ತಲ ಅಜಿತ್ ಖ್ಯಾತಿ ಕುಗ್ಗಿದ್ಯಾ? ಸಿನಿಮಾ ಖರೀದಿಸಲು ವಿತರಕರ ಹಿಂದೇಟು

Published : Nov 03, 2022, 11:53 AM IST
ತಲ ಅಜಿತ್ ಖ್ಯಾತಿ ಕುಗ್ಗಿದ್ಯಾ? ಸಿನಿಮಾ ಖರೀದಿಸಲು ವಿತರಕರ ಹಿಂದೇಟು

ಸಾರಾಂಶ

ತಮಿಳು ಸ್ಟಾರ್ ಅಜಿತ್ ಕುಮಾರ್ ಸಿನಿಮಾದ ಹಕ್ಕು ಖರೀದಿಸಲು ಯಾರು ಮುಂದೆ ಬರುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. 

ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಯಾರಿಗೆ ತಾನೆ ಇಷ್ಟವಿಲ್ಲ. ಸಿನಿಮಾಗಿಂತ ಹೆಚ್ಚಾಗಿ ಸರಳತೆ, ಮಾನವೀಯ ಗುಣಗಳ ಮೂಲಕವೇ ಅಜಿತ್ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಅಭಿಮಾನಿಗಳ ಪ್ರೀತಿಯ ತಲಾ ಸದಾ ಬೈಕ್ ರೈಡ್, ಸೈಕ್ಲಿಂಗ್ ಅಂತ ಬ್ಯುಸಿ ಇರುತ್ತಾರೆ. ರಾಜ್ಯ ರಾಜ್ಯಗಳನ್ನು ಸುತ್ತಾಡುತ್ತಿರುತ್ತಾರೆ. ದೇಶ ವಿದೇಶಗಳಲ್ಲಿ ಸಂಚರಿಸುತ್ತಿರುತ್ತಾರೆ. ಈ ನಡುವೆ ವರ್ಷಕೊಂದು ಸಿನಿಮಾ ಮೂಲಕ ತೆರೆಮೇಲೆ ಮಿಂಚುತ್ತಿರುತ್ತಾರೆ. ಸದ್ಯ ಅಜಿತ್ ತುನಿವು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಮಾಡುವ ಸಾಧ್ಯತೆ ಇದೆ. ಆದರೆ ಈ ಬಿಡುಗಡೆ ಬಗ್ಗೆ ಸಿನಿಮಾತಂಡ ಇನ್ನು ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. 

ಆದರೆ ಈ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿದೆ. ಅಜಿತ್ ಸಿನಿಮಾದ ಹಕ್ಕು ಖರೀದಿಸಲು ಯಾರು ಮುಂದೆ ಬರುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ತಮಿಳುನಾಡಿಲ್ಲ ಈಗಾಗಲೇ ವಿತರಣ ಹಕ್ಕು ಮಾರಾಟವಾಗಿದೆ. ಆದರೆ ಉಳಿದ ರಾಜ್ಯಗಳಲ್ಲಿ ಅಜಿತ್ ಸಿನಿಮಾ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ ಎನ್ನಲಾಗಿದೆ. ಅಜಿತ್ ಸಿನಿಮಾಗಳಿಗೆ ತೆಲುಗಿನಲ್ಲಿ ಹೆಚ್ಚು ಬೇಡಿಕೆ ಇಲ್ಲ. ತೆಲುಗಿನಲ್ಲಿ ಅಜಿತ್ ಸಿನಿಮಾಗಳ ಮಾರುಕಟ್ಟೆ ಕಡಿಮೆ. ಹಾಗಾಗಿ ತೆಲುಗು ರಾಜ್ಯದಲ್ಲಿ ಅಜಿತ್ ಸಿನಿಮಾವನ್ನು ಖರೀದಿಸಲು ಯಾರು ಮುಂದೆ ಬರುತ್ತಿಲ್ಲವಂತೆ. ಹಾಗೆ ಕೇರಳ ಮತ್ತು ಕರ್ನಾಟಕದ ವಿಚಾರದಲ್ಲೂ ಹಾಗೆ. ಹಾಗಾಗಿ ಅಜಿತ್ ಸಿನಿಮಾವನ್ನು  ದೊಡ್ಡ ಮೊತ್ತದ ಬೆಲೆಗೆ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. 

ತಮಿಳುನಾಡು ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಅಜಿತ್ ನಟನೆಯ ತನಿವು ಸಿನಿಮಾಗಿಂತ ದಳಪತಿ ವಿಜಯ್ ನಟನೆಯ ವರಿಸು ಸಿನಿಮಾಗೆ ಹೆಚ್ಚು ಬೇಡಿಕೆ ಇದೆಯಂತೆ. ಹಾಗಾಗಿ ಅಜಿತ್ ಕುಮಾರ್ ಖ್ಯಾತಿ ಕುಗ್ಗಿತ್ತಿದ್ಯಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಇದ್ಯಾವುದಕ್ಕೂ ಅಜಿತ್ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಂದಹಾಗೆ ಅಜಿತ್ ತನ್ನ ಸಿನಿಮಾದ ಯಾವುದೇ ಪ್ರಮೋಷನ್ ಈವೆಂಟ್‌ಗಳಿಗೆ ಹಾಜರಾಗುವುದಿಲ್ಲ.  ಉತ್ತಮ ಸಿನಿಮಾಗಳಿಗೆ ಪ್ರಮೋಷನ್ ಅಗತ್ಯ ವಿಲ್ಲ ಎನ್ನುವುದು ಅಜಿತ್ ಮಾತು. ಹಾಗಾಗಿ ಯಾವುದೇ ಪ್ರಮೋಷನ್ ಈವೆಂಟ್ ಗಳಲ್ಲೂ ಅಜಿತ್ ಹಾಜರಿ ಇರುವುದಿಲ್ಲ. 

ಲಡಾಖ್‌ನಲ್ಲಿ ಕನ್ನಡಿಗನ ಬೈಕ್ ರಿಪೇರಿ ಮಾಡಿಕೊಟ್ಟ ತಲಾ ಅಜಿತ್; ತನ್ನ ದೃಷ್ಟಿಕೋನ ಬದಲಾಯಿತು ಎಂದ ಫ್ಯಾನ್

ವಿಜಯ್ ಸಿನಿಮಾ ರಿಲೀಸ್ ದಿನವೇ ತುನಿವು ಬಿಡುಗಡೆ?

ತುನಿವು ಸಿನಿಮಾದ ಪ್ರಮೋಷನ್ ನಲ್ಲೂ ಅಜಿತ್ ಕಾಣಿಸಿಕೊಳ್ಳುತ್ತಿಲ್ಲ. ಅಂದಹಾಗೆ ಅಜಿತ್ ಅವರ ಈ ಸಿನಿಮಾ ವಿಜಯ್ ನಟನೆಯ ವರಿಸು ಸಿನಿಮಾದ ರಿಲೀಸ್ ಸಮಯದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ. ಒಂದು ವೇಳೆ ನಿರೀಕ್ಷೆಯಂತೆ ಎರಡೂ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದರೆ ತಮಿಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ವಾರ್ ಆಗಲಿದೆ. ಅಂದಹಾಗೆ 2014ರಲ್ಲಿ ಅಜಿತ್ ಮತ್ತು ವಿಜಯ್ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿತ್ತುಯ ವೀರಂ ಮತ್ತು ಜಿಲ್ಲಾ ಸಿನಿಮಾ ಏಕಕಾಲಕ್ಕೆ ತೆರೆ ಬಂದಿತ್ತು. ಇದೀಗ ಅನೇಕ ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರದಲ್ಲಿ ಎದುರು ಬದರಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ.   

'ಅಸುರನ್' ಬಳಿಕ ಮತ್ತೆ ತಮಿಳಿನತ್ತ ಮಂಜು ವಾರಿಯರ್; ಸ್ಟಾರ್ ನಟನಿಗೆ ನಾಯಕಿಯಾದ ಮಲಯಾಳಂ ಸುಂದರಿ

 ಈ ಚಿತ್ರಕ್ಕೆ ಎಚ್​. ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಅಜಿತ್ ಹಾಗೂ ವಿನೋದ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ವಲಿಮೈ ಹಾಗೂ ನೆರ್ಕೊಂಡ ಪಾರವೈ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಮೂರನೇ ಸಿನಿಮಾಗಾಗಿ ಒಂದಾಗುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ದ್ವಿಗುಣಗೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?