ಸತತ ಸೋಲು 'ಮರಾಠಿ'ಗೆ ಅಕ್ಷಯ್ ಕುಮಾರ್ ಜಂಪ್: ಛತ್ರಪತಿ ಶಿವಾಜಿಯಾಗಿ ಮಿಂಚಲು ಸಜ್ಜು

By Shruthi KrishnaFirst Published Nov 3, 2022, 9:48 AM IST
Highlights

ಹಿಂದಿ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ನಟ ಅಕ್ಷಯ್ ಕುಮಾರ್ ಮರಾಠಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಛತ್ರಪತಿ ಶಿವಾಜಿಯಾಗಿ ಮರಾಠಿಯಲ್ಲಿ ಮಿಂಚಲು ಅಕ್ಷಯ್ ಕುಮಾರ್ ಸಜ್ಜಾಗಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. 2022 ಅಕ್ಷಯ್ ಪಾಲಿಗೆ ನಿರಾಶಾದಾಯಕ ವರ್ಷವಾಗಿದೆ. ಈ ವರ್ಷ ತೆರೆಗೆ ಬಂದ ಕಿಲಾಡಿಯ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿರುವ ಅಕ್ಷಯ್ ಕುಮಾರ್ ಅವರ ಮುಂದಿನ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಅಕ್ಷಯ್ ಇದೀಗ ಪಕ್ಕದ ಮರಾಠಿ ಚಿತ್ರರಂಗಕ್ಕೆ ಜಂಪ್ ಆಗಿದ್ದಾರೆ. ಮೊದಲ ಬಾರಿಗೆ ಮರಾಠಿಯಲ್ಲಿ ಬಣ್ಣ ಹಚ್ಚುವ ಮೂಲಕ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಸೋಲಿನಿಂದ ತಪ್ಪಿಸಿಕೊಳ್ಳಲು ಅಕ್ಷಯ್ ಕುಮಾರ್‌ಗೆ ಮರಾಠಿ ಸಿನಿಮಾ ಕೈ ಹಿಡಿಯುತ್ತಾ ಎನ್ನುವ ಕುತೂಹಲ ಮೂಡಿಸಿದೆ.

ಅಂದಹಾಗೆ ಅಕ್ಷಯ್ ಕುಮಾರ್ ಮರಾಠಿಯ ಖ್ಯಾತ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಸಿನಿಮಾ ಮೂಲಕ ಮರಾಠಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಅಕ್ಷಯ್ ಛತ್ರಪತಿ ಕುಮಾರ್ ಛತ್ರಪತಿ ಶಿವಾಜಿ ಮಹಾರಾಜನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ವಸೀಂ ಖುರೇಷಿ ಬಂಡವಾಳ ಹೂಡುತ್ತಿದ್ದಾರೆ. 

ಅಂದಹಾಗೆ ಈ ಸಿನಿಮಾ ಶಿವಾಜಿ ಮಹಾರಾಜನ ಸ್ವರಾಜ್ಯದ ಕನಸನ್ನು ವಾಸ್ತವಕ್ಕೆ ತರುವ ಗುರಿ ಹೊಂದಿದ್ದ ಏಳು ವೀರ ಯೋಧರ ಕಥೆಯನ್ನು ಆಧರಿಸಿದೆ ಎನ್ನಲಾಗಿದೆ.  ಇತಿಹಾಸದ ಅತ್ಯಂತ ಅದ್ಭುತ ಪುಟಗಳಲ್ಲಿ ಒಂದಾಗಿರುವ ಈ ಘಟನೆಯನ್ನು ತೆರೆಮೇಲೆ ತರುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಸಿನಿಮಾತಂಡ ಅಭಿಪ್ರಾಯ ಪಟ್ಟಿದೆ. ಈಗಾಗಲೇ ಸಿನಿಮಾಗೆ ಮುಹೂರ್ತ ಕೂಡ ನೆರವೇರಿದ್ದು ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಮುಂಬೈನಲ್ಲಿ ಅದ್ದೂರಿಯಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. 

ಈ ವೇಳೆ ಮಮಾತನಾಡಿದ ನಟ ಅಕ್ಷಯ್ ಕುಮಾರ್ ಚೊಚ್ಚಲ ಮರಾಠಿ ಸಿನಿಮಾದ ಬಗ್ಗೆ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. 'ಕನಸು ನನಸಾದ ಪಾತ್ರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರನ್ನು ದೊಡ್ಡ ಪರದೆ ಮೇಲೆ ಚಿತ್ರಿಸುವುದು ದೊಡ್ಡ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಈ ಪಾತ್ರ ಮಾಡುವಂತೆ ಕೇಳಿದಾಗ ನಾನು ದಿಗ್ಭ್ರಮೆಗೊಂಡೆ. ಈ ಪಾತ್ರ ನಿರ್ವಹಿಸುತ್ತಿರುವುದು ತುಂಬಾ ಸಂತೋಷವಾಗಿದೆ. ನಾನು ಮೊದಲ ಬಾರಿಗೆ ಮಹೇಸ್ ಮಂಜ್ರೇಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಒಂದ ಅನುಭವವಾಗಲಿದೆ' ಎಂದು ಹೇಳಿದರು. 

ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಳ; ಅಕ್ಷಯ್ ಕುಮಾರ್, ಅನುಪಮ್ ಖೇರ್‌ಗೆ X ಶ್ರೇಣಿ ಸೆಕ್ಯೂರಿಟಿ

ಈ ಬಗ್ಗೆ ಮಾತನಾಡಿದ ನಿರ್ದೇಶಕ ಮಹೇಶ್ ಮಂಜ್ರೇಕರ್, 'ಇದು ಕನಸಿನ ಯೊಜನೆಯಾಗಿದೆ. ಈ ಸಿನಿಮಾಗಾಗಿ ಸತತ 7 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಈ ಸಿನಿಮಾ ಇಲ್ಲಿವರೆಗೂ ತಯಾರಾದ ಸಿನಿಮಾಗಳಲ್ಲಿಯೇ ಅತ್ಯಂತ ದೊಡ್ಡ ಮತ್ತು ಭವ್ಯವಾದ ಮರಾಠಿ ಸಿನಿಮಾವಾಗಲಿದೆ. ರಾಷ್ಟ್ರವ್ಯಾಪಿ ಈ ಸಿನಿಮಾ ಬಿಡುಗಡೆಯಾಗಲಿದೆ. ಛತ್ರಪತಿ ಶಿವಾಜಿ ಮಹಾರಾಜನ ಕಥೆಯನ್ನು ಜನರು ತಿಳಿದುಕೊಳ್ಳಬೇಕು. ಈ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡುತ್ತಿರುವುದು ಖುಷಿಯ ವಿಚಾರ. ಈ ಪಾತ್ರಕ್ಕೆ ಅವರೆ ಪರಿಪೂರ್ಣರು' ಎಂದು ಹೇಳಿದರು.  

ಅಕ್ಷಯ್ ಕುಮಾರ್ ಜೊತೆ ಈ ನಟಿಯರು ಕೆಲಸ ಮಾಡಲು ನಿರಾಕರಿಸಿದ್ದಾರೆ

 ನಟ ಅಕ್ಷಯ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕೊನೆಯದಾಗಿ ರಾಮ್ ಸೇತು ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದದರೆ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣುವಲ್ಲಿ ವಿಫಲವಾಗಿದೆ. ಈ ವರ್ಷ ಅಕ್ಷಯ್ ಕುಮಾರ್ ನಟನೆಯ 5 ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವ ಸಿನಿಮಾಗಳು ಸಹ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಮರಾಠಿ ಸಿನಿಮಾ ಅಕ್ಷಯ್ ಕುಮಾರ್‌ ಅವರನ್ನು ಮತ್ತೆ ಗೆಲುವಿನ ದಾರಿಗೆ ಕೊಂಡೊಯ್ಯುತ್ತಾ ಎಂದು ಕಾದು ನೋಡಬೇಕಿದೆ. 
 

click me!