರೀನಾಗೆ ಮಗು ಆಗ್ಬಾರ್ದಿತ್ತು; ಕಿರಾತಕನ ಕಾಮೆಂಟ್‌ಗೆ ಶರ್ಮಿಳಾ ಬೇಸರ
ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡರೆ ನೆಗೆಟಿವ್ ಕಾಮೆಂಟ್ ಸಿಂಪಲ್ ಲುಕ್‌ನಲ್ಲಿದ್ದರೂ ಕಾಮೆಂಟ್ ಹೀಗಾಗಿ ನೆಟ್ಟಿಗರು ಚುಚ್ಚು ಮಾತುಗಳ ಬಗ್ಗೆ ಕೇರ್ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾಗ 'ಇಲ್ಲ ಖಂಡಿತಾ ಕಿವಿಗೆ ಹಾಕಿಕೊಳ್ಳುವುದಿಲ್ಲ. ನಾನು ಧರಿಸುವ ಉಡುಪಿನಿಂದ ತುಂಬಾ ಖುಷಿ ಹಾಗೂ ಕಂಫರ್ಟ್ ಇರಬೇಕು ಏಕೆಂದರೆ ನಾನು ಅದನ್ನು ಧರಿಸುವುದು ಜನರಲ್ಲ. ಹೇಗಿದ್ದರೂ ಜನ ಕಾಮೆಂಟ್ ಮಾಡೇ ಮಾಡುತ್ತಾರೆ' ಎಂದಿದ್ದಾರೆ ಕರೀನಾ ಕಪೂರ್.
ವಯಸ್ಸಿನ ಬಗ್ಗೆ ಪ್ರಶ್ನೆ:
'ನೀವು ನಿಮ್ಮ ವಯಸ್ಸನ್ನು ಒಪ್ಪಿಕೊಳ್ಳಬೇಕು. ನಿಮ್ಮ ವಯಸ್ಸಿನ ಬಗ್ಗೆ ನೀವು ಹೆಮ್ಮೆ ಪಡಬೇಕು. ಇಂದು ಮಹಿಳೆಯರು ತಮ್ಮ ವಯಸ್ಸಿನ ಬಗ್ಗೆ ಕೇಳಿದರೆ ಹುಚ್ಚರಾಗಿಬಿಟ್ಟಿದ್ದಾರೆ. ಕೆಲಸ-ಜೀವನದ ಸಮತೋಲನವನ್ನು ಸಾಧಿಸಲು ಒಂದು ಸೂತ್ರವಿದೆ ಎಂದು ನಾನು ಭಾವಿಸುವುದಿಲ್ಲ, ಅದರಲ್ಲಿ ಯಾವುದೇ ರಹಸ್ಯವಿಲ್ಲ. ನೀವು ಏನು ಮಾಡುತ್ತೀರಿ ಅಥವಾ ಮಾಡಬಾರದು ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟದ್ದು. ನಾನು ಮಾಡದ ವಿಷಯಗಳಿಗೆ ನಾನು ಇಲ್ಲ ಎಂದು ಹೇಳಲು ಬಯಸುತ್ತೇನೆ.ನನ್ನ ಮಕ್ಕಳನ್ನು ಒಬ್ಬಂಟಿಯಾಗಿ ಬಿಡಲು ನನಗೆ ಮನಸ್ಸಿಲ್ಲದಿದ್ದರೆ, ಪ್ರಶಸ್ತಿ ಕಾರ್ಯಕ್ರಮಕ್ಕೆ ಹೋಗಲು ನಾನು ಬಯಸುವಿದ್ದಿಲ್ಲ. ಹಾಗಾಗಿ ನನಗಾಗಿ ಆಯ್ಕೆಯನ್ನು ಆರಿಸಿಕೊಳ್ಳಲು ನಾನು ಸಂಪೂರ್ಣವಾಗಿ ಸ್ವತಂತ್ರಳಾಗಿದ್ದೇನೆ' ಎಂದು ಕರೀನಾ ಹೇಳಿದ್ದಾರೆ.