Vivian Dsena: 'ಮತಾಂತರವಾಗಿದ್ದೇನೆ, ಪ್ರಶ್ನೆ ಕೇಳಬೇಡಿ ಪ್ಲೀಸ್​...' ಎಂದ ನಟ ವಿವಿಯನ್​

By Suvarna News  |  First Published Mar 28, 2023, 7:56 PM IST

ಕಿರುತೆರೆ ನಟ ವಿವಿಯನ್ ಡಿಸೇನಾ ಅವರು ಕ್ರೈಸ್ತ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 
 


ಕಿರುತೆರೆ ನಟ ವಿವಿಯನ್ ಡಿಸೇನಾ (Vivian Dsena) ಹಿಂದಿ ಧಾರಾವಾಹಿ ನೋಡುವವರ ಫೆವರೆಟ್​ ಹೀರೊ. ಝಲಕ್ ದಿಖ್ಲಾ ಜಾ 8 ಮತ್ತು ಫಿಯರ್ ಫ್ಯಾಕ್ಟರ್ ಎಂಬ ರಿಯಾಲಿಟಿ ಷೋ ಗಳಲ್ಲಿ ಇವರು ಭಾಗವಹಿಸಿದ ಮೇಲಂತೂ ಫ್ಯಾನ್ಸ್​ಗಳ ಸಂಖ್ಯೆ ಹೆಚ್ಚಿಸಿಕೊಂಡಿರೋ ಈ ನಟನ ಖಾಸಗಿ ಜೀವನದ ಗುಟ್ಟೊಂದು ಇತ್ತೀಚೆಗೆ ರಿವೀಲ್​ ಆಗಿತ್ತು.  ವಿವಿಯನ್​ ಡಿಸೇನಾ  ಅಭಿಮಾನಿಗಳಿಗೆ ಡಬಲ್​ ಶಾಕ್​ ನೀಡಿದ್ದರು. ಇವರು   ತಮ್ಮ ಈಜಿಪ್ಟ್ ಗೆಳತಿಯನ್ನು ಮದುವೆಯಾಗಿ ಒಂದು ವರ್ಷವಾಗಿದೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ವರದಿಯ ಪ್ರಕಾರ, ವಿವಿಯನ್ ಈಜಿಪ್ಟ್ ಪ್ರಜೆಯಾಗಿರುವ ತನ್ನ ದೀರ್ಘಕಾಲದ ಸಂಗಾತಿ ನೌರಾನ್ ಅಲಿಯನ್ನು ವಿವಾಹವಾಗಿದ್ದಾರಂತೆ, ಆದರೆ ಅದನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾರಿಗೂ ಗೊತ್ತಾಗದೆ ರಹಸ್ಯವಾಗಿಯೇ ಇಟ್ಟಿದ್ದಾರೆ.  ತಾವು ಈಜಿಪ್ಟ್​ನಲ್ಲಿಯೇ ನೌರನ್ (Nouran) ಎಂಬಾಕೆಯನ್ನು ವಿವಾಹವಾಗಿದ್ದು, ಮದುವೆಯಾಗಿ ಒಂದು ವರ್ಷವಾಗಿದೆ ಎಂದಿದ್ದರು. ಆದರೆ ಈ ಬಗ್ಗೆ ಹೆಚ್ಚಿಗೆ ಹೇಳಲು ಇಷ್ಟಪಡದಿದ್ದ ನಟ ಇದರ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ನನ್ನ ಅಸಿಸ್ಟೆಂಟ್​ ಅವರನ್ನು ಕೇಳಿ ಎಂದು ಜಾಗ ಖಾಲಿ ಮಾಡಿದ್ದರು.  ನಂತರ ಇನ್ನೊಂದು ಶಾಕ್​ ಏನೆಂದರೆ ಅವರಿಗೆ ನಾಲ್ಕು ತಿಂಗಳು ಮಗು ಕೂಡ ಇದೆ ಎನ್ನುವುದು. ಈ ಡಬಲ್​ ಶಾಕಿಂಗ್​ ಸುದ್ದಿ ಕೊಟ್ಟಿರುವ ನಡುವೆಯೇ ನಟ ಈಗ ಮತ್ತೊಂದು ವಿಷಯವನ್ನು ಬಹಿರಂಗಗೊಳಿಸಿದ್ದಾರೆ. 

ಅದು ಮತಾಂತರಗೊಂಡಿರುವ ಸುದ್ದಿ! ಜನ್ಮತಃ ಕ್ರೈಸ್ತಾಗಿರುವ  (Christian) ವಿವಿಯನ್​, ಇಸ್ಲಾಂ ಧರ್ಮವನ್ನು ಅನುಸರಿಸುವ ಬಗ್ಗೆ ಮಾತನಾಡಿದ್ದಾರೆ. ಕಸಮ್ಹ್ ಸೇ ಮತ್ತು ಮಧುಬಾಲಾ - ಏಕ್ ಇಷ್ಕ್ ಏಕ್ ಜುನೂನ್‌ನಂತಹ ಕಾರ್ಯಕ್ರಮಗಳೊಂದಿಗೆ ಖ್ಯಾತಿಗೆ ಏರಿರುವ ವಿವಿಯನ್,  ಟಿವಿಗೆ ನೀಡಿರುವ ಸಂದರ್ಶನ ಒಂದರಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ತಾವು 2019 ರಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ.   'ನನ್ನ ಜೀವನದಲ್ಲಿ ಏನೂ ಬದಲಾಗಿಲ್ಲ. ನಾನು ಕ್ರಿಶ್ಚಿಯನ್ ಆಗಿ ಹುಟ್ಟಿದ್ದೇನೆ ಮತ್ತು ನಾನು ಈಗ ಇಸ್ಲಾಂ ಧರ್ಮವನ್ನು ಅನುಸರಿಸುತ್ತೇನೆ. ಈ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ. ನಾನು ನೆಮ್ಮದಿಯಿಂದ ಇದ್ದೇನೆ. ನಾನು 2019 ರ ಪವಿತ್ರ ತಿಂಗಳ ರಂಜಾನ್‌ನಲ್ಲಿ (Ramzaan) ಇಸ್ಲಾಂ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದೆ. ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದರಿಂದ  ನಾನು ಸಾಕಷ್ಟು ಶಾಂತಿ ಮತ್ತು ಸಮಾಧಾನವನ್ನು ಕಂಡುಕೊಳ್ಳುತ್ತೇನೆ. ಹಾಗಾಗಿ ಇಲ್ಲಿ ನಾನು ಎಲ್ಲಾ ಅನಗತ್ಯ ಊಹಾಪೋಹಗಳಿಗೆ ವಿರಾಮ ಹಾಕುತ್ತೇನೆ' ಎಂದಿದ್ದಾರೆ. ಈಗ ತಾವು  ಅರೇಬಿಕ್ ಕಲಿಯುತ್ತಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.

Vivian Dsena: ಈ ನಟನ ಮದುವೆನೂ ಸೀಕ್ರೇಟ್​, ಮಗುನೂ ಸೀಕ್ರೇಟ್​, ಅಭಿಮಾನಿಗಳಿಗೆ ಡಬಲ್​ ಶಾಕ್​!

ನಟ ಈ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ  (Instagram) 'ರಂಜಾನ್ ಆಚರಿಸುತ್ತಿದ್ದೇನೆ' ಎಂದು ಹಂಚಿಕೊಂಡಿದ್ದರು. ಅವರ ಹೆಚ್ಚಿನ ಪೋಸ್ಟ್‌ಗಳಲ್ಲಿ, 'ಇನ್ಶಾಲ್ಲಾಹ್' ಅನ್ನು ಬಳಸಿದ್ದಾರೆ, ಇದರಿಂದ ಅವರು  ಇಸ್ಲಾಂ ಧರ್ಮಕ್ಕೆ ತಿರುಗಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಇದೀಗ ಅದಕ್ಕೆ ತೆರೆ ಬಿದ್ದಿದೆ.  ನಟ ರಂಜಾನ್ ಆರಂಭದಲ್ಲಿ ಅಭಿಮಾನಿಗಳಿಗೆ ಟಿಪ್ಪಣಿಯನ್ನು ಸಹ ಪೋಸ್ಟ್ ಮಾಡಿದ್ದರು. ಅದರಲ್ಲಿ, 'ಶುಕ್ರವಾರದಂದು  ಪ್ರಾಮಾಣಿಕವಾಗಿ ಉಪವಾಸ ಮಾಡುತ್ತಿದ್ದೇನೆ. ಈ  ಉಪವಾಸಗಳನ್ನು ಮಾಡುತ್ತಾ  ಪೂರ್ಣವಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ' ಎಂದಿದ್ದರು, ನಂತರ ಸರ್ವಶಕ್ತನಲ್ಲಿ ಬೇಡಿಕೊಳ್ಳುವುದು ಏನೆಂದರೆ,  ನಮ್ಮನ್ನು ಅಜಾಗರೂಕತೆಯಿಂದ ದೂರವಿರಿಸಿ ಮತ್ತು ನಮ್ಮೆಲ್ಲರನ್ನೂ ಕ್ಷಮಿಸಿ ಆಮೇನ್​ ಎಂದಿದ್ದರು.

ಅಂದಹಾಗೆ ವಿವಿಯನ್​ಗೆ ಇದು ಎರಡನೆಯ ಮದುವೆ. ನಟ ದಂಪತಿಗಳಾದ ವಿವಿಯನ್ ಮತ್ತು ವಹ್ಬಿಜ್ ದೊರಾಬ್ಜಿ 2016 ರಲ್ಲಿ ಬೇರ್ಪಟ್ಟರು. ಆಗಲೂ ಅವರು ಮಾಧ್ಯಮದವರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ.  ಇದು ತಮ್ಮ ಮತ್ತು ವಹ್ಬಿಜ್ ಅವರ ವೈಯುಕ್ತಿಕ ವಿಚಾರವಾಗಿದ್ದು, ಇದು ಬೇರೆಯವರು ತಲೆ ಹಾಕುವ ವಿಚಾರವಲ್ಲ ಎಂದು ಹೇಳಿದ್ದರು. ನಂತರ ಇಬ್ಬರ ಡಿವೋರ್ಸ್​ ಆದದ್ದು  ಡಿಸೆಂಬರ್ 18, 2021 ರಂದು. ಅಂದಹಾಗೆ ವಹ್ಬಿಜ್​ ಕೂಡ ನಟಿಯೇ. ರಾಬರ್ಟ್ ಪ್ಯಾಟಿನ್ಸನ್ ಮತ್ತು ಕರ್ಸ್ಟನ್ ಸ್ಟೀವರ್ಟ್ ಅವರ ಟ್ವಿಲೈಟ್ ಸರಣಿಯಿಂದ ಸ್ಫೂರ್ತಿ ಪಡೆದ 2010 ರ ಟಿವಿ ಸೀರಿಯಲ್ ‘ಪ್ಯಾರ್ ಕಿ ಯೆ ಏಕ್ ಕಹಾನಿ’ (Pyaar Kii Ye Ek Kahaani ) ಸೆಟ್ ಗಳಲ್ಲಿ ವಿವಿಯನ್ ಮತ್ತು ವಹ್ಬಿಜ್ ಭೇಟಿಯಾದರು. ಮೂರು ವರ್ಷಗಳ ಡೇಟಿಂಗ್ ನಂತರ, ಅವರು 2013 ರಲ್ಲಿ ವಿವಾಹವಾಗಿದ್ದರು.

ಮೊದಲ ರೋಜಾದ ವೀಡಿಯೋ ಶೇರ್ ಮಾಡಿದ ರಾಖಿ ಸಾವಂತ್, ಕಾಲೆಳೆದ ನೆಟ್ಟಿಗರು!
 

Tap to resize

Latest Videos

click me!