ಪತ್ನಿ ಸುಂದರಿ, ಮಗಳು ದೇವತೆ; ತಾಯಿ ನಿಶ್ಚಿತಾರ್ಥ ಸೇರೆ ತೊಟ್ಟ ನಿಹಾರಿಕಾ!

Suvarna News   | Asianet News
Published : Dec 07, 2020, 10:57 AM ISTUpdated : Dec 07, 2020, 11:03 AM IST
ಪತ್ನಿ ಸುಂದರಿ, ಮಗಳು ದೇವತೆ; ತಾಯಿ ನಿಶ್ಚಿತಾರ್ಥ ಸೇರೆ ತೊಟ್ಟ ನಿಹಾರಿಕಾ!

ಸಾರಾಂಶ

ನಟಿ ನಿಹಾರಿಕಾ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದ್ದು, ತಾಯಿಯ ನಿಶ್ಚಿತಾರ್ಥದ ಸೀರೆ ತೊಟ್ಟು ಸಂಭ್ರಮಿಸಿದ್ದಾರೆ. ತಂದೆ ನಾಗಬಾಬು ಕಮೆಂಟ್ ಎಲ್ಲರ ಗಮನ ಸೆಳೆದಿದೆ. 

ಡೆಸ್ಟಿನೇಷನ್ ವೆಡ್ಡಿಂಗ್ ತಯಾರಿಯಲ್ಲಿ ಬ್ಯುಸಿಯಲ್ಲಿರುವ ಮದುಮಗಳು ನಿಹಾರಿಕಾ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೊಂದಿಗೆ ವಿಶೇಷ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನಿಹಾರಿಕಾ ಫೋಟೋ ವೈರಲ್ ಆಗುತ್ತಿದ್ದಂತೆ ತಂದೆ ನಾಗಬಾಬು ಕಮೆಂಟ್‌ ಕೂಡ ಸದ್ದು ಮಾಡುತ್ತಿದೆ.

ಮದುಮಗಳ ಲಂಗದೊಳಗೆ ನುಗ್ಗಿದ ಸ್ನೇಹಿತರು; ಸತ್ಯ ತಿಳಿಯಲು ಫೋಟೋ ನೋಡಿ! 

ಡಿಸೆಂಬರ್ 9ರಂದು ಉದಯ್‌ಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಿಹಾರಿಕಾ, ಈಗಾಗಲೇ ರಾಜಸ್ಥಾನಕ್ಕೆ  ಕುಟುಂಬಸ್ಥರ ಜೊತೆ ಪ್ರಯಾಣ ಶುರು ಮಾಡಿದ್ದಾರೆ.  ಸಂಗೀತ ಹಾಗೂ ಮದುವೆಗೆ ಬ್ಯುಸಿನೆಸ್‌ ಮ್ಯಾನ್‌ ಚೈತನ್ಯ ಹಾಗೂ ನಿಹಾರಿಕಾ ವಸ್ತ್ರ ವಿನ್ಯಾಸ ಮಾಡಿಸಿದ್ದಾರೆ.  ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ನಿಹಾರಿಕಾ ತೊಟ್ಟು ಉಡುಗೆಗಳೂ ಸೂಪರ್ಬ್ ಆಗಿವೆ. ಅದರಲ್ಲೂ ನೀಲಿ ಬಣ್ಣದ ಸೀರೆ ತುಂಬಾನೇ ಸ್ಪೆಷಲ್ ಅವರಿಗೆ.

 

ನಿಹಾರಿಕಾ ಡಿಸೈನರ್ ಬ್ಲೌಸ್ ಮಾಡಿಸಿ ಪೂಜೆಗೆ ತೊಟ್ಟಿದ್ದ ನೀಲಿ ಸೀರೆ ಬೇರೆ ಯಾರದ್ದೂ ಅಲ್ಲ, ಅವರ ತಾಯಿಯ ನಿಶ್ಚಿತಾರ್ಥದ ಸೀರೆ. 30 ವರ್ಷ ಈ ಹಳೇ ಸೀರೆಯನ್ನು ತಾಯಿ ಧರಿಸಿದಾಗ ಹೇಗಿತ್ತು, ಹಾಗೂ ಈಗ ಹೇಗಿದೆ ಎಂದು ಎರಡೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. '30 ವರ್ಷ ಹಳೇದು' ಎಂದು ನಿಹಾರಿಕ ಪೋಟೋ ಜೊತೆ ಪೋಸ್ಟ್ ಹಾಗಿದ್ದಾರೆ. ತಂದೆ ನಾಗಬಾಬು 'ನನ್ನ ಪತ್ನಿ ಸುಂದರಿ, ಆದರೆ ನನ್ನ ನಿಹಾ ಮುದ್ದು ಮಗಳು ದೇವತೆ' ಎಂದು ಕಮೆಂಟ್ ಮಾಡಿದ್ದಾರೆ.

ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ನಿಶ್ಚಿತಾರ್ಥ; ಸಂಭ್ರಮ ಹೇಗಿತ್ತು ನೋಡಿ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?